10 ವರ್ಷಗಳಿಂದ ಪವಿತ್ರಾ ಗೌಡ ಜೊತೆ ಲಿವ್ ಇನ್ ರಿಲೇಷನ್ಶಿಪ್
ಆರ್ಆರ್ ನಗರದ ನನ್ನ ಮನೆಯಿಂದ 1.5 ಕಿ.ಮೀ. ದೂರದಲ್ಲಿದ್ದಾರೆ!
ಪವನ್, ನನ್ನ ಹಾಗೂ ಪವಿತ್ರಾ ಮನೆಯಲ್ಲಿ ಕೆಲಸ ಮಾಡ್ತಾನೆ ಎಂದ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಲಾಗಿದೆ. ಇಂದು ವಿಚಾರಣೆ ನಡೆದ 24ನೇ ACMM ಕೋರ್ಟ್ ಡಿ ಗ್ಯಾಂಗ್ಗೆ ಮತ್ತೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ. ಇದರ ಮಧ್ಯೆ ಚಾರ್ಜ್ಶೀಟ್ ಪ್ರತಿ ಲಭ್ಯವಾಗಿದ್ದು, ನಟ ದರ್ಶನ್ ಹತ್ಯೆ ನಡೆದ ದಿನ ಆಗಿದ್ದೇನು? ಎಂದು ಪೊಲೀಸ್ರ ಮುಂದೆ ಬಾಯ್ಬಿಟ್ಟಿದ್ದಾರೆ.
ಪೊಲೀಸ್ರ ಮುಂದೆ ದರ್ಶನ್ ಹೇಳಿದ್ದೇನು? ಚಾರ್ಜ್ಶೀಟ್ನಲ್ಲಿ ಇರೋದೇನು?
- 10 ವರ್ಷಗಳಿಂದ ಪವಿತ್ರಾ ಗೌಡ ಜೊತೆ ಲಿವ್ ಇನ್ ರಿಲೇಷನ್ಶಿಪ್
- ಆರ್ಆರ್ ನಗರದ ನನ್ನ ಮನೆಯಿಂದ 1.5 ಕಿ.ಮೀ. ದೂರದಲ್ಲಿದ್ದಾರೆ
- ಪವನ್, ನನ್ನ ಹಾಗೂ ಪವಿತ್ರಾ ಮನೆಯಲ್ಲಿ ಕೆಲಸ ಮಾಡುತ್ತಾನೆ
- 8 ವರ್ಷಗಳಿಂದ ಮನೆ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾನೆ
- ನಂದೀಶ್ ಆಗಾಗ ನನ್ನ ಮನೆಯ ಬಳಿ ಬರುತ್ತಿದ್ದ, ನನ್ನ ಅಭಿಮಾನಿ
- ಲಕ್ಷ್ಮಣ್ 15 ವರ್ಷಗಳಿಂದ ನನ್ನ ಬಳಿ ಕಾರ್ ಡ್ರೈವರ್ ಆಗಿದ್ದಾರೆ
- ವಿನಯ್ 3-4 ವರ್ಷಗಳಿಂದ ಕಾಮನ್ ಫ್ರೆಂಡ್ಗಳಿಂದ ಪರಿಚಯ
- ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದ ವಿನಯ್
- ಮೈಸೂರಿನ ಫಾರ್ಮ್ ಹೌಸ್ನ ನಾಗರಾಜ್ ನೋಡಿಕೊಳ್ಳುತ್ತಾರೆ
- ವಿನಯ್ ಸ್ನೇಹಿತ ದೀಪಕ್, ಪರಿಚಯವಾಗಿದ್ದೂ ವಿನಯ್ರಿಂದಲೇ
- 16 ವರ್ಷಗಳಿಂದ ಪ್ರದೂಷ್ ಪರಿಚಯ, ಆಗಾಗ ಮನೆಗೆ ಬರ್ತಿದ್ದ
- ಚಿತ್ರದುರ್ಗದ ರಾಘವೇಂದ್ರ @ ರಘು ಕೂಡ ನನ್ನ ಅಭಿಮಾನಿ
