ಅಮೆರಿಕ, ರಷ್ಯಾ, ಚೀನಾ ಅಲ್ಲವೇ ಅಲ್ಲ.. ಈ ದೇಶದ ಸೈನಿಕರಿಗೆ ವಿಶ್ವದಲ್ಲೇ ಅತಿ ಹೆಚ್ಚು ಸಂಬಳ..!

author-image
Ganesh
Updated On
ಅಮೆರಿಕ, ರಷ್ಯಾ, ಚೀನಾ ಅಲ್ಲವೇ ಅಲ್ಲ.. ಈ ದೇಶದ ಸೈನಿಕರಿಗೆ ವಿಶ್ವದಲ್ಲೇ ಅತಿ ಹೆಚ್ಚು ಸಂಬಳ..!
Advertisment
  • ಯಾವ ದೇಶದ ಸೈನಿಕರು ಎಷ್ಟು ಸಂಬಳ ಪಡೆಯುತ್ತಾರೆ..?
  • ಚೀನಾ ದೇಶ ತನ್ನ ಸೈನಿಕರಿಗೆ ಎಷ್ಟು ಸಂಬಳ ನೀಡುತ್ತದೆ
  • ಯುದ್ಧದಲ್ಲಿ ಭಾಗಿಯಾದ್ರೆ ರಷ್ಯಾ ಸೈನಿಕರಿಗೆ ದುಪ್ಪಟ್ಟು ಹಣ

ದೇಶದ ಭದ್ರತೆಯ ವಿಚಾರ ಬಂದಾಗ, ಮೊದಲು ನೆನಪಿಗೆ ಬರುವುದು ದೇಶದ ಸೈನಿಕರು. ನಾವು ನಮ್ಮ ಮನೆಗಳಲ್ಲಿ ಶಾಂತಿಯುತವಾಗಿ ಮಲಗಿದ್ದೇವೆ, ನೆಮ್ಮದಿಯಾಗಿ ಜೀವಿಸುತ್ತಿದ್ದೇವೆ ಅಂದರೆ ಅದಕ್ಕೆ ಕಾರಣ ನಮ್ಮ ಸೈನಿಕರು. ಗಾಳಿ, ಮಳೆ, ಬಿಸಿಲು ಏನೇ ಇರಲಿ 24 x7 ಗಡಿಯಲ್ಲಿ ನಿಂತು ನಮ್ಮ ನೆಲ, ಪ್ರಜೆಗಳನ್ನು ರಕ್ಷಿಸುವವರು ನಮ್ಮ ಸೈನಿಕರು. ಅಂತಹ ಪರಿಸ್ಥಿತಿಯಲ್ಲಿ ಅವರ ತ್ಯಾಗ, ಸಮರ್ಪಣೆಗೆ ಪ್ರತಿಯಾಗಿ ಅವರಿಗೆ ಸಿಗಬೇಕಾದಷ್ಟು ಗೌರವ ಮತ್ತು ಸಂಬಳ ಸಿಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇತ್ತೀಚೆಗೆ, ವರ್ಲ್ಡ್​ ಆಫ್ ಸ್ಟ್ಯಾಟಿಸ್ಟಿಕ್ಸ್​ ವರದಿಯು ಪ್ರಪಂಚದಾದ್ಯಂತ ಯಾವ ದೇಶದ ಸೈನಿಕರು ಎಷ್ಟು ಸಂಬಳ ಪಡೆಯುತ್ತಾರೆ ಎಂಬುದನ್ನು ಬಹಿರಂಗ ಪಡಿಸಿದೆ. ಸೈನಿಕರಿಗೆ ನೀಡುತ್ತಿರುವ ಸಂಬಳ ನೋಡಿದ್ರೆ ಆಶ್ಚರ್ಯವೆನಿಸುತ್ತದೆ. ಯಾಕೆಂದರೆ ಕೆಲವು ಚಿಕ್ಕ ಆದರೆ ಶ್ರೀಮಂತ ದೇಶಗಳು ತಮ್ಮ ಸೈನಿಕರಿಗೆ ಉತ್ತಮ ಸಂಬಳ ನೀಡುತ್ತಿವೆ. ಆದರೆ ದೊಡ್ಡ ದೊಡಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಈ ವಿಷಯದಲ್ಲಿ ಹಿಂದುಳಿದಿವೆ.

