ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಪ್ರೇಮಿಗಳಿಗೆ ಭಾರೀ ಹಿನ್ನಡೆ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಮಿತ್ರರಲ್ಲಿ ಕಲಹ, ಮನಸ್ತಾಪ ಉಂಟಾಗಬಹುದು
  • ಬೇರೆಯವರ ನಾಟಕೀಯ ಮಾತಿಗೆ ಮರುಳಾಗಬೇಡಿ
  • ಹೊಸ ಸಂಬಂಧದಲ್ಲಿ ಕಿರಿಕಿರಿ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನಿಮ್ಮ ನಿಮ್ಮ ಕಾರ್ಯಕ್ಷೇತ್ರದ ಮೇಲೆ ಮಾತ್ರ ಗಮನಿಸಿ
  • ಬೇರೆಯವರ ಕೆಲಸಕ್ಕೆ, ವಿಷಯಕ್ಕೆ ಆಸಕ್ತಿವಹಿಸಿ ಹಿನ್ನಡೆಯನ್ನು ಅನುಭವಿಸಬಹುದು
  • ನಿಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು
  • ತಾಯಿಯ ಸಲಹೆಗಳನ್ನು ಪಾಲಿಸಿ
  • ತಕ್ಷಣಕ್ಕೆ ಬಂದ ಖರ್ಚುಗಳಿಂದ ನಿಮ್ಮ ಯೋಜನೆ ಬದಲಾಗಬಹುದು
  • ಸ್ನೇಹಿತರು, ಸಹೋದ್ಯೋಗಿಗಳಿಂದ ಹಳೆಯ ಭಿನ್ನಾಭಿಪ್ರಾಯ ಮತ್ತೆ ಕಾಣಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ನೌಕರಿ ಹುಡುಕುತ್ತಿರುವವರಿಗೆ ಯಾವುದೇ ಪ್ರಯೋಜನ ಕಾಣುತ್ತಿಲ್ಲ
  • ವಿವಾಹಿತರಿಗೆ ಉದ್ಯೋಗ ಮತ್ತು ಆರ್ಥಿಕ ಸಮಸ್ಯೆ ಕಾಡಬಹುದು
  • ಹಿಂದೆ ಮಾಡಿದ ಸಾಲ ಭಾದೆ ಕಾಡಬಹುದು
  • ನಿಮಗಿರುವ ಧೈರ್ಯ ಮತ್ತು ಪ್ರಾಮಾಣಿಕತೆ ನಿಮ್ಮನ್ನ ಕಾಪಾಡಬಹುದು
  • ನಿಮ್ಮ ಪ್ರಯತ್ನ ನಿರಂತರವಾಗಿರಲಿ ಹತಾಶರಾಗಬಾರದು
  • ಹಿರಿಯರಿಗೆ ಆರೋಗ್ಯದಲ್ಲಿ ಚೇತರಿಕೆ, ಮನಸ್ಸಿಗೆ ಸಮಾಧಾನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಆರ್ಥಿಕವಾಗಿ ಈ ದಿನ ಸ್ವಲ್ಪ ನಿರಾಳ ಎಂದು ಹೇಳಬಹುದು
  • ಬೇರೆ ಬೇರೆ ಉದ್ಯೋಗಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು
  • ಪತ್ರಿಕಾ ರಂಗದಲ್ಲಿರುವವರಿಗೆ ಸ್ವಲ್ಪ ಹಿನ್ನಡೆ
  • ಸರ್ಕಾರಿ ಉದ್ಯೋಗಿಗಳಿಗೆ ಇದ್ದ ಸಮಸ್ಯೆ ನಿವಾರಣೆಯಾಗಬಹುದು
  • ಮಹಿಳೆಯರಿಗೆ ಅನಾರೋಗ್ಯ ಕಾಡಬಹುದು
  • ಸಹೋದ್ಯೋಗಿಗಳ ಸಹಕಾರ, ಸುಖಾಂತ್ಯವಾಗುವ ದಿನ
  • ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

