newsfirstkannada.com

ನಾಸಿಕ್‌ನಲ್ಲಿ ಖುದ್ದು ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಧಾನಿ ಮೋದಿ; ಟಾಪ್ 10 ಫೋಟೋ ಇಲ್ಲಿವೆ

Share :

Published January 12, 2024 at 4:44pm

  ನಾಸಿಕ್‌ನ ಕಲಾರಾಮ್ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ

  ನಿತ್ಯ ಪ್ರಾಣಾಯಾಮ, ಯೋಗ, ಉಪವಾಸ ಮಾಡಲು ಮೋದಿ ಕರೆ

  ಪಂಚವಟಿಯ ಗುಡಿಸಲಿನಲ್ಲಿ ಹೆಚ್ಚು ಕಾಲ ಇದ್ದ ರಾಮ, ಲಕ್ಷ್ಮಣ, ಸೀತೆ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕೇವಲ 11 ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ಇಡೀ ದೇಶ ಆ ಅದ್ಭುತ ಗಳಿಗೆಗಾಗಿ ಕಾದು ಕೂತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸಂದೇಶವನ್ನು ರಾಮ ಭಕ್ತರಿಗೆ ಇಂದು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ 11 ದಿನಗಳ ಉಪವಾಸವನ್ನು ಮಹಾರಾಷ್ಟ್ರದ ನಾಸಿಕ್‌ನಿಂದ ಆರಂಭಿಸಿದ್ದಾರೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವ ಹಿನ್ನೆಲೆಯಲ್ಲಿ ಮೋದಿ ವಿಶೇಷ ವ್ರತ ಮಾಡಲು ಸಂಕಲ್ಪ ಮಾಡಲು ನಿರ್ಧರಿಸಿದ್ದಾರೆ.

ನಾಸಿಕ್‌ನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಸದ್ಯ ಮೋದಿ ಅವರು ನಾಸಿಕ್‌ನಲ್ಲಿರುವ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಸ್ಥಾನದಲ್ಲಿ ದೇವರ ದರ್ಶನ ಮತ್ತು ವಿಶೇಷ ಪೂಜೆ ಮಾಡುವ ವ್ರತ ಆರಂಭಿಸಿದ್ದಾರೆ.

ಪ್ರಧಾನಿ ಮೋದಿ ಪಂಚವಟಿ ವಿಶೇಷ ಪೂಜೆ ಮಾಡಿಸುತ್ತಿರುವುದಕ್ಕೆ ಕಾರಣ ಏನು?

14 ವರ್ಷಗಳ ವನವಾಸ ಆರಂಭಿಸಿದ ರಾಮ, ಲಕ್ಷ್ಮಣ, ಸೀತೆ ಹೆಚ್ಚಿನ ಸಮಯವನ್ನು ದಂಡಾರಣ್ಯದಲ್ಲಿ ಕಳೆದಿದ್ದರು. ಅದರಲ್ಲೂ ಪಂಚವಟಿಯಲ್ಲಿ ಪರ್ಣ ಕುಟೀರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಐದು ಆಲದಮರಗಳು ಇದ್ದ ಕಾರಣ ಈ ಜಾಗಕ್ಕೆ ಪಂಚವಟಿ ಎಂಬ ಹೆಸರು ಬಂದಿತ್ತು. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಈ ಜಾಗದಲ್ಲಿ ಕಳೆದಿದ್ದರು. ಹೀಗಾಗಿ ನಾಸಿಕ್‌ನಲ್ಲಿರುವ ರಾಮಾಯಣ ಕಾಲದ ಪಂಚವಟಿ ದೇವಸ್ಥಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಪಂಚವಟಿಯು ಹಿಂದೂಗಳಿಗೆ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ರಾಮ, ತಾಯಿ ಸೀತೆ ಮತ್ತು ಲಕ್ಷ್ಮಣನಿಗೆ ಅರ್ಪಿತವಾದ ಅನೇಕ ದೇವಾಲಯಗಳನ್ನು ಹೊಂದಿದೆ. ಇಲ್ಲಿ ಗೋದಾವರಿ ನದಿ ಹರಿಯುತ್ತದೆ. ಗೋದಾವರಿ ನದಿಯಲ್ಲಿ ಸ್ನಾನ ಮಾಡುವುದನ್ನೂ ಮಂಗಳಕರವೆಂದು ಪರಿಗಣಿಸಲಾಗಿದೆ. ಇಲ್ಲಿ 12 ವರ್ಷಗಳಿಗೊಮ್ಮೆ ಕುಂಭಮೇಳವೂ ನಡೆಯುತ್ತದೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರಧಾನಿ ಮೋದಿ ಭರ್ಜರಿಯಾಗಿ ರೋಡ್ ಶೋ ನಡೆಸಿದರು. ಬಳಿಕ ನಾಸಿಕ್‌ನಲ್ಲಿರುವ ರಾಮಾಯಣ ಕಾಲದ ಪಂಚವಟಿ ದೇವಾಲಯದ ಆವರಣವನ್ನು ಪ್ರಧಾನಿ ಮೋದಿ ಅವರು ನೀರಿನಿಂದ ಸ್ವಚ್ಛಗೊಳಿಸಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

