/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಸ್ನೇಹಿತರಿಂದ ಸಹಾಯ, ಅನುಕೂಲ ಸಿಗಬಹುದು
- ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು
- ವಿಶೇಷ ಸ್ಥಾನಮಾನ ಲಭ್ಯ
- ಬೇರೆಯವರ ನಾಟಕೀಯ ಮಾತಿಗೆ ಮರುಳಾಗಬೇಡಿ
- ವ್ಯಾಪಾರದಲ್ಲಿ ಅನುಕೂಲವಿದೆ
- ಹಿರಿಯರ ಮಾತಿಗೆ ಗೌರವ ನೀಡಿ
- ಇಷ್ಟ ದೇವತಾ ಆರಾಧನೆ ಮಾಡಿ
ವೃಷಭ
- ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ
- ವಿವಾಹ ವಿಚಾರದ ಬಗ್ಗೆ ಚರ್ಚೆ ನಡೆಯಬಹುದು
- ದಾನ ಧರ್ಮ ವಿಚಾರದಲ್ಲಿ ಆಸಕ್ತಿ
- ಇಂದು ವಕೀಲರಿಗೆ ಶುಭದಿನ
- ಸಂಶೋಧಕರಿಗೆ ವಿಶೇಷ ಗೌರವ ಸಿಗಬಹುದು
- ಬದಲಾವಣೆಯ ಆಲೋಚನೆ ಮಾಡಬಹುದು
- ಕುಲದೇವತಾ ಆರಾಧನೆ ಮಾಡಿ
ಮಿಥುನ
- ವಿದ್ಯಾರ್ಥಿಗಳಿಗೆ ಶುಭದಿನ
- ಹಿತ ಶತ್ರುಗಳಿಂದ ತೊಂದರೆಯ ಸಂಭವ
- ಅನಿರೀಕ್ಷಿತ ಪ್ರಯಾಣ ಮಾಡಬಹುದು
- ಮಹಿಳೆಯರಿಗೆ ವಂಚನೆ ಸಾಧ್ಯತೆ ಇದೆ
- ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ವಿವಾದ ಅಂತ್ಯವಾಗಬಹುದು
- ತಾಯಿಯವರ ಆರೋಗ್ಯ ಗಮನಿಸಿ
- ಮೃತ್ಯುಂಜಯ ಜಪ ಪೂಜೆ ಮಾಡಿ
ಕಟಕ
- ಅನಾವಶ್ಯಕ ದ್ವೇಷ ಸಾಧನೆ ಮಾಡುತ್ತೀರಿ
- ಮಿತ್ರರಲ್ಲಿ ಕಲಹ, ಮನಸ್ತಾಪ ಉಂಟಾಗಬಹುದು
- ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
- ಇಂದು ಕೃಷಿಕರಿಗೆ ಲಾಭವಿದೆ
- ಮಕ್ಕಳಿಂದ ನೋವು, ಬೇಸರವಾಗಬಹುದು
- ಹೊಸ ಕಾರ್ಯಗಳು ನಿಧಾನವಾಗಿ ಬೇಸರವಾಗಬಹುದು
- ದುರ್ಗಾದೇವಿ ಆರಾಧನೆ ಮಾಡಿ
ಸಿಂಹ
- ಯತ್ನ ಕಾರ್ಯದಲ್ಲಿ ಜಯವಾಗಬಹುದು
- ಇಂದು ಅತಿಯಾದ ಒತ್ತಡ ಇರುತ್ತದೆ
- ಅಪಮಾನಕ್ಕೆ ಅವಕಾಶ ಕೊಡಬೇಡಿ
- ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ
- ಕಠಿಣ ನಿರ್ಧಾರಗಳಿಂದ ಉತ್ತಮ ಫಲ ಇಲ್ಲ
- ನಿರ್ಲಕ್ಷ್ಯದಿಂದ ಅನಾರೋಗ್ಯ ಸಮಸ್ಯೆ ಕೊಡಬಹುದು
- ಶರಭೇಶ್ವರನನ್ನ ಆರಾಧನೆ ಮಾಡಿ
ಕನ್ಯಾ
- ಮನೆಯಲ್ಲಿ ಶುಭಕಾರ್ಯದ ಚರ್ಚೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲದ ದಿನ
- ಆರ್ಥಿಕವಾಗಿ ತೊಂದರೆ ಇಲ್ಲ
- ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ
- ಹೊಸ ಸಂಬಂಧದಲ್ಲಿ ಕಿರಿಕಿರಿ ಉಂಟಾಗಬಹುದು
- ಮಾನಸಿಕ ದುರಾಲೋಚನೆಯಿಂದ ಹೊರ ಬರಬೇಕು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಪ್ರೀತಿ ಪಾತ್ರರ, ಗೆಳೆಯರ ಭೇಟಿಯಾಗಬಹುದು
- ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸುವಿರಿ
- ಮನಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ
- ಆದಾಯದಷ್ಟೇ ಖರ್ಚು ಕೂಡ ಇರುತ್ತದೆ
- ದೊಡ್ಡವರ ಸಲಹೆ ಮುಖ್ಯವಾಗುತ್ತದೆ
- ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಅತಿಯಾದ ಮಾನಸಿಕ ಒತ್ತಡ
- ವಿರೋಧಿಗಳಿಂದ ತೊಂದರೆ ಇದೆ
- ಅಕಾಲ ಭೋಜನ ಆಲಸ್ಯ ಉಂಟಾಗಬಹುದು
- ಹೊಸ ವಿಷಯಗಳು ಅನುಭವಕ್ಕೆ ಬರುತ್ತದೆ
- ಅಪರಿಚಿತರಿಂದ ಮೋಸದ ಸಾಧ್ಯತೆ ಇದೆ
- ಜೀವನ ಶೈಲಿ ಬದಲಾಗುವ ದಿನ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಹಣಕಾಸಿನ ಸಮಸ್ಯೆ ಕಾಡಬಹುದು
- ಕ್ಷೇತ್ರ ದರ್ಶನದ ಬಗ್ಗೆ ಚಿಂತನೆ ನಡೆಸಬಹುದು
- ಅವಿವಾಹಿತರಿಗೆ ಮದುವೆ ವಿಚಾರ ಬರಬಹುದು
- ಮಾನಸಿಕ ದೌರ್ಬಲ್ಯದಿಂದ ಕೊರಗಬೇಡಿ
- ಮಕ್ಕಳಿಂದ ಸ್ವಲ್ಪ ಸಮಾಧಾನ ಸಿಗಬಹುದು
- ನಿಮ್ಮನ್ನ ನೀವೇ ಹೊಗಳಿಕೊಳ್ಳಬೇಡಿ, ಆತ್ಮ ಪ್ರಶಂಸೆ ಬೇಡ
- ವಿಘ್ನೇಶ್ವರನ ಮಂತ್ರ ಪಠಣೆ ಮಾಡಿ
ಮಕರ
- ಸ್ಥಳ ಬದಲಾವಣೆ ಆಗಬಹುದು
- ಸಾಲ ವಿಚಾರದಲ್ಲಿ ಬೇಸರ
- ವಿವಾದಗಳಿಗೆ ಆಸ್ಪದ ಕೊಡಬೇಡಿ
- ಸಹನೆ ಅಥವಾ ತಾಳ್ಮೆ ಕಳೆದುಕೊಳ್ಳಬೇಡಿ
- ಕೈ ಹಾಕಿದ ಕೆಲಸಗಳಿಗೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು
- ಮಾನಸಿಕ ಸ್ಥಿರತೆ ಇರಲಿ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಕುಂಭ
- ಅನಗತ್ಯ ಖರ್ಚಿಗೆ ನೂರಾರು ದಾರಿ
- ಅಪರಿಚಿತರಿಗೆ ಸಹಾಯ ಮಾಡಿ
- ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ದೂರ ಪ್ರಯಾಣದ ಸಂಭವ ಇದೆ
- ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಕಾಡಬಹುದು
- ವಿಲಾಸಿ ಜೀವನಕ್ಕೆ ದುಂದುವೆಚ್ಚ ಮಾಡಬಹುದು
- ಲಕ್ಷ್ಮೀದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
- ಹಣ ಬಂದರೂ ಉಳಿಯುವುದಿಲ್ಲ ಎಂಬ ಕೊರಗು ಕಾಡಬಹುದು
- ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ
- ಸಹೋದರ ಬಗ್ಗೆ ವಿಶ್ವಾಸ ಇರಲಿ
- ದೊಡ್ಡ ಯೋಜನೆಗಳಿಗೆ ಅಡ್ಡಿ ಉಂಟಾಗಬಹುದು
- ಸಂಬಂಧದಲ್ಲಿ ಬಿರುಕು ಮಾತು
- ಮಾನಸಿಕವಾದ ನೋವು ಕಾಡಬಹುದು
- ಕುಬೇರಲಕ್ಷ್ಮಿ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