/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
- ಮಧುಮೇಹಿಗಳಿಗೆ ಶುಗರ್​ ಲೆವೆಲ್​ ಕಡಿಮೆಯಾಗಿ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಸ್ನೇಹಿತರ, ಕುಟುಂಬಸ್ಥರ ಸಲಹೆಗಳನ್ನ ನಿರ್ಲಕ್ಷ್ಯ ಮಾಡಬೇಡಿ, ಗಂಭೀರವಾಗಿ ಪರಿಗಣಿಸಿ
- ಮಕ್ಕಳಿಗಾಗಿ ವಸ್ತ್ರಗಳನ್ನು, ಉಡುಗೊರೆಗಳನ್ನು ಖರೀದಿಸಬಹುದು
- ನಿಮ್ಮ ಕೆಲಸದ ಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು
- ಧನ್ವಂತರಿಯನ್ನು ಆರಾಧನೆ ಮಾಡಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುವ ದಿನ
- ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಒಳ್ಳೆಯ ತೀರ್ಮಾನಗಳನ್ನು ಕೈಗೊಳ್ಳಬಹುದು
- ಕಠಿಣ ಪರಿಶ್ರಮದಿಂದ, ಬುದ್ಧಿವಂತಿಕೆಯಿಂದ ಕಷ್ಟಕರವಾದ ಕೆಲಸಗಳನ್ನು ಸುಲಭವಾಗಿ ನಿಭಾಯಿಸುತ್ತೀರಿ
- ಕ್ರೀಡಾಪಟುಗಳಿಗೆ ಶುಭ ದಿನ, ಜೂಜಾಡುವವರಿಗೆ ತುಂಬಾ ಹಿನ್ನಡೆಯ ದಿನ
- ಲಕ್ಷ್ಮಿದೇವಿಯನ್ನು ಪ್ರಾರ್ಥಿಸಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರಿಂದ ನಿಮಗೆ ಅವಮಾನ ಸಾಧ್ಯತೆ
- ತುಂಬಾ ಮುಖ್ಯವಾದ ವಿಷಯ ಅಥವಾ ವಸ್ತುವನ್ನು ಮರೆತುಬಿಡಬಹುದು ಗಮನವಿರಲಿ
- ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನ ಚೆನ್ನಾಗಿ ನೋಡಿಕೊಳ್ಳಿ, ಇಲ್ಲದಿದ್ದರೆ ನಿಂದನೆಗೆ ಒಳಗಾಗಬಹುದು
- ಶ್ರೀರಾಮನನ್ನು ಆರಾಧಿಸಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ದಲ್ಲಾಳಿಗಳು ಮತ್ತು ನಿತ್ಯ ಬಡ್ಡಿ ವ್ಯವಹಾರ ಮಾಡುವವರಿಗೆ ಹಿನ್ನಡೆ ಸಾಧ್ಯತೆ
- ನಿಮ್ಮ ಹಣಕ್ಕಾಗಿ ನೀವೆ ಕಾಯಬೇಕಾಗಬಹುದು
- ಈ ದಿನ ಕುಟುಂಬದಲ್ಲಿ ಸಾಮರಸ್ಯವಿರುತ್ತದೆ
- ನಿಮ್ಮ ವ್ಯವಹಾರದಿಂದ ಮನೆಯ ವಾತಾವರಣ ಹದಗೆಡಬಹುದು ಎಚ್ಚರ
- ಈ ದಿನ ನಿಮಗೆ ಸ್ನೇಹಿತರ ಸಹಾಯ ಬೇಕಾಗಬಹುದು
- ಮನಸ್ಸಿನಲ್ಲಿದ್ದ ಪ್ರೀತಿ-ಪ್ರೇಮ ವಿಚಾರ ತಿಳಿಸಲು ಶುಭವಾದ ದಿನ
- ಚಂಡಿಕಾ ಪರಮೇಶ್ವರಿಯನ್ನು ಆರಾಧಿಸಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಣ ಖರ್ಚು ಮಾಡುವುದಕ್ಕೆ ಸರಿಯಾದ ಯೋಜನೆ ಮಾಡಿಕೊಳ್ಳಿ
- ನಿಮ್ಮ ನಿರೀಕ್ಷೆಗಿಂತ ಅಧಿಕ ಹಣವ್ಯಯವಾಗಬಹುದು
- ರಹಸ್ಯ ಶತ್ರುಗಳು ಸಮಸ್ಯೆ ಉಂಟು ಮಾಡಬಹುದು ಗಮನವಿರಲಿ
- ಮಕ್ಕಳ ಚಟುವಟಿಕೆ, ಅವರ ವಿದ್ಯಾಭ್ಯಾಸದ ಕಡೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು
- ಸ್ನೇಹಿತರ ಜೊತೆಯ ಭಿನ್ನಾಭಿಪ್ರಾಯಗಳು ಇಂದು ಶತ್ರುತ್ವಕ್ಕೆ ತಿರುಗಬಹುದು ಜಾಗ್ರತೆ
- ತಾಪಸಮನ್ಯುವನ್ನು ಪ್ರಾರ್ಥಿಸಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರನ್ನು ಟೀಕಿಸಲು ಹೋಗಿ ನಿಮ್ಮ ವೈಯಕ್ತಿಕ ವಿಚಾರದಲ್ಲಿ ಅವಮಾನ ಸಾಧ್ಯತೆ
- ಪ್ರೇಮಿಗಳ ನಡುವೆ ಜಗಳ, ಮಾನಸಿಕ ಹಿಂಸೆ ಸಾಧ್ಯತೆ ಎಚ್ಚರಿಕೆ ಇರಲಿ
- ಕುಟುಂಬದವರು ನಿಮ್ಮ ಪರವಾಗಿ ಮಾತನಾಡಿ ನಿಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ
- ಪ್ರೇಮ ವಿಚಾರವನ್ನು ಕುಟುಂಬದಲ್ಲಿ ತಿಳಿಸಿದರೆ ಒಳ್ಳೆಯದು
- ಲಕ್ಷ್ಮೀನಾರಾಯಣನನ್ನು ಪ್ರಾರ್ಥಿಸಿ
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಈ ದಿನದ ಎಲ್ಲಾ ಕೆಲಸ ಕಾರ್ಯಗಳಿಗೆ ಅಡಚಣೆ ಅಥವಾ ವಿಘ್ನ ಸಾಧ್ಯತೆ
- ಪ್ರಯಾಣಕ್ಕೆ ಈ ದಿನ ಶುಭವಾಗಿಲ್ಲ, ಪ್ರಯಾಣ ಮುಂದೂಡಿದರೆ ಒಳ್ಳೆಯದು
- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
- ಹೊಟ್ಟೆಗೆ ಸಂಬಂಧಿಸಿದ ತೊಂದರೆ ಹೆಚ್ಚಾಗಿ ಕಾಡಬಹುದು ಜಾಗ್ರತೆಯಿರಲಿ
- ಗಣಪತಿ ಆರಾಧನೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬ ವಾತಾವರಣವು ಇಂದು ಮನಸ್ಸಿಗೆ ಸಮಾಧಾನ ನೀಡಬಹುದು
- ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಶುಭ ದಿನ
- ನೌಕರಿ ದೃಷ್ಟಿಯಿಂದ ವಿದೇಶ ಪ್ರಯಾಣಕ್ಕೆ ಶುಭ ದಿನ
- ವಿದೇಶದಲ್ಲಿರುವವರು ಇಲ್ಲಿಗೆ ಬರಲು ಅನುಕೂಲಕರವಾದ ದಿನ
- ಕುಟುಂಬದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ
- ಮನೆಯವರೆಲ್ಲಾ ಒಟ್ಟು ಸೇರಿ ಕುಲದೇವರನ್ನು ಪೂಜಿಸಿ
ಧನುಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಪಿತ್ರಾರ್ಜಿತ ಆಸ್ತಿ ಲಭಿಸುವ ಸಾಧ್ಯತೆ ಇದೆ
- ನಿಮ್ಮ ಸಾಮಾಜಿಕ ವಲಯವು ವಿಸ್ತಾರವಾಗಬಹುದು
- ನಿಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ತುಂಬಾ ಹಣವ್ಯಯವಾಗಬಹುದು
- ಪಿತ್ರಾರ್ಜಿತ ಆಸ್ತಿ ಲಭಿಸಿದರೆ ಲಾಭ-ನಷ್ಟದ ಲೆಕ್ಕ ಹಾಕದೆ ಹಿರಿಯರ ಆರ್ಶೀವಾದ ಎಂದು ಸ್ವೀಕರಿಸಿ
- ನಿಮ್ಮ ಮಾತು ಸ್ಪಷ್ಟವಾಗಿ ಮಿತವಾಗಿರಲಿ
- ಗ್ರಾಮದೇವತೆಯನ್ನು ಪ್ರಾರ್ಥಿಸಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೆಳಗಿನಿಂದ ಮಧ್ಯಾಹ್ನದವರೆಗೆ ಕೆಲಸಗಳಲ್ಲಿ ಕಿರಿಕಿರಿ ಸಾಧ್ಯತೆ
- ನೀವು ತಲೆ ನೋವಿನಿಂದ ತೊಂದರೆ ಪಡಬಹುದು
- ಮಧ್ಯಾಹ್ನದ ನಂತರ ನಿಮ್ಮ ಕೆಲಸಗಳು ಚುರುಕುಗೊಳ್ಳಬಹುದು
- ಈ ದಿನ ಬೇರೆಯವರಿಗೆ ಸಲಹೆ, ಸೂಚನೆ ಕೊಡಬೇಡಿ
- ಮನೆಯಲ್ಲಿಯೇ ಉಳಿಯುವುದರಿಂದ ಕೆಲಸದ ಒತ್ತಡ ಹೆಚ್ಚಾಗಬಹುದು
- ಸಂಬಂಧಿಕರು ಮನೆಗೆ ಬರುವುದರಿಂದ ನಿಮಗೆ ಕಿರಿಕಿರಿಯಾಗಬಹುದು
- ಸಾಯಿಬಾಬಾರನ್ನು ಪ್ರಾರ್ಥಿಸಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದ ದೃಷ್ಟಿಯಿಂದ ಉಷ್ಣದ ಸಮಸ್ಯೆ ಕಾಡಬಹುದು ಜಾಗ್ರತೆವಹಿಸಿ
- ಖಾಸಗಿ ಉದ್ಯೋಗಿಗಳಿಗೆ ಕೆಲಸದಲ್ಲಿ ಕಿರಿಕಿರಿ ಸಾಧ್ಯತೆ
- ಯುವಕರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವುದಿಲ್ಲ
- ಅಗತ್ಯಬಿದ್ದರೆ ಕೆಲಸವನ್ನು ಬಿಡುತ್ತೇನೆಂಬ ಮಾತು ಬರಬಹುದು
- ಯುವಕರು ತಮ್ಮ ಕೆಲಸದ ವಿಚಾರದಲ್ಲಿ ತಾಳ್ಮೆವಹಿಸಿ ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗಬಹುದು
- ಪಾರ್ವತಿಯನ್ನು ಆರಾಧಿಸಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಅತಿಯಾದ ಕೋಪದಿಂದ ಸಂಬಂಧಿಕರು ದೂರವಾಗುವ ಸಾಧ್ಯತೆ
- ನಿಮ್ಮ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಹಣ ಖರ್ಚು ಸಾಧ್ಯತೆ
- ವಿಶೇಷವಾದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ
- ಚಿಕ್ಕಮಕ್ಕಳ ಜೊತೆ ಯಾವುದೇ ಗೌಪ್ಯ ವಿಚಾರಗಳನ್ನು ಮಾತನಾಡಬೇಡಿ, ಅವಮಾನ ಸಾಧ್ಯತೆ
- ರುದ್ರಮನ್ಯುವನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us