‘ಅಮೃತ್ ಕಾಲ’ ದೇಶದ ಯುವಕರಿಗೆ ಸುವರ್ಣ ಯುಗ ಎಂದು ಪ್ರಧಾನಿ ಮೋದಿ ಕರೆದಿದ್ದಾರೆ. ಯುವ ಶಕ್ತಿಯಿಂದಾಗಿ ಭಾರತವು ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.ಇಂದು ಭಾರತದ ಯುವ ಶಕ್ತಿಯ ದಿನ. ಗುಲಾಮಗಿರಿಯ ದಿನಗಳಲ್ಲಿ ಭಾರತವನ್ನು ಹೊಸ ಚೈತನ್ಯವನ್ನು ತುಂಬಿದ ಮಹಾನ್ ವ್ಯಕ್ತಿಗೆ ಈ ದಿನವನ್ನು ಅರ್ಪಿಸಲಾಗಿದೆ. ಸ್ವಾಮಿ ವಿವೇಕಾನಂದರ ಜನ್ಮದಿನದಂದು ನಾನು ಇಲ್ಲಿಗೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ.

ರಾಷ್ಟ್ರೀಯ ಯುವ ದಿನದ ಶುಭಾಶಯಗಳು. ಭಾರತವು ವಿಶ್ವದ ಟಾಪ್ 3 ಸ್ಟಾರ್ಟ್-ಅಪ್ ವ್ಯವಸ್ಥೆಗಳಲ್ಲಿ ಒಂದಾಗಿದೆ. ಭಾರತವು ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಭಾರತವು ದಾಖಲೆಯ ಪೇಟೆಂಟ್‌ಗಳನ್ನು ಸಲ್ಲಿಸುತ್ತಿದೆ. ಈ ಎಲ್ಲದರ ಹಿಂದೆ ದೇಶದ ಯುವಜನತೆ ಇದೆ. ಅಮೃತ್ ಕಾಲ್ ಸುವರ್ಣ ಯುಗವೇ ದೇಶದ ಯುವಕರು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಕೇವಲ 11 ದಿನಗಳು ಮಾತ್ರ ಉಳಿದಿವೆ. ಈ ಸುಸಂದರ್ಭಕ್ಕೆ ನಾನೂ ಸಹ ಸಾಕ್ಷಿಯಾಗಿರುವುದು ನನ್ನ ಅದೃಷ್ಟ. ಪವಿತ್ರೀಕರಣದ ಸಮಯದಲ್ಲಿ ಭಾರತದ ಎಲ್ಲಾ ಜನರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು ಸಾಧನವನ್ನಾಗಿ ಮಾಡಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ 11 ದಿನಗಳ ವಿಶೇಷ ಆಚರಣೆ ಆರಂಭಿಸುತ್ತಿದ್ದೇನೆ. ನಾನು ಎಲ್ಲ ಜನರ ಆಶೀರ್ವಾದವನ್ನು ಕೇಳುತ್ತಿದ್ದೇನೆ. ಈ ಕ್ಷಣದಲ್ಲಿ, ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಸಿಕ್‌ನಲ್ಲಿ ಖುದ್ದು ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಧಾನಿ ಮೋದಿ; ಟಾಪ್ 10 ಫೋಟೋ ಇಲ್ಲಿವೆ

https://newsfirstlive.com/wp-content/uploads/2024/01/pm-modi-nasik-1.jpg

Load More