/newsfirstlive-kannada/media/post_attachments/wp-content/uploads/2025/06/sagar-patil-.png)
ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಯುವಕನೊಬ್ಬ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕ್ತಾ ಇರೋ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಅದು ಯಾರು ಅಂತಾ ನೋಡ್ತಾ ಹೋದ್ರೆ ಸಾಗರ್ ಪಾಟೀಲ್ ಅನ್ನೋದ್ ಹೊತ್ತಾಗುತ್ತೆ. ಗುಜರಾತ್‌ನಲ್ಲಿ ಆಗಿರೋ ಘನಘೋರ ವಿಮಾನ ದುರಂತ ಆತನ ಪ್ರೀತಿಯನ್ನ ನುಗ್ಗಿ ಬಿಟ್ಟಿದೆ.
ಇದನ್ನೂ ಓದಿ:ನಾ ನಿನ್ನ ಬಿಡಲಾರೆ ದುರ್ಗಾಗೆ ಸರ್ಪ್ರೈಸ್ ಕೊಟ್ಟ ಸೀರಿಯಲ್ ತಂಡ.. ಏನದು?
ಜೂನ್ 12 ಭಾರತೀಯದ ಪಾಲಿಗೆ ಕರಾಳ ದಿನ. ಕಾರಣ ಏರ್ ಇಂಡಿಯಾ ಮಹಾದುರಂತ. ಅಂದು ಮಧ್ಯಾಹ್ನ 1.38ಕ್ಕೆ ಗುಜರಾತ್‌ನ ಅಹಮದಾಬಾದ್‌ನಿಂದ ಏರ್ ಇಂಡಿಯಾ ಫ್ಲೈಟ್ ಲಂಡನ್‌ಗೆ ಟೇಕ್‌ಅಫ್ ಆಗಿತ್ತು. ಟೇಕ್‌ಅಫ್ ಆಗಿ ಒಂದು ನಿಮಿಷ ಆಗೋದ್ರಲ್ಲಿ ಇಡೀ ವಿಮಾನ ಮೆಡಿಕಲ್ ಕಾಲೇಜಿನ ಹಾಸ್ಟೇಲ್ ಮೇಲೆ ಬಿದ್ದು ಧಗಧಗಿಸಿ ಉರಿದು ಬೂದಿಯಾಗಿತ್ತು. ಫ್ಲೈಟ್‌ನಲ್ಲಿದ್ದ 242 ಮಂದಿಯಲ್ಲಿ 241 ಮಂದಿ ಸಜೀವ ದಹನವಾಗಿದ್ರೆ, ರಸ್ತೆಯಲ್ಲಿ ಹೋಗ್ತಾ ಇದ್ದವ್ರು. ಹಾಸ್ಟೇಲ್‌ನಲ್ಲಿ ಊಟ ಮಾಡ್ತಾ ಇದ್ದವು ಎಲ್ಲರನ್ನೂ ಸೇರಿದ್ರೆ ಈ ದುರಂತದಲ್ಲಿ ಪ್ರಾಣ ಕಳ್ಕೊಂಡಿದ್ದು ಬರೋಬ್ಬರಿ 270 ಜನ. ಅದ್ರಲ್ಲಿ ಏರ್ ಇಂಡಿಯಾ ಗಗನಸಖಿ ಮನೀಷಾ ಥಾಪ ಕೂಡ ಒಬ್ಬಳು. ಮನೀಷಾ ಅಗಲಿಕೆಯಿಂದ ಬಿಹಾರದ ಪಾಟ್ನಾದಲ್ಲಿರೋ ಆಕೆಯ ಇಡೀ ಕುಟುಂಬ ಚೇತರಿಸಿಕೊಂಡಿಲ್ಲ. ಹಾಗೇ ಆಕೆಯ ಗೆಳೆಯ ಸಾಗರ್ ಪಾಟೀಲ್‌ಗೂ ಏನ್ ಮಾಡ್ಬೇಕು ಅಂತಾ ದಿಕ್ಕೆ ತೋಚುತ್ತಿಲ್ಲ. ಘೋರ ದುರಂತ ನಡೆದು ಒಂದ್ ವಾರವಾದ್ರೂ ಇನ್ನೂ ಸಹಿಸಿಕೊಳ್ಳಲಾಗದ ನೋವಲ್ಲಿ ಸಾಗರ್‌ಗೆ ಸರಿಯಾಗಿ ಊಟ ಮಾಡಲಾಗದೇ, ನಿದ್ರೆಗೆ ಜಾರಲಾಗದೇ ವಿಲವಿಲ ಒದ್ದಾಡುವ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
ಗಗನಸಖಿ ಮನೀಷಾ ಥಾಪ ಲಂಡನ್‌ಗೆ ಫ್ಲೈಟ್ ಹೊರಡೋದಕ್ಕೂ ಮುನ್ನ ತಮ್ಮ ಮನೆಗೆ ಫೋನ್ ಮಾಡಿ ಅಜ್ಜಿ ಮತ್ತು ತಾಯಿ ಜೊತೆ ಮಾತಾಡಿದ್ಲು. ಹಾಗೇ ಸಾಗರ್ ಜೊತೆಗೂ ಮಾತಾಡಿದ್ಲಂತೆ. ಆ ಫೋನ್ ಮಾಡಿ ಕೆಲವೇ ಕ್ಷಣದಲ್ಲಿ ವಿಮಾನ ದುರಂತ ನಡೆದು ಹೋಗಿದೆ. ಆ ಸುದ್ದಿ ಸಾಗರ್ ಪಾಟೀಲ್ ಕಿವಿಗೆ ಬೀಳ್ತಾ ಇದ್ದಂತೆ ಮೈ ನಡುಗಿ ಹೋಗಿದೆ. ಟಿವಿಯಲ್ಲಿ ಬರ್ತಾ ಇದ್ದ ಕ್ಷಣ ಕ್ಷಣದ ಸುದ್ದಿಯನ್ನ ನೋಡ್ತಾ ಅಲ್ಲೇ ಕಣ್ಣೀರಿಟ್ಟಿದ್ದಾರೆ. ಮನಸ್ಸಿನಲ್ಲೇ ತನ್ನ ಗರ್ಲ್‌ಫ್ರೆಂಡ್ ಬದುಕಿದ್ರೆ ಸಾಕಪ್ಪ ಅಂತಾ ಪದೇ ಪದೇ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಹಾಗೇ ಯಾವುದಾದ್ರೂ ಪವಾಡ ರೂಪದಲ್ಲಿ ಮನೀಷಾ ಬದುಕಿರಬಹುದು ಅನ್ನೋ ಆಸೆಯನ್ನ ಹೊತ್ತು, ಅಂತಾ ಪವಾಡ ನಡೆಯಲಿ ಅಂತಾ ಮನಸ್ಸಿನಲ್ಲೇ ದೇವರಿಗೆ ಪ್ರಾರ್ಥಿಸುತ್ತ ಸ್ಥಳಕ್ಕೆ ಹೋಗಿದ್ರು ಸಾಗರ್ ಪಾಚೀಲ್. ಹಾಗೇ ಹೊಗಿದ್ದ ಸಾಗರ್‌ಗೆ ಸಿಕ್ಕಿದ್ದು ಶಾಕಿಂಗ್ ಸುದ್ದಿ.
ದುರಂತದ ದಿನ ಗುಜರಾತ್‌ಗೆ ಬಂದಿದ್ದ ಸಾಗರ್ ಅಲ್ಲಿಂದ ಜಾಗ ಬಿಟ್ಟು ಕದಲಿರಲಿಲ್ಲ. ದುರಂತದ ಸ್ಥಳ, ಆಸ್ಪತ್ರೆ, ಡಿಎನ್‌ಎ ಟೆಸ್ಟ್ ಮಾಡ್ತಾ ಇರೋ ಕೇಂದ್ರದ ಸುತ್ತವೇ ಓಡಾಡ್ತಾ ಇದ್ದ. ಹಾಗೇ ಮೃತ ಪಟ್ಟವರ ಡಿಎನ್‌ಎ ಟೆಸ್ಟ್ ಮಾಡ್ತಾ ಇರುವಾಗ ಅದರ ಹೊರ ಭಾಗದಲ್ಲಿ ಸಾಗರ್ ಆಗ್ತಾ ಇರೋದನ್ನ ನೋಡಿ ಸ್ಥಳೀಯ ವರದಿಗಾರರೊಬ್ಬರು ನಿಮ್ಗೆ ಯಾರು ಬೇಕಿತ್ತು? ಅಂತಾ ಪ್ರಶ್ನೆ ಮಾಡಿದ್ದಾರೆ. ಅದ್ಕೆ ಸಾಗರ್ ಪಾಟೀಲ್ ಕೊಟ್ಟಿರೋ ಉತ್ತರ ಮೈ ಲವ್. ಅಂದ್ರೆ ನನ್ನ ಪ್ರೀತಿ ಬೇಕಿತ್ತು ಅನ್ನೋ ಉತ್ತರ ನೀಡಿದ್ದಾರೆ. ಆ ಉತ್ತರ ಕೇಳಿದ ವರದಿಗಾರನಿಗೂ ಮರು ಪ್ರಶ್ನೆ ಮಾಡೋದಕ್ಕೆ ಸಾಧ್ಯವಾಗಿಲ್ಲ.
ಸಾಗರ್ ಪಾಟೀಲ್‌ಗೆ ತನ್ನ ಗೆಳತಿ ಮನೀಷಾ ಥಾಪಾ ಇನ್ನಿಲ್ಲ ಅನ್ನೋದ್ ಗೊತ್ತು. ಆದ್ರೆ, ಹೃದಯ ಅದನ್ನ ಸಹಿಸಿಕೊಳ್ತಾ ಇಲ್ಲ. ಆ ಹೃದಯ ಇಲ್ಲದೇ ತಾನು ಇರೋದು ಹೇಗೆ? ತಾನು ಜೀವಿಸೋದು ಹೇಗೆ? ಅಂತಾ ಆತನಲ್ಲಿರೋ ಹೃದಯ ಪದೇ ಪದೇ ಪ್ರಶ್ನೆ ಮಾಡ್ತಾನೇ ಇತ್ತು. ಅಂತಾ ಎಲ್ಲಾ ಸಂದರ್ಭದಲ್ಲಿಯೂ ಸಾಗರ್ ಕಣ್ಣೀರು ಹಾಕ್ತಿದ್ದ. ಹಾಗೇ ಅಳ್ತಾ ಇರೋ ಸಂದರ್ಭದಲ್ಲಿ ಯಾರೋ ಮಾಡಿದ ವಿಡಿಯೋಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ. ಸಾಗರ್ ಕಣ್ಣೀರು ನೋಡಿ ನೆಟ್ಟಿಗರು ಕರಗಿ ಹೋಗಿದ್ದಾರೆ. ಹೇ ವಿಧಿಯೇ ನೀನೇಕೆ ಪ್ರೀತಿ ಕಸಿದೆ ಅಂತಾ ಶಪಿಸ್ತಿದ್ದಾರೆ.
View this post on Instagram
ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್, ಅಲ್ಲಿ ಏನಿತ್ತು?
'ನೋವಿಂದ ಹೊರಬರಲು ಪ್ರಯತ್ನಿಸ್ತಿದ್ದೀನಿ'
ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದ. ಪ್ರತಿ ಮೆಸೇಜ್ ನೋಡಿ ಉತ್ತರಿಸುವುದು ಕಷ್ಟ. ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಈಗಾಗಿರುವ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ, ಹೆಚ್ಚು ಎಂಜಾಯ್ ಮಾಡಿ. ಅವರು ನಾಳೆ ಇರುತ್ತಾರೋ ಇಲ್ಲವೋ ಯಾರಿಗೂ ಗೊತ್ತಿಲ್ಲ.
-ಸಾಗರ್ ಪಟೇಲ್, ಮನೀಷಾ ಗೆಳಯ
ಯಾರು ಈ ಸಾಗರ್ ಪಾಟೀಲ್? ಪ್ರೀತಿಯಾಗಿದ್ದು ಹೇಗೆ?
ಏರ್ ಇಂಡಿಯಾ ಘನಘೋರ ದುರಂತದಲ್ಲಿ ಪ್ರಾಣ ಬಿಟ್ಟಿರೋ ಮನೀಷಾಳ ಸ್ನೇಹಿತಾನೇ ಈ ಸಾಗರ್. ಅವಳಿಗಾಗಿ ಪ್ರತಿ ದಿನ ಪ್ರತಿ ಕ್ಷಣ ಹಂಬಲಿಸ್ತಾ ಇರೋ ಗೆಳೆಯ ಯಾರು ಅನ್ನೋದ್ಕೆ ಇದುವೇ ಉತ್ತರ. ಈತ ಒಬ್ಬ ಗಾಯಕ, ಮಾಡೆಲ್, ಡ್ಯಾನ್ಸರ್, ಇನ್‌ಫ್ಲುಯೆನ್ಸರ್. ಮುಬೈ ನಿವಾಸಿ ಸಾಗರ್ ಪಾಟೀಲ್‌ಗೂ ಮನೀಷಾಗೂ ಪ್ರೀತಿ ಹುಟ್ಟಿದ್ದು ಹೇಗೆ? ಅನ್ನೋದಕ್ಕೆ ಇನ್ನೂ ನಿಖರ ಉತ್ತರ ಸಿಕ್ಕಿಲ್ಲ. ಪ್ಲೈಟ್‌ನಲ್ಲಿ ಸಾಗರ್ ಜರ್ನಿ ಮಾಡುವಾಗ ಇಬ್ಬರಿಗೂ ಪರಿಚಯವಾಗಿತ್ತು. ಆ ಪರಿಚಯ ಸ್ನೇಹವಾಗಿ, ಆಮೇಲೆ ಪ್ರೀತಿಯಾಗಿ ಟರ್ನ್ ತೆಗೆದ್ಕೊಂಡಿತ್ತು ಅಂತಾ ಹೇಳಲಾಗ್ತಿದೆ. ವಿಶೇಷ ಅಂದ್ರೆ, ಮನೀಷಾ ಪ್ರೀತಿ ಆಕೆಯ ಮನೆಯವರಿಗೂ ಗೊತ್ತಿತ್ತು. ಸಾಗರ್ ಅವರೆಲ್ಲರೂ ಚಿರಪರಿಚಿತರಾಗಿದ್ರು. ಇನ್ನು ಮನೀಷಾಳನ್ನ ಕಳ್ಕೊಂಡಿರೋ ದುಃಖದಲ್ಲಿರೋ ಸಾಗರ್ ಪಾಟೀಲ್ ಇನ್ನೊಂದ್ ಪೊಸ್ಟ್ ಮಾಡಿದ್ದು.
ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ.. ಈಗ 2500 ಕೋಟಿ ಒಡೆಯ.. ಯಾರು ಈ ಸ್ಟಾರ್ ಹೀರೋ?
'ಬ್ರೇಕ್ ತೆಗೆದುಕೊಳ್ಳುತ್ತೇನೆ'
ಜನ ನನ್ನೊಂದಿಗೆ ಎಂದಿಗೂ ಇರಬೇಕು ಅಂತ ನಾನು ಆಸೆಪಡ್ತಿದ್ದೆ. ನನ್ನನ್ನ ಜನ ಇಷ್ಟ ಪಡಬೇಕು ಎಂದು ಆಸೆ ಪಡ್ತಿದ್ದೆ. ಆದರೆ ಆಕೆ ಬದುಕು ಎಷ್ಟು ಖಾಸಗಿರುತ್ತೋ? ಅಷ್ಟು ಸರಿ ಇರುತ್ತೆ ಅಂತ ಹೇಳ್ತಿದ್ಲು. ಯಾರ ದೃಷ್ಟಿಯೂ ಬೀಳಲ್ಲ ಅಂತಿದ್ಲು. ಆದರೆ ಗೊತ್ತಿಲ್ಲ ಯಾರ ದೃಷ್ಟಿ ಬಿತ್ತು ಅಂತ. ಹೋಗ್ತಾ ಹೋಗ್ತಾ ಆಕೆ ನನಗೆ ಪ್ರಪಂಚದ ಪ್ರೀತಿ ಕೊಟ್ಟು ಹೋದಳು. ಹೆಸರು ಕೊಟ್ಳು.. ಜನರ ಪ್ರೀತಿಯನ್ನು ಕೊಟ್ಟು ಹೋದಳು. ಅವಳು ನನ್ನ ಲಕ್ಕಿ ಚಾರ್ಮ್.. ಯಾವತ್ತೂ ಲಕ್ಕಿ ಚಾರ್ಮ್ ಆಗಿರುತ್ತಾಳೆ. ನಾನು ಒಳಗಿಂದ ಚೂರು ಚೂರಾಗಿದ್ದೀನಿ. ಆದರೆ ನಿಮ್ಮ ಪ್ರೀತಿ ನನ್ನನ್ನ ಸಂಭಾಳಿಸಿತು. ನನ್ನನ್ನ ನಾನು ಗುಣಪಡಿಸಿಕೊಳ್ಳುವುದಕ್ಕೆ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳ ಬಯಸುತ್ತೇನೆ. ಹೀಗೆ ನನ್ನ ಜೊತೆಗಿರಿ. ನೀವು ನನ್ನ ಜೊತೆಗಿರುವುದು ನನಗೆ ಸ್ಫೂರ್ತಿ ತುಂಬುತ್ತೆ. ನನ್ನನ್ನ ಒಳ್ಳೆ ಮನುಷ್ಯನನ್ನಾಗಿ ಮಾಡುತ್ತೆ. ಐ ಮಿಸ್ ಹರ್.
-ಸಾಗರ್ ಪಾಟೀಲ್, ಮನೀಷಾ ಸ್ನೇಹಿತ
ಮನೀಷಾ ಥಾಪಾ ಕುಟುಂಬ ಮೂಲತಃ ನೇಪಾಳ ಮೂಲದ ಬಿರಾಟ್‌ನಗರದವರು. ಇವರ ತಂದೆ ರಾಜು ಥಾಪಾ ಹಲವಾರು ವರ್ಷಗಳಿಂದ ಪಾಟ್ನಾದಲ್ಲಿ ವಾಸವಾಗಿದ್ದಾರೆ. ಅವರ ಕುಟುಂಬದ ಎಲ್ಲಾ ಸಂದಸ್ಯರು ಮೊದಲಿನಿಂದಲೂ ಬಿಹಾರದ ಪಟ್ನಾದ ಜಗದೇವ್ ಪಥ್ ಬಳಿಯ ಗಾಂಧಿಪುರಂ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಹೀಗಾಗಿ ಮನೀಷಾ ಪಾಟ್ನಾದಲ್ಲಿಯೇ ಜನಿಸಿದ್ದಾರೆ. ಈಕೆಗೆ ತಾನು ಆಕಾಶದಲ್ಲಿ ಹಾರಾಡ್ಬೇಕು. ದೇಶಿ ವಿದೇಶ ಸುತ್ತಬೇಕು ಅನ್ನೋದ್ ಬಾಲ್ಯದ ಕನಸಾಗಿತ್ತು. ತಂದೆ ತಾಯಿ ಬಳಿ ಅದೇ ಕನಸನ್ನ ಹೇಳಿಕೊಳ್ತಾ ಇದ್ಲು. ಕಾಲೇಜಿನಲ್ಲಿ ಇರುವಾಗ ಸ್ನೇಹಿತರ ಬಳಿ ತಾನು ಗಗನಸಖಿ ಆಗ್ತೀನಿ ಅನ್ನೋ ಆತ್ಮವಿಶ್ವಾಸ ವ್ಯಕ್ತಪಡ್ಸಿಸ್ತಾ ಇದ್ಲಂತೆ. ಇನ್ನು ಓದಿನಲ್ಲಿ ಭಾರೀ ಜಾಣೆಯಾಗಿದ್ದ ಮನೀಷಾ ಅತ್ಯದ್ಭತ ನೃತ್ಯಪಟುವುದು ಹೌದು ಅನ್ನೋದನ್ನ ಆಕೆಯ ಸ್ನೇಹಿತೆಯರು ಹೇಳ್ತಿದ್ದಾರೆ. ದೊಡ್ಡ ದೊಡ್ಡ ಕನಸನ್ನ ಕಟ್ಟಿಕೊಂಡು ಗಗನಸಖಿಯಾಗಿದ್ದ ಮನೀಷಾ ಅಗಲಿಗೆ ತಂದೆ ತಾಯಿಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗ್ತಾ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