ವಾಹನ ಖರೀದಿಗೆ ಶುಭದಿನ, ಆಸ್ತಿಯ ವಿಚಾರದಲ್ಲಿ ಕಲಹ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಬೇರೆಯವರ ಹಣ ಅಥವಾ ದ್ರವ್ಯದ ನಿರೀಕ್ಷೆಯಲ್ಲಿದ್ದರೆ ಅನುಕೂಲವಿದೆ
  • ತುಂಬಾ ತಾಳ್ಮೆಯಿಂದ ಎಲ್ಲಾ ಕೆಲಸವನ್ನು ನಿಭಾಯಿಸಬೇಕಾಗಲಿದೆ
  • ವ್ಯಾವಹಾರಿಕವಾಗಿ ಸಾಲದ ಚಿಂತನೆ ಮಾಡುತ್ತೀರಿ ಯಶಸ್ಸು ಸಿಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಸಮಾಜದಲ್ಲಿ ಉನ್ನತವಾದ ಸ್ಥಾನಮಾನ ಸಿಗಬಹುದು
  • ಬೇರೆಯವರ ಹಣ ಅಥವಾ ದ್ರವ್ಯದ ನಿರೀಕ್ಷೆಯಲ್ಲಿದ್ದರೆ ಅನುಕೂಲವಿದೆ
  • ಗುರುಹಿರಿಯರ ಆಶೀರ್ವಾದ ಪಡೆಯಿರಿ
  • ನಿಮ್ಮ ಸ್ನೇಹಿತರ ಕಷ್ಟಕ್ಕೆ ಸಹಾಯ ಮಾಡುತ್ತೀರಿ
  • ಯಾವುದೇ ರೀತಿಯ ವಿವಾದಕ್ಕೆ ಅವಕಾಶ ಬೇಡ
  • ಬೇರೆಯವರ ಮನಸ್ಸನ್ನು ಕೆರಳಿಸುವ ಮಾತುಗಳು ಬೇಡ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ನೌಕರಿಯಲ್ಲಿ ಭಡ್ತಿ ಸಿಗಬಹುದು
  • ಬಂಧುಗಳಲ್ಲಿ ಮನಸ್ತಾಪ ಉಂಟಾಗಬಹುದು
  • ಮಾನಸಿಕವಾಗಿ ಬೇಸರ ಆಗಬಹುದು
  • ಯಾರಿಗೆ ಒಳ್ಳೆಯದನ್ನು ಮಾಡಿದರು ಪ್ರಯೋಜನವಿಲ್ಲ
  • ಸುಮ್ಮನಿರುವುದೇ ಮನಸ್ಸಿಗೆ ಶಾಂತಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಸಿಕ್ಕ ಅವಕಾಶಗಳು ಸದುಪಯೋಗವಾಗಲಿ
  • ಹೂಡಿಕೆ ಹಣದಿಂದ ಉತ್ತಮ ಆದಾಯ ಬರಬಹುದು
  • ಚಂಚಲ ಮನಸ್ಥಿತಿ ನಷ್ಟದ ಸಾಧ್ಯತೆ
  • ಬಂಧುಗಳಲ್ಲಿ ವಿರೋಧವನ್ನು ಮಾಡಿಕೊಳ್ಳಬೇಡಿ ತೊಂದರೆಯಿದೆ
  • ಆಸ್ತಿ ವಿಚಾರದಲ್ಲಿ ತಾಳ್ಮೆಯಿರಲಿ
  • ಬರಬೇಕಾದನ್ನು ಜಾಣ್ಮೆಯಿಂದ ಪಡೆಯುವುದು ಬುದ್ಧಿವಂತಿಕೆ
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಮೇಲಾಧಿಕಾರಿಗಳಿಂದ ಅನುಕೂಲಕರ ದಿನ
  • ಮೇಲಾಧಿಕಾರಿಗಳಿಂದ ಅನುಕೂಲವಾಗಬಹುದು
  • ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
  • ಮನಸ್ಸಿಗೆ ಸಂಕಷ್ಟ ಆಗಲಿದೆ
  • ಬಂಧುಗಳ ಮಾತಿನಿಂದ ಕೋಪ ಬರಲಿದೆ
  • ವ್ಯಾವಹಾರಿಕವಾಗಿ ಅಸಮಾಧಾನ
  • ಇಂದು ಬೇಸರದ ದಿನ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ತುಂಬಾ ತಾಳ್ಮೆಯಿಂದ ಎಲ್ಲಾ ಕೆಲಸವನ್ನು ನಿಭಾಯಿಸಬೇಕಾಗಲಿದೆ
  • ಹೊಸ ವ್ಯಕ್ತಿಗಳ ಪರಿಚಯವಾಗಬಹುದು
  • ಕೆಲಸ ಕಾರ್ಯಗಳಲ್ಲಿ ನಿಧಾನಗತಿ
  • ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಅನುಕೂಲವಿದೆ
  • ಯಶಸ್ಸಿನ ಬಾಗಿಲು ತೆರೆದಿದೆ ಗಮನಿಸಿ
  • ಹಣಕಾಸಿನ ವಿಚಾರದಲ್ಲಿ ಪುಣ್ಯವಂತರು
  • ಈಶ್ವರನ ಆರಾಧನೆ ಮಾಡಿ

