newsfirstkannada.com

ರವಿಶಂಕರ್ ಗುರೂಜಿ ನೇತೃತ್ವದಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ; ಅಮೆರಿಕದಲ್ಲಿ ನಡೆದ ಕಲರ್‌ಫುಲ್ ಕಾರ್ಯಕ್ರಮದ ಟಾಪ್ 10 ಫೋಟೋ ಇಲ್ಲಿವೆ

Share :

Published September 30, 2023 at 4:49pm

Update September 30, 2023 at 5:18pm

    ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ 4ನೇ ವಿಶ್ವ ಸಾಂಸ್ಕೃತಿಕ ಉತ್ಸವ

    180 ದೇಶದ 17 ಸಾವಿರ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

    1000 ಕಲಾವಿದರನ್ನು ಒಳಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರದರ್ಶನ ಅದ್ಭುತ

ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ 4ನೇ ವಿಶ್ವ ಸಾಂಸ್ಕೃತಿಕ ಉತ್ಸವ ಅದ್ಧೂರಿಯಾಗಿ ಆರಂಭವಾಗಿದೆ. 180 ದೇಶದ 17 ಸಾವಿರ ಕಲಾವಿದರು ತಮ್ಮ ಸಾಂಸ್ಕೃತಿಕ ಪ್ರದರ್ಶನ ನೀಡುತ್ತಿದ್ದಾರೆ. ವೈಭವದ ಈ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ 10 ಲಕ್ಷಕ್ಕೂ ಅಧಿಕ ಜನರು ಸಾಕ್ಷಿಯಾಗಿದ್ದಾರೆ.

ವಸುದೈವ ಕುಟುಂಬಕಂ ಅಂದ್ರೆ ಇಡೀ ವಿಶ್ವವೇ ಒಂದು ಕುಟುಂಬ ಅನ್ನೋ ಮೂಲಕ ಆರ್ಟ್ ಆಫ್ ಲಿವಿಂಗ್‌ನ ವಿಶ್ವ ಸಾಂಸ್ಕೃತಿಕ ಉತ್ಸವ 2023ರಲ್ಲಿ ಸಂಗೀತ, ನೃತ್ಯಗಳ ಮೂಲಕ ಏಕತೆ, ಸಾಮರಸ್ಯದ ಜಾಗತಿಕ ಸಂದೇಶವನ್ನು ಸಾರಲಾಗುತ್ತಿದೆ.

ವಾಷಿಂಗ್ಟನ್ ಡಿಸಿಯ ಪ್ರತಿಷ್ಠಿತ ನ್ಯಾಷನಲ್ ಮಾಲ್ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಆರ್ಟ್ ಆಫ್ ಲಿವಿಂಗ್‌ನ ವಿಶ್ವ ಸಾಂಸ್ಕೃತಿಕ ಭವ್ಯ ಉತ್ಸವದಲ್ಲಿ 10 ಲಕ್ಷಕ್ಕೂ ಅಧಿಕ ಜನ ಸಾಕ್ಷಿಯಾಗಿರೋದು ದಾಖಲೆಯಾಗಿದೆ. ಇದು ಜಗತ್ತಿನ ಮಾನವೀಯತೆ, ಶಾಂತಿ ಮತ್ತು ಸಂಸ್ಕೃತಿಗಳ ಅತಿ ದೊಡ್ಡ ಹಬ್ಬವಾಗಿದ್ದು, ವಿಶ್ವದ ವಿವಿಧ ಸಂಸ್ಕೃತಿಗಳು ಒಂದೇ ವೇದಿಕೆಯಲ್ಲಿ ಹೂಗುಚ್ಛದಂತೆ ಅರಳಿದೆ.

ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಜಾಗತಿಕ ಗಣ್ಯರು ಸಾಕ್ಷಿಯಾದರು. ಗ್ರ್ಯಾಮಿ ಪ್ರಶಸ್ತಿ ವಿಜೇತರು ಮತ್ತು ಇತರ ಹೆಸರಾಂತ ಕಲಾವಿದರು ರೋಮಾಂಚನಗೊಳಿಸುವ ಸಂಗೀತ ಮತ್ತು ವರ್ಣರಂಜಿತ ನೃತ್ಯ ಪ್ರದರ್ಶನಗಳನ್ನು ನೀಡಿ ಗಮನ ಸೆಳೆದರು.

ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಮಾತನಾಡಿ ನಮ್ಮ ವೈವಿಧ್ಯತೆಯನ್ನು ಆಚರಿಸಲು ಇದು ಒಂದು ಸುಂದರ ಸಂದರ್ಭವಾಗಿದೆ. ಸಮಾಜದಲ್ಲಿ ಹೆಚ್ಚಿನ ಸಂತೋಷವನ್ನು ತರಲು ನಾವು ಬದ್ಧರಾಗೋಣ. ಎಲ್ಲರ ಮುಖದಲ್ಲೂ ನಗು ಮೂಡಿಸೋಣ. ಅದು ಮಾನವೀಯತೆ. ನಾವೆಲ್ಲರೂ ವಿಭಿನ್ನವಾಗಿದ್ದರೂ, ನಾವೆಲ್ಲರೂ ಒಂದೇ ಎಂದು ಗುರುತಿಸುವುದು ಜಾಣ್ಮೆಯಾಗಿದೆ. ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು. ನಮ್ಮ ಜೀವನವನ್ನು ಸಂಭ್ರಮಿಸೋಣ. ಸವಾಲುಗಳನ್ನು ದಿಟ್ಟತನದಿಂದ ಸ್ವೀಕರಿಸಿ ಎದುರಿಸೋಣ ಮತ್ತು ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಕನಸು ಕಾಣೋಣ ಎಂದು ಕರೆ ನೀಡಿದರು.

ಗ್ರ್ಯಾಮಿ ಪ್ರಶಸ್ತಿ ವಿಜೇತೆ ಚಂದ್ರಿಕಾ ಟಂಡನ್ ಮತ್ತು 200 ಕಲಾವಿದರಿಂದ ಅಮೆರಿಕಾ ದಿ ಬ್ಯೂಟಿಫುಲ್ ಮತ್ತು ವಂದೇ ಮಾತರಂ ಗಾಯನ ಮಾಡಿದರು.

1000 ಜನರನ್ನು ಒಳಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಪಂಚಭೂತಂ ಎಂಬ ಪ್ರದರ್ಶನವೂ ನಡೆಯಿತು.

ಗ್ರ್ಯಾಮಿ ಪ್ರಶಸ್ತಿ ವಿಜೇತ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1000 ಗಿಟಾರ್ ವಾದನ ನಡೆಯಿತು. ಆಫ್ರಿಕಾ, ಜಪಾನ್ ಮತ್ತು ಮಧ್ಯಪ್ರಾಚ್ಯದಿಂದ ಪ್ರದರ್ಶನಗಳು ನಡೆದವು.

ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಮಾತನಾಡಿ, ನೈಸರ್ಗಿಕ ವಿಕೋಪಗಳಾಗಲಿ, ಮಾನವ ನಿರ್ಮಿತವಾದವುಗಳಾಗಲಿ, ಘರ್ಷಣೆಗಳಾಗಲಿ ಅಥವಾ ಅಡೆತಡೆಗಳಾಗಲಿ, ಪರಸ್ಪರ ಅವಲಂಬಿತ ಜಗತ್ತಿನಲ್ಲಿ, ನಾವು ಯಾವಾಗಲೂ ಒಬ್ಬರಿಗೊಬ್ಬರು ಇರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಸ್ಫೂರ್ತಿದಾಯಕ ಉದಾಹರಣೆಯಾಗಿದೆ. ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಅವರು ಇತ್ತೀಚೆಗೆ ಬೀರಿದ ಪ್ರಭಾವವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಇಂದು, ಅವರ ಸಂದೇಶ, ನಿಮ್ಮ ಸಂದೇಶ, ನಮ್ಮ ಸಂದೇಶವು ಕಾಳಜಿ, ಹಂಚಿಕೊಳ್ಳುವಿಕೆ, ಔದಾರ್ಯ, ತಿಳುವಳಿಕೆಯ ಸದ್ಭಾವನೆ ಮತ್ತು ಸಹಕಾರವಾಗಿರಬೇಕು. ಇದುವೇ ನಮ್ಮೆಲ್ಲರನ್ನೂ ಇಲ್ಲಿ ಒಟ್ಟುಗೂಡಿಸಿರುವುದು ಎಂದು ಹೇಳಿದರು.

