/newsfirstlive-kannada/media/post_attachments/wp-content/uploads/2024/06/Darshan-Arrest-Case-7.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಗ್ಯಾಂಗ್ ಈಗ ಬೇರೆ, ಬೇರೆ ಆಗಿದೆ. ದರ್ಶನ್ ಸೇರಿ 4 ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್‌ನಲ್ಲಿ ಇದ್ರೆ 12 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಇಂದು ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ:ದರ್ಶನ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲು.. ಒಂದಲ್ಲ, ಬರೋಬ್ಬರಿ 16 ಕಾರಣಗಳು! ಏನವು?
ರೇಣುಕಾಸ್ವಾಮಿ ಕೊಲೆ ನಡೆದ ದಿನ ದರ್ಶನ್ ಗ್ಯಾಂಗ್‌ನಲ್ಲಿ ನಟ ಪ್ರದೂಶ್ ಕೂಡ ಇದ್ದರು. A14 ಪ್ರದೂಶ್ ಜೊತೆ ಇನ್ನೊಬ್ಬ ವ್ಯಕ್ತಿ ಕೊಲೆ ನಡೆದ ಸ್ಥಳಕ್ಕೆ ಹೋಗಿದ್ದಾನೆ. ಆದರೆ ಈವರೆಗೂ ಪ್ರದೂಶ್ ಆ ವ್ಯಕ್ತಿ ಯಾರು ಅನ್ನೋದರ ಬಗ್ಗೆ ಬಾಯಿ ಬಿಟ್ಟಿಲ್ಲ. ತನಿಖೆಗೆ ಪ್ರದೂಶ್ ಸಹಕರಿಸದ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್, ಪ್ರದೂಶ್ ಸೇರಿ ನಾಲ್ವರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಕೇಳಿದ್ದಾರೆ.
ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಕೊಲೆಯಲ್ಲಿ ಕರೆಂಟ್ ಶಾಕ್ ಕೊಡಲಾಗಿದೆ. ಆದರೆ ಇದುವರೆಗೂ ಎಲೆಕ್ಟ್ರಿಕ್ ಟಾರ್ಚ್ ಎಲ್ಲಿ ಖರೀದಿ ಮಾಡಿದ್ರು ಅನ್ನು ಮಾಹಿತಿ ಪತ್ತೆಯಾಗಿಲ್ಲ. ಇದರ ಬಗ್ಗೆಯೂ ಪೊಲೀಸರು ನ್ಯಾಯಾಲಯಕ್ಕೆ ಇಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 39 ರಕ್ತ, ಸಿಕ್ತ ಗುರುತು.. ದರ್ಶನ್ ಗ್ಯಾಂಗ್ ಕೌರ್ಯಕ್ಕೆ ದಂಗಾದ ವೈದ್ಯರು; ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ!
ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ಆರೋಪಿಗಳನ್ನು ಯಾಕೆ ಕಸ್ಟಡಿಗೆ ಪಡೆಯಲಾಗಿದೆ ಅನ್ನೋ ಇಂಚಿಂಚು ಮಾಹಿತಿಯನ್ನು ದಾಖಲು ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ಬಗ್ಗೆ ವಿನಯ್ ಮೊಬೈಲ್‌ನಲ್ಲಿ ಅಸಲಿ ವಿಡಿಯೋ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಇದನ್ನ ಯಾರು ಕಳಿಸಿದ್ದರು ಅನ್ನೋ ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿಲ್ಲ.
ರೇಣುಕಾಸ್ವಾಮಿ ಕೊಲೆ ಆರೋಪಿಗಳು ಈಗಾಗಲೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಶುರು ಮಾಡಿದ್ದಾರೆ. ಶೆಡ್‌ನಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಹಣ ನೀಡಿ ಆಮಿಷವೊಡ್ಡಲಾಗುತ್ತಿದೆ. ದರ್ಶನ್ ಕೇಶವಮೂರ್ತಿಗೆ ಐದು ಲಕ್ಷ ಹಣ ನೀಡಿದ್ದಾರೆ. ಅದನ್ನ ಎತ್ತಿಕೊಂಡು ಕೇಶವಮೂರ್ತಿ ಸ್ನೇಹಿತ ಪರಾರಿಯಾಗಿದ್ದಾನೆ ಎನ್ನುವ ಸ್ಫೋಟಕ ಮಾಹಿತಿಯನ್ನು ಪೊಲೀಸರು ಇಂದು ನ್ಯಾಯಾಲಯದ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನ ತನಿಖೆಯಲ್ಲಿ ಪೊಲೀಸರು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಸತತ 10 ದಿನಗಳಿಂದ ಆರೋಪಿಗಳ ವಿಚಾರಣೆ ನಡೆಸಿದ್ದ ಪೊಲೀಸರು ಇಂದು ಕೋರ್ಟ್‌ಗೆ ಹಾಜರುಪಡಿಸಿದ್ದರು. ಆರೋಪಿಗಳ ಪೈಕಿ A1 ಪವಿತ್ರಾ ಗೌಡ ಅವರನ್ನು ಇಂದು ಪೊಲೀಸರು ತಮ್ಮ ಕಸ್ಟಡಿಗೆ ಕೇಳಲೇ ಇಲ್ಲ. ಇದಕ್ಕೆ ಹಲವು ಕಾರಣಗಳನ್ನು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿರುವ ಪೊಲೀಸರು ಪವಿತ್ರಾಗೌಡ & ಇತರರಿಗೆ ನ್ಯಾಯಾಂಗ ಬಂಧನ ಆಗುವಂತೆ ಮಾಡಿದ್ದಾರೆ. ಜೈಲು ಪಾಲಾದ ಆರೋಪಿಗಳು ಯಾರು? ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳು ಯಾರು ಅನ್ನೋ ವಿವರ ಇಲ್ಲಿದೆ.
ಜೈಲು ಪಾಲಾದ ಆರೋಪಿಗಳು
A1 – ಪವಿತ್ರಾ ಗೌಡ
A3 – ಪವನ್
A4 ರಾಘವೇಂದ್ರ
A5 ನಂದೀಶ
A6 ಜಗದೀಶ @ ಜಗ್ಗ
A7 ಅನು@ ಅನು ಕುಮಾರ್
A11 – ನಾಗರಾಜ್
A12 – ಲಕ್ಷ್ಮಣ್
A13 – ದೀಪಕ್
A16 – ಕೇಶವಮೂರ್ತಿ
A8 – ರವಿ (ಈಗಾಗಲೇ ಜೈಲಿನಲ್ಲಿ ಇದ್ದಾರೆ)
A15 – ಕಾರ್ತಿಕ್ (ಈಗಾಗಲೇ ಜೈಲಿನಲ್ಲಿ ಇದ್ದಾರೆ)
ಪೊಲೀಸ್ ಕಸ್ಟಡಿಗೆ
A2 – ದರ್ಶನ್
A9 – ಧನರಾಜ್
A10 – ವಿನಯ್
A14 – ಪ್ರದೂಶ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