publive-image

  • ಎಷ್ಟೇ ಪ್ರಯತ್ನ ಪಟ್ಟರು ಮನೆಯಲ್ಲಿನ ಖರ್ಚುಗಳನ್ನು ನಿಯಂತ್ರಿಸಲಾಗುವುದಿಲ್ಲ
  • ಆತ್ಮವಿಶ್ವಾಸ ಇದ್ದರೂ ಕೆಲವು ಸಂದರ್ಭಗಳು ಧೈರ್ಯಗೆಡಿಸುತ್ತವೆ
  • ಲೇಖಕರಿಗೆ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ
  • ರಾಜಕಾರಣಿಗಳಿಂದ ಅವಮಾನ ಅಥವಾ ಭಯ ಕಾಡಬಹುದು
  • ಎದುರಾಳಿಗಳ ದರ್ಶನ - ಜೊತೆಗಿರುವಿಕೆ ಮುಜುಗರ ತರುತ್ತದೆ
  • ಸಹೋದರ ಸಲಹೆ ಪಡೆಯಬೇಕಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಸಿಂಹ

publive-image

  • ದಿನಪೂರ್ತಿ ಕಲ್ಪನೆಯಲ್ಲಿಯೇ ಮುಳುಗಿ ಹೋಗುತ್ತೀರಿ
  • ಕಾರ್ಯದ ಗುಣಮಟ್ಟದ ಬಗ್ಗೆ ಸ್ವಲ್ಪ ಆಲೋಚಿಸಬೇಕಾಗುತ್ತದೆ
  • ವ್ಯಾವಹಾರಿಕವಾಗಿ ನಷ್ಟ ಉಂಟಾಗಬಹುದು
  • ಆತುರದ ನಿರ್ಧಾರದಿಂದ ಗುರಿ ಮುಟ್ಟಲಾಗದ ನೋವು ಕಾಡಬಹುದು
  • ಮಾನಸಿಕ ಚಡಪಡಿಕೆ ಇರುತ್ತದೆ
  • ಕುಟುಂಬದ ಒತ್ತಡ, ಆಗಬೇಕಾದ ಅಗತ್ಯ ಕೆಲಸವನ್ನು ಮುಂದೂಡಬಹುದು
  • ಶ್ರೀ ಲಕ್ಷ್ಮಿವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಬಹಳ ದಿನಗಳಿಂದ ಆಲೋಚಿಸುತ್ತಿದ್ದ ಉತ್ತಮ ಕೆಲಸಕ್ಕೆ ಇಂದು ಶುಭ
  • ನೀವು ತಾಳ್ಮೆ ಮತ್ತು ಸಮಯೋಚಿತ ಬುದ್ಧಿಯನ್ನ ಪ್ರಶಂಸಿಸಲಾಗುತ್ತದೆ
  • ನೀವು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಗುತ್ತದೆ
  • ವೈವಾಹಿಕ ಜೀವನ ಸಾಮರಸ್ಯದಿಂದ ಕೂಡಿರುತ್ತದೆ
  • ಅನಿರೀಕ್ಷಿತವಾಗಿ ಯಾವುದಾದರು ಸಮಾರಂಭದಲ್ಲಿ ಪಾಲ್ಗೊಳ್ಳಬಹುದು
  • ಮನಸ್ಸಿಗೆ ಏನೋ ಒಂದು ರೀತಿಯ ಆತಂಕ, ಅದಕ್ಕೆ ಕೂಡ ಉತ್ತರ ಸಿಗುವುದಿಲ್ಲ
  • ನವಗ್ರಹರ ಪ್ರಾರ್ಥನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಆರಾಧನೆ ಮಾಡಿ