ವಿಶ್ವ ಸಾಂಸ್ಕೃತಿಕ ಉತ್ಸವದ ಮೊದಲ ದಿನ ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಬಾನ್ ಕಿ-ಮೂನ್, ವಾಷಿಂಗ್ಟನ್‌ ಡಿಸಿಯ ಮೇಯರ್ ಮುರಿಯಲ್ ಬೌಸರ್, ಮಿಚಿಗನ್ ಕಾಂಗ್ರೆಸಿಗ ಶ್ರೀ ಥಾನೆದರ್, ಜಪಾನಿನ ಶಿಕ್ಷಣ, ಸಂಸ್ಕೃತಿ, ಕ್ರೀಡೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಮಾಜಿ ಸಚಿವ, ಸಂಸದ ಶ್ರೀ ಹಕುಬುನ್ ಶಿಮೊಮುರಾ, ಯುಎನ್‌ಇಪಿಯ ಮಾಜಿ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಯುಎನ್‌ಇಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್‌ಹೈಮ್, ಹಾಗೆಯೇ ಮಾಜಿ ಅಂತಾರಾಷ್ಟ್ರೀಯ ಅಭಿವೃದ್ಧಿ ನಾರ್ವೆ ಸಚಿವರು ಮತ್ತು ಇತರ ಜಾಗತಿಕ ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ: 180 ದೇಶ 17 ಸಾವಿರ ಕಲಾವಿದರು.. ಅಮೆರಿಕಾದ ವಾಷಿಂಗ್ಟನ್​ ಡಿಸಿಯಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಭರ್ಜರಿ ತಯಾರಿ

ಅಂತಿಮವಾಗಿ, ‘ಒನ್ ಲವ್’ ಆಚರಣೆಯೊಂದಿಗೆ, ಸ್ಕಿಪ್ ಮಾರ್ಲೆಯವರ ರೆಗ್ಗೀ ರಿದಮ್ಸ್ ಪ್ರದರ್ಶನದೊಂದಿಗೆ ಮೊದಲ ದಿನದ ವಿಶ್ವ ಸಾಂಸ್ಕೃತಿಕ ಉತ್ಸವದ ಕಾರ್ಯಕ್ರಮವು ಮುಕ್ತಾಯಗೊಂಡಿತು. ಸೆಪ್ಟೆಂಬರ್ 29, 30 ಹಾಗೂ ಅಕ್ಟೋಬರ್ 1ರವರೆಗೂ ಈ ಸಾಂಸ್ಕೃತಿಕ ಉತ್ಸವದ ಸಂಭ್ರಮ ಮೇಳೈಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರವಿಶಂಕರ್ ಗುರೂಜಿ ನೇತೃತ್ವದಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ; ಅಮೆರಿಕದಲ್ಲಿ ನಡೆದ ಕಲರ್‌ಫುಲ್ ಕಾರ್ಯಕ್ರಮದ ಟಾಪ್ 10 ಫೋಟೋ ಇಲ್ಲಿವೆ

https://newsfirstlive.com/wp-content/uploads/2023/09/Art-Of-Leaving-Guruji.jpg

Load More