- ದರ್ಶನ್ ಅಭಿಮಾನಿ ಸಂಘ ಕಟ್ಟಿಕೊಂಡು ಅದರ ಅಧ್ಯಕ್ಷನಾಗಿದ್ದಾನೆ
- ವಿಶೇಷ ಸಂದರ್ಭಗಳಲ್ಲಿ ನನ್ನ ಮನೆಗೆ ರಘು ಬಂದು ಹೋಗುತ್ತಿದ್ದ
- ಚಿತ್ರ ನಟರಾಗಿರುವ ಚಿಕ್ಕಣ್ಣ, ಬುಲ್ಬುಲ್ ಚಿತ್ರದ ಸಮಯದಲ್ಲಿ ಪರಿಚಯ
- ಚಿತ್ರ ನಟ ಯಶಸ್ ಸೂರ್ಯ ಸಹ ನಮ್ಮ ಜೊತೆಯಲ್ಲಿ ಸಂಪರ್ಕದಲ್ಲಿರ್ತಾರೆ
- ಶನಿವಾರ 8ನೇ ತಾರೀಕು ವರ್ಕೌಟ್ ಮುಗಿಸಿ ಮನೆಯಲ್ಲಿದ್ದೆ
- ಮಧ್ಯಾಹ್ನ ಪ್ರದೂಷ್ ಹಾಗೂ ನಾಗರಾಜ್ ಜೊತೆ ಹೋಗಿದ್ದೆ
- ಇಬ್ಬರ ಜೊತೆಗೆ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ಗೆ ಹೋಗಿದ್ದೆ
- ರೆಸ್ಟೋರೆಂಟ್ನಲ್ಲಿ ವಿನಯ್, ಯಶಸ್ ಸೂರ್ಯ ಇದ್ದರು
- ನಾನು ಹೋದ ನಂತರ ರೆಸ್ಟೋರೆಂಟ್ಗೆ ಚಿಕ್ಕಣ್ಣ ಸಹ ಬಂದರು
- ಅಲ್ಲೇ ಮಧ್ಯಾಹ್ನ ಊಟ ಮಾಡಿ, ಟೇಬಲ್ ಬಳಿ ಕುಳಿತು ಮಾತು
- ಮಧ್ಯಾಹ್ನ 3 ಗಂಟೆಗೆ ಪವನ್ ನನ್ನ ಬಳಿ ಬಂದು ಮೊಬೈಲ್ ತೋರಿಸಿದ್ದ
- ಪವಿತ್ರಾ ಅಕ್ಕನಿಗೆ ಗೌತಮ್ .ಎಸ್ ಎನ್ನುವವನಿಂದ ಫೋಟೋಗಳು
- ಹಲವು ದಿನದಿಂದ ಖಾಸಗಿ ಅಂಗಾಂಗದ ಫೋಟಗಳು ಕಳುಹಿಸುತ್ತಿದ್ದ
- ನಿನ್ನ ರೇಟ್ ಎಷ್ಟು, ರೂಮ್ ಮಾಡ್ತೇನೆ, ನೀ ಬಾ, ನಾನು ಚೆನ್ನಾಗಿದ್ದೇನೆ
- ಪವಿತ್ರಾಗೆ ಮೆಸೇಜ್ ಮಾಡುತ್ತಿದ್ದ ಅಂತ ಮೊಬೈಲ್ ತೋರಿಸಿದ್ದ
- ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಮೆಸೇಜ್ಗಳನ್ನ ಮಾಡ್ತಿದ್ದ
- ರಘು ಮತ್ತವನ ಸ್ನೇಹಿತರು ಕಿಡ್ನಾಪ್ ಮಾಡಿ ಕರೆದುಕೊಂಡು ಬಂದಿದ್ದಾರೆ
- ಪಾರ್ಕಿಂಗ್ ಶೆಡ್ನಲ್ಲಿ ಇಟ್ಟಿದ್ದಾರೆ ಅಂತ ಪವನ್ ಮಾಹಿತಿ ಕೊಟ್ಟಿದ್ದ
- ನಾನು, ವಿನಯ್, ಪ್ರದೂಷ್, ಸ್ಕಾರ್ಪಿಯೋದಲ್ಲಿ ಪವಿತ್ರಾ ಮನೆಗೆ
- ಪವಿತ್ರಾ ಕರೆದುಕೊಂಡು ಸಂ.4.30ಕ್ಕೆ ಯಾರ್ಡ್ಗೆ ನಾವು ತಲುಪಿದ್ವಿ
- ನಾವು ಕೆಳಗೆ ಇಳಿಯುತ್ತಿದ್ದಂತೆ ಪವನ್ ನಮ್ಮ ಬಳಿಗೆ ಬಂದಿದ್ದ
- ವಾಹನದ ಬಂಪರ್ಗೆ ಒರಗಿಕೊಂಡಿದ್ದ ಒಬ್ಬ ವ್ಯಕ್ತಿಯನ್ನ ತೋರಿಸಿದ
- ಪವಿತ್ರಾ ಅಕ್ಕನಿಗೆ ಮೆಸೇಜ್ ಕಳಿಸಿದ ವ್ಯಕ್ತಿ ಇವನೇ ಅಂತ ಹೇಳಿದ
- ರಘು, ದೀಪು, ನಂದೀಶ್ ಕೂಡ ಈ ಸಮಯದಲ್ಲಿ ಅಲ್ಲೇ ಇದ್ರು
- ನಾನು ನೋಡಿದಾಗ, ಆತ ಬಹಳ ಆಯಾಸಗೊಂಡವನಂತೆ ಇದ್ದ
- ಬ್ಲೂ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ್ ಹಾಕಿಕೊಂಡಿದ್ದ ಆ ವ್ಯಕ್ತಿ
- ನಾನು ಬರುವ ಮೊದಲು ಆತನಿಗೆ ಹೊಡೆದಂತೆ ಕಂಡು ಬಂತು
- ಇದನ್ನ ಕಳುಹಿಸಿದ್ದು ನೀನೇನಾ ಅಂತ ನಾನು ಆತನಿಗೆ ಕೇಳಿದೆ
- ಅದಕ್ಕೆ ಅವನು, ಹೌದು ನಾನೆ ಕಳಿಸಿದ್ದು ಅಂತ ಉತ್ತರಿಸಿದ
- ಇದು ನಿನಗೆ ಬೇಕಾ? ನಿನ್ನ ಸಂಬಳ ಎಷ್ಟು ಅಂತ ನಾನು ಕೇಳಿದೆ
- 20 ಸಾವಿರ ಸಂಬಳದಲ್ಲಿ ಇವ್ಳನ್ನ ಮೆಂಟೇನ್ ಮಾಡೋಕಾಗುತ್ತಾ?
- ಈ ರೀತಿ ಕೆಟ್ಟದಾಗಿ ಬಾ ಅಂತ ಮೆಸೇಜ್ ಮಾಡಿದ್ದೀಯಲ್ಲಾ ಅಂತ ಕೇಳ್ದೆ
- ನಾನು ಕೇಳಿದ ಪ್ರಶ್ನೆಗೆ ಆತ ಏನನ್ನೂ ಮಾತನಾಡಲಿಲ್ಲ – ದರ್ಶನ್
- ಕೈನಿಂದ ಹೊಡೆದೆ, ಕಾಲಿನಿಂದ ಎದೆ, ಕುತ್ತಿಗೆ, ತಲೆಗೆ ಬಲವಾಗಿ ಹೊಡೆದೆ
- ಬಾಗಿದ್ದ ಮರದ ಕೊಂಬೆ ಮುರಿದು ಅದರಲ್ಲೂ ಆತನಿಗೆ ಹೊಡೆದೆ
- ನನ್ನ ಕೈಗಳಿಂದಲೂ ಆತನಿಗೆ ನಾನು ಒಂದೆರಡು ಏಟು ಗುದ್ದಿದೆ
- ನಂತರ ಕಾರ್ನಲ್ಲಿ ಕುಳಿತಿದ್ದ ಪವಿತ್ರಾಳನ್ನ ಕರೆತರಲು ಹೇಳಿದೆ
- ನೋಡು ನೀನು ಮೆಸೇಜ್ ಮಾಡ್ತಿದ್ದವಳು ಇವಳೇನೆ ಅಂತ ಆತನಿಗೆ ಹೇಳ್ದೆ
ಇದನ್ನೂ ಓದಿ: ನಿನ್ನೆ ರಾತ್ರಿ ದರ್ಶನ್ಗೆ ಮತ್ತಷ್ಟು ಟೆನ್ಷನ್, ಬಿಡುವಿಲ್ಲದ ಚಡಪಡಿಕೆ.. ಕೋರ್ಟ್ನಲ್ಲಿ ಇಂದು ಮಹತ್ವದ ಬೆಳವಣಿಗೆ ನಿರೀಕ್ಷೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