newsfirstkannada.com

Raksha Bandhan: ಬಂದೇ ಬಿಡ್ತು ರಕ್ಷಾ ಬಂಧನ.. ರಾಖಿ ಕಟ್ಟೋ ಮುನ್ನ ತಿಳಿಯಬೇಕಾದ ಪ್ರಮುಖ ವಿಚಾರ ಇಲ್ಲಿದೆ

Share :

Published August 18, 2024 at 6:30am

Update August 18, 2024 at 6:31am

    ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಣೆ

    ರಕ್ಷಾ ಬಂಧನ ಅಣ್ಣ ತಂಗಿಯರ ನಡುವಿನ ಪವಿತ್ರ ಸಂಬಂಧದ ಸಂಕೇತವಾಗಿದೆ

    ದೇಶದಾದ್ಯಂತ ಬಹಳ ವೈಭವ ಮತ್ತು ಸಂಭ್ರಮದಿಂದ ಆಚರಣೆ ಮಾಡೋ ಹಬ್ಬ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಕ್ಷಾ ಬಂಧನ ಬರುತ್ತಿದೆ. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಕೂಡ ಒಂದಾಗಿದೆ. ಈ ಬಾರಿ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು? ಯಾವ ಸಮಯದಲ್ಲಿ ಪೂಜೆ ಮಾಡಿದ್ರೆ ಶ್ರೇಷ್ಠ; ಇಲ್ಲಿದೆ ಮಾಹಿತಿ

ರಕ್ಷಾ ಬಂಧನ ನಿಮಿತ್ತ ಈಗಾಗಲೇ ಮಾರುಕಟ್ಟೆ ಭಿನ್ನ ವಿಭಿನ್ನವಾದ ರಾಖಿಗಳು ಬಂದಿವೆ. ಅದರಲ್ಲೂ ಮಕ್ಕಳಿಗಾಗಿಯೇ ವಿಶೇಷವಾದ ರಾಖಿಗಳು ಬಂದಿದೆ. ಸಹೋದರರಿಗೆ ರಾಖಿ ಕಟ್ಟುವ ಮೊದಲು ಸಹೋದರಿಯರು ರಕ್ಷಾ ಬಂಧನ ಮಹತ್ವವನ್ನು ತಿಳಿದುಕೊಳ್ಳಬೇಕು. ಹೌದು, ಸುಖಾ ಸುಮ್ಮನೆ ರಾಖಿಯನ್ನು ಯಾರ್ಯಾರಿಗೋ ಕಟ್ಟುವಂತಿಲ್ಲ. ರಾಖಿಯೂ ತನ್ನದೇಯಾದ ಮಹತ್ವವನ್ನು ಪಡೆದುಕೊಂಡಿದೆ. ರಕ್ಷಾಬಂಧನ ಅಂದರೆ ಶ್ರಾವಣ ಪೂರ್ಣಿಮೆ ಆಗಸ್ಟ್ 19ರಂದು ಮುಂಜಾನೆ 3:05 ರಿಂದ ಪ್ರಾರಂಭವಾಗಿ ರಾತ್ರಿ 11:56ಕ್ಕೆ ಕೊನೆಗೊಳ್ಳುತ್ತದೆ. ಆಗಸ್ಟ್ 19 ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸುವುದು ಸರ್ವಾನುಮತದಿಂದ ಕೂಡಿರುತ್ತದೆ.

ರಕ್ಷಾ ಬಂಧನವು ಹಿಂದೂ ಸಂಪ್ರದಾಯದಲ್ಲಿ ಒಂದು ಮುಖ್ಯವಾದ ಹಬ್ಬವಾಗಿದೆ. ಅದರಲ್ಲೂ ಇದು ರಕ್ಷಾ ಬಂಧನವು ಭಾರತೀಯ ಸಂಸ್ಕೃತಿ ಮತ್ತು ಪದ್ಧತಿಯ ಅಂಗವಾಗಿದೆ. ಇದು ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಆಚರಿಸುತ್ತದೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ. ಇದು ಸಹೋದರನಿಗೆ ತನ್ನ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತದೆ. ಜೊತೆಗೆ ಸಹೋದರ ಮತ್ತು ಸಹೋದರಿಯರ ನಡುವಿನ ಬಂಧವನ್ನು ಬಲಪಡಿಸುತ್ತದೆ.

ರಕ್ಷಾ ಬಂಧನದ ಮಹತ್ವ ಏನು?

ಸಂಸ್ಕೃತದಿಂದ ಹುಟ್ಟಿಕೊಂಡ ಈ ರಕ್ಷಾ ಬಂಧನ ಪದವು “ರಕ್ಷಣೆಯ ಬಂಧ” ಎಂದು ಅನುವಾದಿಸುತ್ತದೆ. ಹಿಂದೂ ಚಂದ್ರನ ಕ್ಯಾಲೆಂಡರ್‌ನಲ್ಲಿ 5ನೇ ತಿಂಗಳು ಶ್ರಾವಣ (ಜುಲೈ-ಆಗಸ್ಟ್) ಸಮಯದಲ್ಲಿ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿಯನ್ನು ಆಚರಿಸುವ ಜನಪ್ರಿಯ ಹಿಂದೂ ಹಬ್ಬವಾಗಿದೆ. ರಕ್ಷ ದಿನದಂದು ಒಬ್ಬ ಸಹೋದರಿ ಅಣ್ಣ ಅಥವಾ ತಮ್ಮನಿಗೆ ದಾರದ ರೂಪದಲ್ಲಿರುವ ತಾಯಿತವನ್ನು ಆತನ ಬಲಗೈಗೆ ಕಟ್ಟುತ್ತಾಳೆ. ಈ ಮೂಲಕ ಅವರ ಸಂಬಂಧವನ್ನು ಹೆಚ್ಚಿಸುತ್ತದೆ. ಆ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಸಹೋದರಿಯನ್ನು ತನ್ನ ಜೀವನದುದ್ದಕ್ಕೂ ರಕ್ಷಿಸುತ್ತೇನೆ ಅಂತ ಪ್ರತಿಜ್ಞೆ ಸಂಕೇತಿಸುತ್ತದೆ.

ಇದನ್ನೂ ಓದಿ: 50 ವರ್ಷಗಳ ಕಾಲ ತರುಣಿಯಂತೆ ಯಂಗ್ ಆಗಿರಿ.. ಲಕಲಕ ಹೊಳೆಯಲು ನಿಮ್ಮ ಲೈಫ್​ಸ್ಟೈಲ್ ಹೇಗಿರಬೇಕು?

ರಕ್ಷಾ ಬಂಧನ ಹೇಗೆ ಆಚರಣೆ ಮಾಡ್ತಾರೆ?

ಮೊದಲು ಸಹೋದರಿಯರು ತಮ್ಮ ತಮ್ಮ ಸಹೋದರರಿಗಾಗಿ ವಿಶೇಷವಾದ ರಾಖಿಯನ್ನು ತರುತ್ತಾರೆ. ಬಳಿಕ ಅವರನ್ನು ಒಂದು ಕಡೆ ಕುರಿಸಿ ಹಣೆಗೆ ಕುಂಕುಮವನ್ನು ಹಚ್ಚುತ್ತಾರೆ. ಬಳಿಕ ರಾಖಿಯನ್ನು ಅವರ ಬಲಗೈಗೆ ಕಟ್ಟುತ್ತಾರೆ. ಇದಾದ ಬಳಿಕ ಸಿಹಿ ತಿಂಡಿಯನ್ನು ತಿನ್ನುತ್ತಾರೆ. ನಂತರ ಸಹೋದರ ಆಕಗೆ ಉಡುಗೊರೆಯನ್ನು ನೀಡುತ್ತಾನೆ. ಅದು ಹಣದ ರೂಪದಲ್ಲಿಯೂ ಇರಬಹುದು. ಅಥವಾ ಬಟ್ಟೆಯನ್ನು ಕೊಡಿಸುವುದಾಗಿ ಇರಬಹುದಾಗಿದೆ.

ವಿಶೇಷ ವರದಿ: ವೀಣಾ ಗಂಗಾಣಿ ಡಿಜಿಟಲ್​ ಡೆಸ್ಕ್​ ನ್ಯೂಸ್​ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Raksha Bandhan: ಬಂದೇ ಬಿಡ್ತು ರಕ್ಷಾ ಬಂಧನ.. ರಾಖಿ ಕಟ್ಟೋ ಮುನ್ನ ತಿಳಿಯಬೇಕಾದ ಪ್ರಮುಖ ವಿಚಾರ ಇಲ್ಲಿದೆ

https://newsfirstlive.com/wp-content/uploads/2024/08/raksha-bandana3.jpg

Load More