ತುಲಾ

publive-image

  • ನಿಮ್ಮ ಅಭಿಪ್ರಾಯ ಭಾವನೆಗಳನ್ನ ವ್ಯಕ್ತಪಡಿಸಲು ಅವಕಾಶ ಇರುತ್ತದೆ
  • ನಿಮ್ಮ ಬೇಕು ಬೇಡಗಳನ್ನು ಮನೆಯಲ್ಲಿ ಹಾಗೂ ಹೊರಗೆ ಕೇಳುವವರಿರುವುದಿಲ್ಲ
  • ನಿಮಗಿಷ್ಟವಿಲ್ಲದಿದ್ದರೂ ಕೆಲವು ವಿಚಾರಕ್ಕೆ ಹೌದು ಎಂದು ಒಪ್ಪ ಬೇಕಾಗಬಹುದು
  • ಪ್ರೇಮಿಗಳಿಗೆ ಹಿನ್ನಡೆ, ತಮ್ಮ ತಪ್ಪಿನಿಂದ ತೊಂದರೆಯೂ ಆಗಬಹುದು
  • ನಿಮಗಿಂತ ದೊಡ್ಡವರ ಎದುರು ವಾದಕ್ಕೆ ಹೋಗಬೇಡಿ
  • ನಿಮಗೆ ಗೊತ್ತಿಲ್ಲದೇ ಮಾತು ಹಗುರವಾಗುತ್ತಾ ನಿಮ್ಮ ಬೆಲೆ ಕಡಿಮೆಯಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ನಿಮ್ಮ ಕಾರ್ಯದ ಮೇಲಿನ ಶಿಸ್ತನ್ನು ಕಡಿಮೆ ಮಾಡಿಕೊಳ್ಳಬಾರದು
  • ವಿದ್ಯಾರ್ಥಿಗಳಿಗೆ ಅನಾನುಕೂಲ ಕಾಡಬಹುದು
  • ಯಾರಿಂದಲೋ ಸಹಾಯದ ಮಾತು ಆದರೆ ಪ್ರಯೋಜನವಿಲ್ಲ
  • ರೇಷ್ಮೆ ವ್ಯಾಪಾರಸ್ಥರಿಗೆ ಅನುಕೂಲ ಲಾಭಗಳಿವೆ
  • ವಾಹನ ಚಾಲಕರು ತುಂಬಾ ಎಚ್ಚರಿಕೆಯಿಂದ ಇರಬೇಕು
  • ದಿನದ ಕೊನೆಯ ಹೊತ್ತಿಗೆ ಬೇಸರ, ಕೋಪಗಳು ಹೆಚ್ಚಾಗಬಹುದು
  • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

publive-image

  • ನಿಮ್ಮ ಅಪೇಕ್ಷೆಗಳಿಗೆ ಅಡ್ಡಿಯಾಗುವ ದಿನ
  • ಯಾವುದೇ ಕೆಲಸಕ್ಕೆ ಮುಂದಾದರು ನಿಮಗೆ ತೊಂದರೆಯಾಗಲು ನಿಗಧಿಯಾದಂತಿರುತ್ತದೆ
  • ಹೃದಯ ಸಂಬಂಧಿ ರೋಗಿಗಳು ಒತ್ತಡದಿಂದ ದೂರವಿರಬೇಕು
  • ಸಾಲ ಪಡೆಯಲು ಪ್ರಯತ್ನಿಸಬಹುದು ಆದರೆ ಕೆಲಸವಾಗುವುದಿಲ್ಲ
  • ಇಂದು ಶಾಂತರಾಗಿರುವುದು ಒಳ್ಳೆಯದು
  • ಇಂದು ಸ್ವಯಂ ಮೌಲ್ಯ ಮಾಪನ ಮಾಡಿಕೊಳ್ಳಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಕೈಯಲ್ಲಿ ಹಣವಿದ್ದರೇ ಯಾರು ನಿಮ್ಮನ್ನು ಮಾತನಾಡಿಸಲು ಸಾಧ್ಯವಿಲ್ಲ
  • ಇಂದು ಮಕ್ಕಳ, ಕುಟುಂಬದ ಸಮಸ್ಯೆ ನಿಮಗೆ ಕಾಣುವುದೇ ಇಲ್ಲ
  • ನಿಮ್ಮ ಕೆಲಸ ಕಾರ್ಯ ಸ್ವಭಾವಗಳಲ್ಲಿ ಗಣನೀಯ ಬದಲಾವಣೆಯ ದಿನ
  • ಈ ದಿನ ಬರೀ ಖರ್ಚು ಅದರಲ್ಲಿಯೇ ಸಂತೋಷ
  • ಹಲವರು ನಿಮ್ಮಿಂದ ಉಪಯೋಗ ಪಡೆಯುತ್ತಾರೆ
  • ನಿಮ್ಮ ವರ್ತನೆಗೆ ಬಂಧುಗಳು, ಸ್ನೇಹಿತರು ವಿಷಾದ ವ್ಯಕ್ತಪಡಿಸಬಹುದು
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ದಿನ
  • ವೃತ್ತಿ ಧರ್ಮದಿಂದ, ಕರ್ತವ್ಯದಿಂದ ಬಿಡುವಿಲ್ಲದ ಕೆಲಸ
  • ಆದಾಯ ಚೆನ್ನಾಗಿರುತ್ತದೆ ಆದರೆ ಸಂತೋಷದಿಂದ ಕಾಲ ಕಳೆಯಲು ಅವಕಾಶವಿಲ್ಲ
  • ಇಂದು ಕೆಲಸದ ಒತ್ತಡ ತೃಪ್ತಿ ಇರುತ್ತದೆ
  • ಬೇರೆಯವರ ಸಹಾಯಕ್ಕೆ ಮುಂದಾಗುತ್ತೀರಿ
  • ನಿಮ್ಮ ಉದಾರತೆ ಕಂಡು ಜನರು ಶ್ಲಾಘಿಸುತ್ತಾರೆ
  • ನಿಮಗೆ, ಕುಟುಂಬಕ್ಕೆ ಗೌರವ ಹೆಚ್ಚಾಗುವ ದಿನ
  • ಕುಲದೇವತಾ ಆರಾಧನೆ ಮಾಡಿ

ಮೀನ

publive-image

  • ತುಂಬಾ ದೊಡ್ಡದಾಗಿ ತತ್ವ ಚಿಂತನೆ ನಡೆಸಬಹುದು
  • ರಾಜ್ಯ ರಾಷ್ಟ್ರಮಟ್ಟದ ರಾಜಕಾರಣದ ವಿಷಯ ಪ್ರಸ್ತಾಪ ಮಾಡುತ್ತೀರಿ
  • ನಿಮಗೆ ಸಂಬಂಧವಿಲ್ಲದ ವಿಚಾರದಿಂದ ಮನಸ್ಸು ಕೆಡಿಸಿಕೊಳ್ಳುತ್ತೀರಿ
  • ಷೇರು ಮಾರುಕಟ್ಟೆಯಿಂದ ಲಾಭ ನಿಮ್ಮದಾಗುತ್ತದೆ
  • ನಿಮ್ಮ ಪ್ರಭಾವವೇ ನಿಮಗೆ ಸಮಸ್ಯೆ ಆಗಬಹುದು ಎಚ್ಚರಿಕೆ
  • ಭೌತಿಕವಾಗಿ ಹಲವಾರು ದೃಷ್ಟಿಕೋನಗಳಿಂದ ವಿಷಯ ಚರ್ಚಿಸಿ
  • ನಿಮ್ಮದೇ ಆದ ನಿಲುವು ಹೆಚ್ಚಿನದಾಗಿ ಕೆಲಸಕ್ಕೆ ಬರುವುದಿಲ್ಲ
  • ಮಹಾವಿಷ್ಣು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment