/newsfirstlive-kannada/media/post_attachments/wp-content/uploads/2024/10/trp.jpg)
ಕನ್ನಡ ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್​​ಪಿ ಮೂಲಕ ತಿಳಿಯಲಿದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್​ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ ಅನ್ನೋದಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿನೇ ಸಾಕ್ಷಿ. 6.30ರ ಸ್ಲಾಟ್​ನಲ್ಲಿ ಜಬರ್ದಸ್ತ್​​ ಟಿಆರ್​ಪಿ ಪಡೆದುಕೊಂಡಿದೆ ಪುಟ್ಟಕ್ಕನ ಮಕ್ಕಳು. ಇಂಟರ್​ನೆಟ್​ ಯುಗದಲ್ಲಿ ಈ ರೀತಿಯ ನಂಬರ್​ ಪಡೆಯೋದು ಸಾಮಾನ್ಯವಾದ ಮಾತು ಅಲ್ಲವೇ ಅಲ್ಲ.
ಇದನ್ನೂ ಓದಿ: ಲವ್ವರ್ ಜೊತೆ ಸೇರಿ ಗಂಡನ ಉಸಿರು ನಿಲ್ಲಿಸಿದ ಹೆಂಡತಿ.. ಸುಂದರಿ ಡ್ರಾಮಾ ಮಾಡಿ ಸಿಕ್ಕಿಬಿದ್ದಿದ್ದು ಹೇಗೆ?
ಹಾಗಂತ ಈ ಹಿಂದೆ ಯಾವ ಧಾರಾವಾಹಿಗೂ ಈ ರೀತಿ ರೆಸ್ಪಾನ್ಸ್​ ಬಂದಿಲ್ವಾ? ಖಂಡಿತ ಬಂದಿದೆ. ದಶಕಗಳ ಹಿಂದೆ ಅಂತನೇ ಹೇಳಬಹುದು. ರಂಗೋಲಿ, ಕಾದಂಬರಿ, ಕುಲವಧು ಟೈಮ್​ನಲ್ಲಿ 6.30 ಸ್ಲಾಟ್​ಗೆ ಈ ಥರಹದ್ದು ಒಂದು ಕ್ರೇಜ್​ ಇತ್ತು. ಅವುಗಳನ್ನ ಬೀಟ್​ ಮಾಡೋಕೆ ಸಾಧ್ಯಯಿಲ್ಲ ಬಿಡಿ. ಬಟ್​ ಪುಟ್ಟಕ್ಕ ಅವುಗಳನ್ನ ನೆನಪಿಸುವಂತೆ ಪವರ್​ಫುಲ್​ ಪ್ರದರ್ಶನ ನೀಡುತ್ತಿದೆ. ಪುಟ್ಟಕ್ಕನ ರೇಟಿಂಗ್​ ವಾರ ವಾರ ಹೆಚ್ಚಾಗ್ತಿದೆ. ನಂಬರ್​ ಒನ್​ ಸ್ಥಾನಕ್ಕೆ ಪುಟ್ಟಕ್ಕನ ಮಕ್ಕಳು ಮರಳಿದ್ದಾಳೆ. 9.9 ಟಿಆರ್​ಪಿ ಪಡೆಯೋ ಮೂಲಕ ಯಶಸ್ವಿ ಓಟವನ್ನ ಮುಂದುವರೆಸಿದೆ ಧಾರಾವಾಹಿ ತಂಡ.
ರೂರಲ್​ ಅಂದ್ರೇ ಹಳ್ಳಿಗಳಲ್ಲಿ ಪುಟ್ಟಕ್ಕ ಬ್ಲಾಕ್​ ಬಾಸ್ಟರ್​ ಹಿಟ್​​ ಆಗಿದೆ. 11.7 ಟಿವಿಆರ್​ ಪಡೆದುಕೊಂಡಿದೆ. ಇದು ನಿಜಕ್ಕೂ ದಾಖಲೆ. ಇನ್ನೂ ದೃಷ್ಟಿಬೊಟ್ಟು ಧಾರಾವಾಹಿ ಕೂಡ ವೀಕ್ಷಕರನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಂಜೆ 6 ಗಂಟೆ ಸ್ಲಾಟ್​ನಲ್ಲಿ ಭರ್ಜರಿ ನಂಬರ್​ನ್ನೇ ಕಲೆಹಾಕಿದೆ. 4.5 ಟಿಆರ್​ಪಿ ಪಡೆದುಕೊಂಡಿದೆ. ಉತ್ತಮ ಮೊತ್ತ ಅಂತನೇ ಹೇಳಬಹುದು.
ಇನ್ನೂ ಮೊದಲ ಸ್ಥಾನಕ್ಕೆ ಪುಟ್ಟಕ್ಕನ ಮಕ್ಕಳು ಮರಳಿದ್ರೇ, ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 9, ಮೂರನೇ ಸ್ಥಾನದಲ್ಲಿ ಅಮೃತಧಾರೆ 8.6, ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ 8.3, ಐದನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಹ್ಮಣ್ಯ 7.1, ಆರನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 7, ಏಳನೇ ಸ್ಥಾನದಲ್ಲಿ ರಾಮಾಚಾರಿ 6.9, ಏಂಟನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮೀ 6.2 ಒಂಬತ್ತನೇ ಸ್ಥಾನದಲ್ಲಿ ನಿನಗಾಗಿ 5.7, ಹತ್ತನೇ ಸ್ಥಾನದಲ್ಲಿ ಸೀತಾರಾಮ 5.3 ಟಿಆರ್​ಪಿ ಪಡೆದುಕೊಂಡಿವೆ.
ಕನ್ನಡದ ಅತಿ ದೊಡ್ಡ ಶೋ ಬಿಗ್​ಬಾಸ್​ಗೆ ಬರೋದಾದ್ರೇ ಪ್ರತಿದಿನದ ಲೆಕ್ಕಾಚಾರದಲ್ಲಿ 7.3, ಶನಿವಾರದ ವಾರದ ಕತೆ ಕಿಚ್ಚನ ಜೊತೆ 7, ಭಾನುವಾರದ ಸಂಚಿಕೆ 6.9 ಟಿಆರ್​ಪಿ ಪಡೆದಿದೆ. ಕಳೆದ ವಾರಕ್ಕೆ ಹೊಲಿಸಿದರೇ ಬಿಗ್​ಬಾಸ್​ ಟಿಆರ್​ಪಿ ಕುಸಿದಿದೆ. ಇನ್ನೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 8.3 ಟಿಆರ್​ಪಿ ಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