ಸೈನಿಕರಿಗೆ ಅತಿ ಹೆಚ್ಚು ಸಂಬಳ ನೀಡುವ ದೇಶ ಸ್ವಿಟ್ಚರ್ಲೆಂಡ್

ಮಿಲಿಟರಿ ಶಕ್ತಿ ಅಥವಾ ರಕ್ಷಣೆಯ ಬಗ್ಗೆ ಮಾತನಾಡುವಾಗಲೆಲ್ಲ ಅಮೆರಿಕ ಮತ್ತು ರಷ್ಯಾದ ಹೆಸರು ಮೊದಲು ಬರುತ್ತವೆ. ಆದರೆ ಈ ವರದಿಯ ಪ್ರಕಾರ, ವಿಶ್ವದ ಅತಿ ಹೆಚ್ಚು ಸಂಬಳ ಪಡೆಯುವವರು ಸ್ವಿಟ್ಜರ್​ಲ್ಯಾಂಡ್ ಸೈನಿಕರು. ಇಲ್ಲಿ ಸೈನಿಕನ ಸರಾಸರಿ ಮಾಸಿಕ ವೇತನ 6,298 ಡಾಲರ್ ಅಂದರೆ ಸುಮಾರು 5.21 ಲಕ್ಷ ರೂಪಾಯಿಗಳು. ಬಹುಶಃ ಭಾರತದಲ್ಲಿ ಸರ್ಕಾರಿ ಅಧಿಕಾರಿಯೂ ಸಹ ಇಷ್ಟೊಂದು ಸಂಬಳ ಪಡೆಯುವುದಿಲ್ಲ. ಸ್ವಿಟ್ಜರ್​ಲೆಂಡ್ ಉತ್ತಮ ಗುಣಮಟ್ಟ, ಬಲವಾದ ರಕ್ಷಣಾ ನೀತಿಗೆ ಹೆಸರುವಾಸಿ.

ಲಕ್ಸೆಂಬರ್ಗ್​ 2ನೇ ಸ್ಥಾನ, ಸಿಂಗಾಪುರಕ್ಕೆ 3ನೇ ಸ್ಥಾನ

ಸೈನಿಕರ ಸಂಬಳ ವಿಚಾರಕ್ಕೆ ಲಕ್ಸೆಂಬರ್ಗ್​ 2ನೇ ಸ್ಥಾನದಲ್ಲಿದೆ. ಲಕ್ಸೆಂಬರ್ಗ್​ ಸೈನಿಕರು ಪ್ರತಿ ತಿಂಗಳು ಸರಾಸರಿ 5,122 ಡಾಲರ್ ಸಂಬಳ ಪಡೆಯುತ್ತಾರೆ. ಅಂದರೆ 4 ಲಕ್ಷ 24 ಸಾವಿರ 126 ರೂ. ಮತ್ತೊಂದೆಡೆ, ಏಷ್ಯಾದ ಪ್ರಬಲ ರಾಷ್ಟ್ರ ಸಿಂಗಾಪುರ 3ನೇ ಸ್ಥಾನದಲ್ಲಿದೆ. ಅಲ್ಲಿ ತೆರಿಗೆ ಕಡಿತದ ನಂತರವೂ ಸೈನಿಕರು ಸುಮಾರು 4,990 ಡಾಲರ್ ಮಾಸಿಕ ಸಂಬಳ ಪಡೆಯುತ್ತಾರೆ. ಅಂದರೆ 4 ಲಕ್ಷ 14 ಸಾವಿರ 170 ರೂ.

