newsfirstkannada.com

ಹಸಿರು ಕ್ರಾಂತಿಯ ಹರಿಕಾರ.. ಎಂ.ಎಸ್ ಸ್ವಾಮಿನಾಥನ್ ಅಪರೂಪದ ಫೋಟೋಗಳು ಇಲ್ಲಿದೆ ನೋಡಿ

Share :

Published September 28, 2023 at 6:19pm

Update September 28, 2023 at 6:21pm

    20ನೇ ಶತಮಾನದ 20 ಪ್ರಭಾವಿಗಳ ಪಟ್ಟಿಯಲ್ಲಿ ಸ್ವಾಮಿನಾಥನ್‌ ಒಬ್ಬರು

    1960ರಲ್ಲಿ ಇಡೀ ದೇಶವೇ ಆಹಾರ ಅಭದ್ರತೆಯ ಸಂಕಷ್ಟವನ್ನು ಎದುರಿಸಿತ್ತು

    ಕೇಂದ್ರ ಸರ್ಕಾರ ರಚಿಸಿದ್ದ ಹಸಿರು ಕ್ರಾಂತಿಯ ಯೋಜನೆಯಲ್ಲಿ ಸ್ವಾಮಿನಾಥನ್‌

ಚೆನ್ನೈ: ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್ ಸ್ವಾಮಿನಾಥನ್ ಅವರು ನಿಧನರಾಗಿದ್ದಾರೆ. ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿ ಮಾಡಿದ್ದ ಸ್ವಾಮಿನಾಥನ್ ಅವರು ಭಾರತದ ಆಹಾರ ಭದ್ರತೆಯನ್ನು ಹೆಚ್ಚಿಸಲು ಅವಿರತವಾಗಿ ಹೋರಾಟ ನಡೆಸಿದ್ದರು. ಸ್ವಾಮಿನಾಥನ್ ಅವರ ಸಾಧನೆಯಿಂದ ದೇಶಾದ್ಯಂತ ಭತ್ತದ ಇಳುವರಿಯಲ್ಲಿ ಹೊಸ ಕ್ರಾಂತಿಯಾಗಿತ್ತು.

ಎಂ.ಎಸ್ ಸ್ವಾಮಿನಾಥನ್ ಅವರು 1925ರ ಆಗಸ್ಟ್‌ 7ರಂದು ತಮಿಳುನಾಡಿನ ತಂಜಾವೂರಿನ ಕುಂಭಕೋಣಂನಲ್ಲಿ ಜನಿಸಿದ್ದರು. ಕೃಷಿ ವಿಜ್ಞಾನಿ, ಹವಾಮಾನ ತಜ್ಞರೂ ಆಗಿದ್ದ ಸ್ವಾಮಿನಾಥನ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭಾಷಣ, ಎಚ್.ಕೆ ಫಿರೋದಿಯಾ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಇಂದಿರಾ ಗಾಂಧಿ ಪ್ರಶಸ್ತಿಗಳೂ ಸ್ವಾಮಿನಾಥನ್ ಅವರಿಗೆ ಲಭಿಸಿವೆ.

ಎಂ.ಎಸ್ ಸ್ವಾಮಿನಾಥನ್ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ವಿಶ್ವವಿಖ್ಯಾತ ಕೃಷಿ ವಿಜ್ಞಾನಿಯ ನಿಧನಕ್ಕೆ ಭಾರತದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿನಾಥನ್ ಅವರು ಭಾರತದ ಪ್ರಗತಿಯನ್ನು ಕಾಣಲು ಅವರು ಹೊಂದಿದ್ದ ಉತ್ಸಾಹ ಸದಾ ಮಾದರಿಯಾಗಿದೆ. ಅವರ ಬದುಕು ಮತ್ತು ಸಾಧನೆ ಭವಿಷ್ಯದ ಜನಾಂಗಕ್ಕೆ ಉತ್ತೇಜನ ನೀಡಲಿವೆ. ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: BREAKING: ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್. ಸ್ವಾಮಿನಾಥನ್ ವಿಧಿವಶ

1960 ಹಾಗೂ 70ರ ದಶಕದಲ್ಲಿ ಭಾರತ ದೇಶ ಆಹಾರ ಅಭದ್ರತೆಯ ಸಮಸ್ಯೆಗೆ ಸಿಲುಕಿತ್ತು. ಆ ಸಂದರ್ಭದಲ್ಲಿ ಸ್ವಾಮಿನಾಥನ್ ಅವರ ಸಾಧನೆ ಗಮನಾರ್ಹವಾಗಿದೆ. ಕೇಂದ್ರ ಸರ್ಕಾರ ರಚಿಸಿದ್ದ ಹಸಿರು ಕ್ರಾಂತಿಯ ಯೋಜನೆಯಲ್ಲಿ ಸ್ವಾಮಿನಾಥನ್ ಅವರು ಕೆಲಸ ಮಾಡಿದ್ದರು. ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸುವಲ್ಲಿ ಸ್ವಾಮಿನಾಥನ್ ಪ್ರಮುಖ ಪಾತ್ರವಹಿಸಿದ್ದರು.

ಅಧಿಕ ಇಳುವರಿಯ ಭತ್ತ ಹಾಗೂ ಗೋಧಿ ತಳಿಯ ಅಭಿವೃದ್ಧಿಗಾಗಿ 1987ರಲ್ಲಿ ಅವರಿಗೆ ಜಾಗತಿಕ ಆಹಾರ ಬಹುಮಾನ ಲಭಿಸಿತ್ತು. ಅದರಿಂದ ಬಂದ ಹಣದಲ್ಲಿ ಅವರು ಚೆನ್ನೈನಲ್ಲಿ ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಆರಂಭಿಸಿದರು.

ಭಾರತದ ಕೃಷಿ ಕ್ಷೇತ್ರದಲ್ಲೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ಎಂ.ಎಸ್‌ ಸ್ವಾಮಿನಾಥನ್ ಅವರು ಸಾಧನೆ ಮಾಡಿದ್ದಾರೆ. ಜಾಗತಿಕ ಮಟ್ಟದ ಹಲವು ಕೃಷಿ ಹಾಗೂ ಪರಿಸರ ಜಾಗೃತಿ ಕುರಿತ ಕಾರ್ಯಕ್ರಮಗಳಲ್ಲಿ ಸ್ವಾಮಿನಾಥನ್‌ ಸಕ್ರಿಯರಾಗಿದ್ದರು. 20ನೇ ಶತಮಾನದ 20 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಸ್ವಾಮಿನಾಥನ್‌ ಅವರ ಹೆಸರು ಸೇರಿತ್ತು.

ಚೆನ್ನೈನಲ್ಲಿ ವಾಸವಿದ್ದ ಸ್ವಾಮಿನಾಥನ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಎಂಎಸ್ ಸ್ವಾಮಿನಾಥನ್ ಅವರ ಪತ್ನಿ ಮಿನಾ ಸ್ವಾಮಿನಾಥನ್​ ಅವರು ಕಳೆದ ವರ್ಷ ನಿಧನರಾಗಿದ್ದರು. ಸ್ವಾಮಿನಾಥನ್​ ಅವರು ಈಗ ಮೂವರು ಪುತ್ರಿಯರಾದ ಸೌಮ್ಯ, ಮಥುರಾ ಮತ್ತು ನಿತ್ಯ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಸಿರು ಕ್ರಾಂತಿಯ ಹರಿಕಾರ.. ಎಂ.ಎಸ್ ಸ್ವಾಮಿನಾಥನ್ ಅಪರೂಪದ ಫೋಟೋಗಳು ಇಲ್ಲಿದೆ ನೋಡಿ

https://newsfirstlive.com/wp-content/uploads/2023/09/MS-Swaminathan-4.jpg

Load More