ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬದುಕಿನ ಅಪರೂಪದ ಟಾಪ್ 10 ಫೋಟೋಗಳು ಇಲ್ಲಿವೆ!

author-image
Veena Gangani
Updated On
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬದುಕಿನ ಅಪರೂಪದ ಟಾಪ್ 10 ಫೋಟೋಗಳು ಇಲ್ಲಿವೆ!
Advertisment
  • ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ ಹೇಗಿತ್ತು
  • ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ
  • ಇಲ್ಲಿವೆ 10 ಮನಮೋಹನ್ ಸಿಂಗ್​ ಅಪರೂಪದ ಫೋಟೋಸ್

ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು ಕೊನೆಯುಸಿರೆಳೆದಿದ್ದಾರೆ.

publive-image

ಇಂದು ರಾತ್ರಿ 8 ಗಂಟೆ ಸುಮಾರಿಗೆ ಏಮ್ಸ್‌ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.

publive-image

ಏಮ್ಸ್ ಆಸ್ಪತ್ರೆಯತ್ತ ಕಾಂಗ್ರೆಸ್ ನಾಯಕರ ದೌಡಾಯಿಸಿದ್ದು, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಅವರು ಅಂತಿಮ ದರ್ಶನಕ್ಕೆ ತೆರಳಿದ್ದಾರೆ. ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬೆಳಗಾವಿಯಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

publive-image

ಮನಮೋಹನ್ ಸಿಂಗ್ ಅವರು ದೇಶದ ಹಣಕಾಸು ಸಚಿವರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.  1991ರಲ್ಲಿ ಪಿ.ವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಮೊದಲ ಬಾರಿಗೆ ವಿತ್ತ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು. 2004 ರಿಂದ 2014ರವರೆಗೂ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

publive-image

ಕಳೆದ ಏಪ್ರಿಲ್ ತಿಂಗಳಲ್ಲಿ ಮನಮೋಹನ್ ಸಿಂಗ್ ಅವರು ರಾಜ್ಯಸಭಾ ಸದಸ್ಯ ಸ್ಥಾನದಿಂದ ನಿವೃತ್ತಿ ಪಡೆದುಕೊಂಡಿದ್ದರು. ಸೆಪ್ಟೆಂಬರ್ 26, 1932ರಂದು ಪಂಜಾಬ್‌ನ ಗಾಹ್‌ನ ಸಿಖ್ ಕುಟುಂಬದಲ್ಲಿ ಸಿಂಗ್ ಮನಮೋಹನ್ ಸಿಂಗ್ ಜನಿಸಿದ್ದರು. ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿ ಪುತ್ರರಾಗಿದ್ದಾರೆ ಮನಮೋಹನ್ ಸಿಂಗ್. ಉರ್ದು ಮಾಧ್ಯಮದಲ್ಲಿ ಆರಂಭಿಕ ಶಾಲಾ ಶಿಕ್ಷಣ ಮುಗಿಸಿದ್ದರು.

publive-image

1948ರಲ್ಲಿ ಅಮೃತಸರದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಪಂಜಾಬ್ ವಿ.ವಿಯಲ್ಲಿ ವ್ಯಾಸಂಗದ ಬಳಿಕ ಉನ್ನತ ಶಿಕ್ಷಣ ತೆಗೆದುಕೊಂಡಿದ್ದರು. ಹೋಶಿಯಾರ್ಪುರದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು. 1952ರಿಂದ 1954 ರಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದ್ದರು.

publive-image

1957ರಲ್ಲಿ ಕೇಂಬ್ರಿಡ್ಜ್ ವಿವಿಯಲ್ಲಿ ಅರ್ಥಶಾಸ್ತ್ರ ಟ್ರೈಪೋಸ್ ಮಾಡಿ, ಇದಾದ ಬಳಿಕ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಾಗಿ ಸೇವೆ ಸಲ್ಲಿಸಿದ್ದರು. 1957 ರಿಂದ 1959ರವರೆಗೆ ಅರ್ಥಶಾಸ್ತ್ರ ಹಿರಿಯ ಉಪನ್ಯಾಸಕ ಆದರು. ಐ.ಎಂ.ಡಿ. ಲಿಟಲ್ ಅವರ ಮೇಲ್ವಿಚಾರಣೆಯಲ್ಲಿ ಪಿಹೆಚ್‌ಡಿ ಮಾಡಿದ್ದರು.

publive-image

1959-1963ರವರೆಗೆ ಅರ್ಥಶಾಸ್ತ್ರದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದ್ದರು. 1969-1971, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರಾಧ್ಯಾಪಕ ಆಗಿದ್ದರು. ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿ ಸಿಂಗ್ ಸೇವೆ ಸಲ್ಲಿಸಿ. 1972ರಲ್ಲಿ ಹಣಕಾಸು ಸಚಿವಾಲಯ ಮುಖ್ಯ ಆರ್ಥಿಕ ಸಲಹೆಗಾರ ಆಗಿದ್ದರು.

publive-image

1976ರಲ್ಲಿ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿ ಆದ್ರು. 1980-1982ರಲ್ಲಿ ಯೋಜನಾ ಆಯೋಗದಲ್ಲಿ ಕಾರ್ಯನಿರ್ವಹಣೆ ಮಾಡಿದ್ದರು. 1982ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ಹೊರ ಹೊಮ್ಮಿದರು.

publive-image

1985-1987ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷ ಆದರು. 1987-1990ರವರೆಗೆ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಕಾರ್ಯ ನಿರ್ವಹಿಸಿದ್ದರು. ಸೌತ್ ಕಮಿಷನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ಹಾಗೂ 1991ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾಗಿದ್ದರು.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment