ಚಂದನ್ ಶೆಟ್ಟಿ 2ನೇ ಮದುವೆ ಆದ್ರಾ? ರಿಸೆಪ್ಶನ್‌ ಫೋಟೋ ವೈರಲ್‌! ಏನಿದರ ಗುಟ್ಟು?

author-image
Veena Gangani
Updated On
ಚಂದನ್ ಶೆಟ್ಟಿ 2ನೇ ಮದುವೆ ಆದ್ರಾ? ರಿಸೆಪ್ಶನ್‌ ಫೋಟೋ ವೈರಲ್‌! ಏನಿದರ ಗುಟ್ಟು?
Advertisment
  • ಸೋಷಿಯಲ್​ ಮೀಡಿಯಾಲ್ಲಿ ವೈರಲ್​ ಆಗಿತ್ತು ಆ ನಟಿ ಜೊತೆಗಿನ ಫೋಟೋ
  • ನಿವೇದಿತಾ ಗೌಡ ಡಿವೋರ್ಸ್‌ ಬಳಿಕ ಮದುವೆಗೆ ಸಜ್ಜಾದ್ರಾ ಚಂದನ್‌ ಶೆಟ್ಟಿ
  • ಕೊನೆಗೆ ಎರಡನೇ ಮದುವೆ ಬಗ್ಗೆ ಮೌನ ಮುರಿದ ಕನ್ನಡದ ಸ್ಟಾರ್​ ಗಾಯಕ

ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಡಿವೋರ್ಸ್‌ ಪಡೆದುಕೊಂಡು 9 ತಿಂಗಳು ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಜೋಡಿ ಮುದ್ದು ರಾಕ್ಷಸಿ ಸಿನಿಮಾ ಶೂಟಿಂಗ್‌ಗಾಗಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಆದ್ರೆ ಡಿವೋರ್ಸ್ ನಂತರ ಮತ್ತೆ ಚಂದನ್ ಶೆಟ್ಟಿ ಅವರು ಮತ್ತೊಂದು ಮದುವೆ ಆಗೋದಕ್ಕೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್​ ಆಗಿತ್ತು.

ಇದನ್ನೂ ಓದಿ:ಉಡುಪಿಗೂ ರವಿಶಾಸ್ತ್ರಿಗೂ ಏನಿದೆ ನಂಟು? ವಿಶೇಷ ನಾಗ ದೇವರ ಪೂಜೆಯ ಟಾಪ್ 10 ಫೋಟೋ ಇಲ್ಲಿವೆ!

publive-image

ಮದುವೆ ಸಿದ್ಧತೆಯಲ್ಲಿದ್ದಾರೆ, ರಿಸೆಪ್ಶನ್​ಗಾಗಿ ಚಂದನ್ ಶೆಟ್ಟಿ ಲುಕ್​ ಅನ್ನೇ ಬದಲಾಯಿಸಿಕೊಂಡಿದ್ದಾರೆ. ಗಡ್ಡ ಮತ್ತು ಮೀಸೆ ತೆಗೆದಿದ್ದಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೇ ಚಂದನ್​ ಶೆಟ್ಟಿ ಅವರು ಸಲಗ ಸಿನಿಮಾ ಖ್ಯಾತಿಯ ಸಂಜನಾ ಆನಂದ್​ ಅವರ ಜೊತೆಗೆ ಮದುವೆ ಆಗಲಿದ್ದಾರೆ ಎಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

publive-image

ಚಂದನ್‌ ಶೆಟ್ಟಿ ಹೇಳಿದ್ದೇನು?

ನಾನು ಸಂಜನಾ ಮದುವೆ ಆಗ್ತಿವಿ ಅಂತ ಎಲ್ಲಾ ಕಡೆ ವೈರಲ್ ಆಗಿತ್ತು. ನನ್ನ ಸ್ನೇಹಿತರು ನನಗೆ ಕಾಲ್ ಮಾಡಿ ನಿನ್ನ ಸಂಜನಾ ಮದುವೆ ಅಂತ ಕೇಳ್ತಾರೆ. ನನ್ನ ಮದುವೆ ಬಗ್ಗೆ ನನಗೆ ಗೊತ್ತಿಲ್ಲ ಬೇರೆ ಎಲ್ಲಾ ಮಾತಾಡ್ತಾರೆ. ನಮ್ಮ ನಡುವೆ ಆ ತರಹದ ವಿಷ್ಯ ಏನು ಇಲ್ಲ. ಇದು AI ಬಳಸಿ ಫೋಟೋ ಎಡಿಟ್ ಮಾಡಲಾಗಿದೆ. ನಮ್ಮಿಬ್ಬರ ಮಧ್ಯೆ ಆ ಥರದ ಸಂಬಂಧ ಇಲ್ಲ. ನಾವು ಒಳ್ಳೆಯ ಫ್ರೆಂಡ್ಸ್ ಅಷ್ಟೇ. ಆದ್ರೆ ಯಾರೋ ನಿಮ್ಮಬ್ಬರ ರಿಸೆಪ್ಷನ್ ಫೋಟೋ ಎಡಿಟ್ ಮಾಡಿದ್ದಾರೆ. ಸದ್ಯಕ್ಕೆ ಎರಡನೇ ಮದುವೆ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದ್ದಾರೆ.

publive-image

ನಾಯಕ ನಟನಾಗಿ ಮಿಂಚೋಕೆ ಸಜ್ಜಾದ ಚಂದನ್ ಶೆಟ್ಟಿ

ಇದೇ ಮೊದಲ ಬಾರಿಗೆ ಡಿವೋರ್ಸ್ ನಂತರ ಚಂದನ್ ಶೆಟ್ಟಿ ನಾಯಕ ನಟನಾಗಿ ನಟಿಸಿದ್ದಾರೆ. ಸದ್ಯ ಗಾಯಕ ಚಂದನ್​ ಶೆಟ್ಟಿ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂತ್ರಧಾರಿ ಚಿತ್ರದ ಮೂಲಕ ನಟನಾಗಿ ಮಿಂಚಲು ಚಂದನ್ ಶೆಟ್ಟಿ ಸಜ್ಜಾಗಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ ಸೂತ್ರಧಾರಿ ಸಿನಿಮಾ. ಇನ್ನೂ ಚಂದನ್ ಶೆಟ್ಟಿಗೆ ನಾಯಕಿಯಾಗಿ ಸಲಗ ಖ್ಯಾತಿಯ ಸಂಜನಾ‌ ಹಾಗೂ ಅಪೂರ್ವ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸೂತ್ರಧಾರಿ ರಿಲೀಸ್‌ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಮೇ 9ಕ್ಕೆ ಸೂತ್ರಧಾರಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಮಾಧ್ಯಮಗಳ ಮುಂದೆ ಬಂದು ಚಿತ್ರದ ರಿಲೀಸ್ ಡೇಟ್ ಚಿತ್ರತಂಡ ಅನೌನ್ಸ್‌ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment