/newsfirstlive-kannada/media/post_attachments/wp-content/uploads/2024/10/Ragi-Malt.jpg)
ರಾಗಿ ಗಂಜಿ ಅಥವಾ ರಾಗಿ ಅಂಬಲಿ ಅತ್ಯಂತ ಆರೋಗ್ಯಕರವಾರ ಆಹಾರವಾಗಿದೆ. ವಾರದಲ್ಲಿ ಮೂರು ಬಾರಿ ಅಥವಾ ಪ್ರತಿ ನಿತ್ಯ ಸೇವಿಸುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ದೇಹಕ್ಕೆ ಬಹಳ ತಂಪು ನೀಡುವ ಪಾನೀಯದಂತಹ ಪದಾರ್ಥವಾಗಿದೆ. ರಾಗಿಯೂ ಗಾತ್ರದಲ್ಲಿ ಬಹಳ ಚಿಕ್ಕದಾದ ಧಾನ್ಯ. ಆದರೆ ಇದು ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಮೆಗ್ನೀಷಿಯಂ, ವಿಟಮಿನ್ ಬಿ, ವಿಟಮಿನ್ ಡಿ ಹಾಗೂ ಇತರ ಪೋಷಕಾಂಶಗಳಿಂದ ಕೂಡಿದೆ. ರಾಗಿ ಮುದ್ದೆ ಮಾತ್ರವಲ್ಲ, ರಾಗಿ ಗಂಜಿ ಅಥವಾ ರಾಗಿ ಅಂಬಲಿ ಕೂಡ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಇದನ್ನೂ ಓದಿ:BBK11: ಮನೆಗೆ ಬಂದ ಕೆಲವೇ ಹೊತ್ತಲ್ಲಿ ಹನುಮಂತನಿಗೆ ಖುಲಾಯಿಸದ ಅದೃಷ್ಟ; ಬಿಗ್ಬಾಸ್ ನಿರ್ಧಾರಕ್ಕೆ ಮನೆಮಂದಿ ಶಾಕ್
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಇರುವ ಬಹುತೇಕ ಮಂದಿಗೆ ನಿಶಕ್ತಿ, ಅನಾರೋಗ್ಯ, ಉಸಿರಾಟದ ಸಮಸ್ಯೆ, ಶಕ್ತಿ ಹೀನತೆ, ನಡೆಯಲು ಕಷ್ಟ ಆಗುವುದು ಇತ್ಯಾದಿ ಸಮಸ್ಯೆಗಳು ಕಾಡುತ್ತಿರುತ್ತವೆ. ಇಂತಹ ನ್ಯೂನತೆಗಳನ್ನು ಹೊಗಲಾಡಿಸಲು ದೇಹಕ್ಕೆ ದೋಸೆ, ಇಡ್ಲಿ, ವಡೆ ಇನ್ನಿತ್ತರ ತಿಂಡಿ ತಿಂದರೆ ಶಕ್ತಿ ನೀಡುವುದಿಲ್ಲ. ಅದರಲ್ಲೂ ಬೆಂಗಳೂರಿನ ಜನರು ಕೆಲಸದ ಜಂಜಾಟದಲ್ಲಿ ಇರುತ್ತಾರೆ. ಹೀಗಾಗಿ ಬೆಂಗಳೂರಿಗರಿಗೆ ರಾಗಿ ಗಂಜಿ ಎಷ್ಟು ಬೆಸ್ಟ್? ಆರೋಗ್ಯಕ್ಕೆ ಏನೆಲ್ಲಾ ಲಾಭ ಇರುತ್ತೆ ಅಂತ ತಿಳಿದುಕೊಳ್ಳಿ.
ಇದರ ಬದಲಾಗಿ ಮುಂಜಾನೆ ಕಾಫಿ ಟೀಗಿಂತ ಮೊದಲೇ ರಾಗಿ ಗಂಜಿಯನ್ನು ಕುಡಿದರೇ ಆರೋಗ್ಯಕ್ಕೆ ಹೆಚ್ಚು ಉತ್ತಮ. ಇದರಿಂದ ದೇಹಕ್ಕೆ ಅತ್ಯಧಿಕ ಪೌಷ್ಟಿಕಾಂಶ ಒದಗಿಸುತ್ತದೆ. ಇನ್ನು, ರಾಗಿ ಗಂಜಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅನ್ನು ಹೊಂದಿದೆ. ಇದನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯ ಗಟ್ಟಿಯಾಗಿರುತ್ತದೆ. ಅಲ್ಲದೆ ಮೂಳೆಯ ಸಾಂದ್ರತೆಯೂ ಹೆಚ್ಚುತ್ತದೆ.
ರಾಗಿ ಗಂಜಿ ಸೇವನೆಯಿಂದ ಆಗುವ ಪ್ರಯೋಜನಗಳೇನು?
1. ಮುಂಜಾನೆ ತಿಂಡಿಯ ಬದಲು ರಾಗಿ ಅಂಬಲಿ ಕುಡಿಯುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ.
2. ರಾಗಿ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ. ಪ್ರತಿದಿನ ಸೇವಿಸುವುದರಿಂದ ಹೊಟ್ಟೆ ತುಂಬಿರುತ್ತದೆ. ಇದು ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
3. ರಾಗಿ ಗಂಜಿ ಕುಡಿಯುವದರಿಂದ ದೇಹವು ತಂಪಾಗುತ್ತದೆ. ವಾರಕ್ಕೆ ಎರಡರಿಂದ ಮೂರು ಬಾರಿ ರಾಗಿ ಹಿಟ್ಟು ಬಳಸಿ ಮುಖವನ್ನು ಸ್ಕ್ರಬ್ ಮಾಡುವುದರಿಂದ ಮುಖದಲ್ಲಿನ ಡೆಡ್‌ಸ್ಕಿನ್ ನಿವಾರಣೆಯಾಗಿ ಮುಖದ ಗ್ಲೋ ಹೆಚ್ಚಾಗುತ್ತದೆ.
4. ರಾಗಿಗಂಜಿಯನ್ನು ಮಾಡಿ ಕುಡಿದರೆ ಆಯಾಸ ನಿವಾರಣೆಯಾಗುತ್ತದೆ. ಜೊತೆಗೆ ಇದರ ನಿಯಮಿತ ಸೇವನೆ ಮೊಡವೆಗಳನ್ನು ದೂರ ಮಾಡಲು ಸಹಕಾರಿಯಾಗುತ್ತದೆ. ಬೇಸಿಗೆಯಲ್ಲಿ ರಾಗಿ ಗಂಜಿಗೆ ಮಜ್ಜಿಗೆ ಮಿಶ್ರಣ ಮಾಡಿಯೂ ಕುಡಿಯಬಹುದು.
5. ರಾಗಿಯೂ ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿದೆ. ತಿಂಡಿಯ ಭಾಗವಾಗಿ ಪ್ರತಿದಿನ ರಾಗಿಯನ್ನು ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗಿಸುತ್ತದೆ. ಅಲ್ಲದೆ ಹೊಟ್ಟೆಯ ಸಮಸ್ಯೆಗಳನ್ನು ಸಹ ತಡೆಯುತ್ತದೆ.
6. ದೇಹದಲ್ಲಿನ ಹೆಚ್ಚುವರಿ ಉಷ್ಣಾಂಶವನ್ನು ಇದು ಕಡಿಮೆ ಮಾಡುತ್ತದೆ. ಉರಿಯೂತದ ಸಮಸ್ಯೆ ಇರುವವರು ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಹೀಗೆ ಎಲ್ಲಾ ಕಾಲದಲ್ಲೂ ರಾಗಿ ಗಂಜಿ ಸೇವಿಸುವುದು ಉತ್ತಮ.
ರಾಗಿ ಗಂಜಿ ಮಾಡುವ ವಿಧಾನ..
ಮೊದಲಿಗೆ 50 ಗ್ರಾಂ ರಾಗಿ ಹಿಟ್ಟಿಗೆ 1 ಲೋಟ ನೀರು ಹಾಕಿ ಅದನ್ನು ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ. ನಂತರ ಪಾತ್ರೆಯಲ್ಲಿ 2 ಲೋಟ ನೀರು ಬಿಸಿಗಿಟ್ಟು ಅದಕ್ಕೆ ಅರ್ಧ ಚಮಚ ಜೀರಿಗೆ ಹಾಕಬೇಕು. ಅದು ಕುದಿ ಬರುತ್ತಿದ್ದಂತೆಯೇ ಅದಕ್ಕೆ ತಯಾರಿಸಿಟ್ಟುಕೊಂಡ ರಾಗಿ ನೀರನ್ನು ಸೇರಿಸಿ. ಗಂಟು ಬರದ ಹಾಗೆ ತಿರುವುತ್ತಾ, ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಹಸಿ ಮೆಣಸಿನಕಾಯಿ, ಸ್ವಲ್ಪ ಕ್ಯಾರೆಟ್, ಶುಂಠಿ, ಕೊತ್ತಂಬರಿ, ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಧ್ಯಮ ಉರಿಯಲ್ಲಿ ನಾಲ್ಕೈದು ನಿಮಿಷ ಬೇಯಿಸಿ. ತಣ್ಣಗಾದ ಬಳಿಕ ಈ ರಾಗಿ ಗಂಜಿಗೆ ಮೇಲಿನಿಂದ ಈರುಳ್ಳಿ ಹಾಗೂ ಕ್ಯಾರೆಟ್‌ನಿಂದ ಅಲಂಕಾರ ಮಾಡಿ ಮತ್ತು ಗೋಡಂಬಿ ಪುಡಿಯನ್ನು ಉದುರಿಸಿ. ಇದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಂಡರೆ ಮಸಾಲಾ ರಾಗಿ ಗಂಜಿ ರೆಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