ಇದನ್ನೂ ಓದಿಕೆಲಸಕ್ಕಾಗಿ ಮತ್ತೆ ಕಂಪನಿ ಸೇರಿದ ರಿಷಿ ಸುನಕ್.. ಬ್ರಿಟಿಷ್ ಮಾಜಿ ಪ್ರಧಾನಿಗೆ ಸಂಬಳ ಎಷ್ಟು ಕೊಡಬಹುದು..?

publive-image

ಅಮೇರಿಕಾದ ಸೈನಿಕರ ಮಾಸಿಕ ಸಂಬಳ ಸರಾಸರಿ 1,66,000 ರೂಪಾಯಿಯಿಂದ 1,83,000 ರೂಪಾಯಿವರೆಗೆ ಇದ್ದರೆ ರಷ್ಯಾದ ಸೈನಿಕರ ಸರಾಸರಿ ಸಂಬಳವು ಯುದ್ಧದಲ್ಲಿ ಭಾಗಿಯಾಗುವಿಕೆ ಮತ್ತು ಕರ್ತವ್ಯದ ಸ್ಥಳದ ಮೇಲೆ ನಿರ್ಧಾರ ಆಗುತ್ತದೆ. ರಷ್ಯಾ ಸೈನಿಕರ ಸರಾಸರಿ ಮಾಸಿಕ ಸಂಬಳ 27 ಸಾವಿರ ದಿಂದ 43 ಸಾವಿರ ವರೆಗೆ ಮತ್ತು ಯುದ್ಧದಲ್ಲಿ ಭಾಗಿಯಾಗುವವರಿಗೆ ಮಾಸಿಕ 1.35 ಲಕ್ಷ ದಿಂದ 2.25 ಲಕ್ಷದವರೆಗೆ ಸಂಬಳ ಇದೆ.

ಚೀನಾ ಸೈನಿಕರ ಸರಾಸರಿ ಮಾಸಿಕ ವೇತನ 1,002 ಡಾಲರ್ ಆಗಿದೆ. ಇದು ಭಾರತದ ಸೈನಿಕರ ಮಾಸಿಕ ವೇತನಕ್ಕಿಂತ 2 ಪಟ್ಟು ಹೆಚ್ಚು. ದಕ್ಷಿಣ ಆಫ್ರಿಕಾದಲ್ಲಿ ಸೈನಿಕರ ಮಾಸಿಕ ವೇತನ 1,213 ಡಾಲರ್ ಇದೆ. ವರ್ಲ್ಡ್​ ಆಫ್ ಸ್ಟ್ಯಾಟಿಸ್ಟಿಕ್ಸ್​ ವರದಿಯ ಪ್ರಕಾರ ಭಾರತವು ಸೈನಿಕರ ಸಂಬಳ ನೀಡುವ ಪಟ್ಟಿಯಲ್ಲಿ 64ನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಒಬ್ಬ ಸೈನಿಕನ ಸರಾಸರಿ ಮಾಸಿಕ ವೇತನ 594 ಡಾಲರ್. ಅಂದರೆ 49,227 ರೂ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ.. SSLC ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್​​ನ್ಯೂಸ್!​​

ಮತ್ತೊಂದೆಡೆ ನೆರೆಯ ಬಾಂಗ್ಲಾದೇಶ, ಪಾಕಿಸ್ತಾನ ಎರಡೂ ದೇಶಗಳು ನಮ್ಮ ದೇಶಕ್ಕಿಂತ ಹಿಂದಿವೆ. ಬಾಂಗ್ಲಾದಲ್ಲಿ ಸೈನಿಕನ ಮಾಸಿಕ ವೇತನ 251 ಡಾಲರ್. ಪಾಕಿಸ್ತಾನದಲ್ಲಿ ಸೈನಿಕನ ಮಾಸಿಕ ವೇತನ 159 ಡಾಲರ್. ಅಂದರೆ ತಿಂಗಳಿಗೆ ಸುಮಾರು 13,175 ರೂ. ಮಾತ್ರ.

ವಿಶೇಷ ವರದಿ: ಜಿ.ವಿಶ್ವನಾಥ್, ಸೀನಿಯರ್ ಕಾಪಿ ಎಡಿಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment