/newsfirstlive-kannada/media/post_attachments/wp-content/uploads/2024/05/SRH_RCB_KKR.jpg)
ಬಹುನಿರೀಕ್ಷಿತ 2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2024ರ ಐಪಿಎಲ್ ಫೈನಲ್​​ ಪಂದ್ಯದಲ್ಲಿ ಕೆಕೆಆರ್​​, ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಮುಖಾಮುಖಿ ಆಗುತ್ತಿವೆ.
ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ಕ್ಯಾಪ್ಟನ್​​ ಪ್ಯಾಟ್​ ಕಮಿನ್ಸ್​​​ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಶ್ರೇಯಸ್​ ಅಯ್ಯರ್​ ನಾಯಕತ್ವದ ಕೆಕೆಆರ್​​ ಬೌಲಿಂಗ್​ ಮಾಡಲಿದೆ. ಎರಡು ತಂಡಗಳಿಗೂ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಉಭಯ ತಂಡಗಳು ಕೇವಲ ಐಪಿಎಲ್ ಟ್ರೋಫಿಗಾಗಿ ಮಾತ್ರ ಹೋರಾಡುತ್ತಿಲ್ಲ, ನಗದು ಬಹುಮಾನದ ಮೇಲೂ ಕಣ್ಣಿಟ್ಟಿವೆ.
ಫೈನಲ್​​ ವಿಜೇತರಿಗೆ ಎಷ್ಟು ಕೋಟಿ ಸಿಗಲಿದೆ ಗೊತ್ತಾ?
ಹೌದು, ಐಪಿಎಲ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿದೆ. ಹಾಗಾಗಿ ಗೆದ್ದ ತಂಡಕ್ಕೆ ಭಾರೀ ನಗದು ಬಹುಮಾನ ನೀಡಲಾಗುತ್ತದೆ. ಫೈನಲ್ ಗೆದ್ದ ತಂಡ ಕನಿಷ್ಠ 20 ಕೋಟಿ ಪಡೆಯಲಿದೆ. ರನ್ನರ್-ಆಪ್ ತಂಡಕ್ಕೆ 13 ಕೋಟಿ ಸಿಗಲಿದೆ. 3ನೇ ಸ್ಥಾನದಲ್ಲಿರೋ ತಂಡಕ್ಕೆ 7 ಕೋಟಿ ಹಾಗೂ 4ನೇ ಸ್ಥಾನದ ತಂಡಕ್ಕೆ 6.5 ಕೋಟಿ ಸಿಗಲಿದೆ. ಹಾಗಾಗಿ 4ನೇ ಸ್ಥಾನದಲ್ಲಿದ್ದ ಆರ್​​ಸಿಬಿಗೆ 6.5 ಕೋಟಿ ಬಹುಮಾನ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us