ಕನ್ಯಾ

publive-image

  • ರಿಯಲ್ ಎಸ್ಟೇಟ್ ಏಜೆಂಟ್ಸ್ ಗಳಿಗೆ ಅನುಕೂಲಕರ ದಿನ
  • ಮನಸ್ತಾಪಕ್ಕೆ ಹಲವಾರು ಮಾರ್ಗಗಳಿವೆ
  • ಆಸ್ತಿಯ ವಿಚಾರದಲ್ಲಿ ಕಲಹ ಉಂಟಾಗಬಹುದು
  • ಸಹೋದರ ವರ್ಗದ ಅಸಹಕಾರ
  • ಮನೆಯಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಬಹುದು
  • ಸಾಂಸಾರಿಕವಾಗಿ ಅನ್ಯೋನ್ಯತೆ ಅಗತ್ಯವಿದೆ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ತುಲಾ

publive-image

  • ನಿಮ್ಮ ಜವಾಬ್ದಾರಿಯುತವಾದ ಹೇಳಿಕೆ ಬಹಳ ಮುಖ್ಯವಾಗಲಿದೆ
  • ವ್ಯಾವಹಾರಿಕವಾಗಿ ಸಾಲದ ಚಿಂತನೆ ಮಾಡುತ್ತೀರಿ ಯಶಸ್ಸು ಸಿಗಲಿದೆ
  • ವಾಹನ ಖರೀದಿಗೆ ಚಿಂತನೆ ಲಾಭವಿದೆ
  • ಅಂದುಕೊಂಡ ಕೆಲಸ ಪೂರೈಸುವಲ್ಲಿ ಜಯಶೀಲರಾಗುತ್ತೀರಿ
  • ಮನೆಯವರ ಸಂಪೂರ್ಣ ಸಹಕಾರವಿರುತ್ತದೆ
  • ಶಿವರಾಧನೆ ಮಾಡಿ

ವೃಶ್ಚಿಕ

publive-image

  • ಸುಖಕ್ಕೆ ಧಕ್ಕೆ ಉಂಟಾಗಬಹುದು
  • ಮಿತ್ರರಿಂದ ಸಹಾಯ ಆಗಬಹುದು
  • ಮೇಲಾಧಿಕಾರಿಗಳಿಂದ ಕಿರುಕುಳ ಆಗಬಹುದು
  • ವಿವಾಹ ವಿಚಾರಕ್ಕೆ ಅಡ್ಡಿ ಉಂಟಾಗಬಹುದು
  • ಮನೆಯಲ್ಲಿ ಹೊಂದಾಣಿಕೆ ಇರುವುದಿಲ್ಲ
  • ನೌಕರಿ ಹುಡುಕುತ್ತಿರುವವರಿಗೆ ಅಸಮಾಧಾನ
  • ದುರ್ಗಾಪೂಜೆಯನ್ನು ಮಾಡಿ

ಧನಸ್ಸು

publive-image

  • ಮಾತಿನ ಮೇಲೆ ನಿಗಾ ಇರಲಿ ಇಲ್ಲದಿದ್ದರೆ ತೊಂದರೆ ಆಗಬಹುದು
  • ಅಕಾಲ ಭೋಜನ ಆರೋಗ್ಯದಲ್ಲಿ ಏರುಪೇರಾಗಬಹುದು
  • ಮಂಗಳಕಾರ್ಯಕ್ಕೆ ಅಡಚಣೆ ಉಂಟಾಗಬಹುದು
  • ಸಾಲ ಮಾಡುವ ಪರಿಸ್ಥಿತಿ ಬರಬಹುದು
  • ಮನೆಯಲ್ಲಿ ಹೊಂದಾಣಿಕೆಯಿರಲಿ
  • ಹಣದ ವಿಚಾರಕ್ಕೆ ಜಗಳವಾಗಬಹುದು
  • ಋಣಮೋಚನ ಮಂಗಳ ಸ್ತೋತ್ರ ಪಠಣೆ ಮಾಡಿ

ಮಕರ

publive-image

  • ಸ್ವಯಂಕೃತ ಅಪರಾಧದಿಂದ ಅಭಿವೃದ್ಧಿ ಕುಂಠಿತವಾಗಬಹುದು
  • ಆಪ್ತರಿಂದ ಅಸಹಕಾರ
  • ಮನೆಯಲ್ಲಿ ವಿವಾದಗಳು ತಾರಕಕ್ಕೇರಬಹುದು
  • ಹಿರಿಯರ ಅವಕೃಪೆಗೆ ಒಳಗಾಗುತ್ತೀರಿ
  • ಅತಿಯಾದ ಪ್ರಯಾಣ ಸಮಸ್ಯೆ ಉಂಟು ಮಾಡಬಹುದು
  • ಸಮಾಜದಲ್ಲಿ ಟೀಕೆಗೆ ಅಥವಾ ಅಪಹಾಸ್ಯಕ್ಕೆ ಒಳಗಾಗುತ್ತೀರಿ
  • ಶಕ್ತಿ ದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ಅನಗತ್ಯವಾದ ಖರ್ಚಿಗೆ ನೂರು ದಾರಿ
  • ವಿರೋಧಿಗಳಿಂದ ಕಿರುಕುಳ ಹೆಚ್ಚಾಗಬಹುದು
  • ಅಧಿಕ ಕೋಪದಿಂದ ಕೆಲಸ ಹಾಳಾಗಬಹುದು
  • ಮನೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗಬಹುದು
  • ಸ್ನೇಹಿತರ ಸಲಹೆ ಮಾರಕವಾಗುಬಹುದು
  • ವ್ಯಾವಹಾರಿಕವಾಗಿ ಬದಲಾವಣೆ ಕಾಣಬಹುದು
  • ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ

ಮೀನ 

publive-image

  • ತುಂಬಾ ಪರಿಶ್ರಮದಿಂದ ಕಾರ್ಯದ ಯಶಸ್ಸು
  • ನಿಮ್ಮ ಬುದ್ಧಿವಂತಿಕೆಗೆ ಬೆಲೆ ಇಲ್ಲ
  • ಇಂದು ಅಧಿಕವಾದ ತಿರುಗಾಟ
  • ಈ ದಿನ ನಂಬಿಕಸ್ಥರಿಂದ ಅಶಾಂತಿ
  • ಅನಾವಶ್ಯಕ ವಿಚಾರಗಳಿಂದ ದೂರವಿರಬೇಕು
  • ಇಂದು ತಾಳ್ಮೆಯಿರಲಿ ಯಶಸ್ಸಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment