R. ಅಶ್ವಿನ್‌ ನಿವೃತ್ತಿಗೆ ಅಸಲಿ ಕಾರಣ ಬಹಿರಂಗ; ಟೀಮ್​ ಇಂಡಿಯಾದಲ್ಲಿ ಅಸಮಾಧಾನದ ಹೊಗೆ!

author-image
Ganesh Nachikethu
Updated On
R ಅಶ್ವಿನ್​ ಬೆನ್ನಲ್ಲೇ ದಿಢೀರ್​ ನಿವೃತ್ತಿ ಘೋಷಿಸಿ ಬಿಗ್​​ ಶಾಕ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​!
Advertisment
  • ಖ್ಯಾತ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್‌ ನಿವೃತ್ತಿ ಘೋಷಣೆ..!
  • ಟೀಮ್​ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸಾಬೀತು
  • 3ನೇ ಟೆಸ್ಟ್​ ಮಧ್ಯೆಯೇ ಟೀಮ್​ ಇಂಡಿಯಾದಲ್ಲಿ ಅಸಮಾಧಾನದ ಹೊಗೆ

ಖ್ಯಾತ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್‌ ನಿವೃತ್ತಿ ಘೋಷಣೆ ಬೆನ್ನಲ್ಲೇ ಟೀಮ್​ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸಾಬೀತಾಗಿದೆ. ಇತ್ತೀಚೆಗೆ ನಡೆದ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ ಪಂದ್ಯದ ಮಧ್ಯೆಯೇ ಅಸಮಾಧಾನದ ಹೊಗೆ ಆಡುತ್ತಿರೋ ವಿಚಾರ ಬಹಿರಂಗ ಆಗಿದೆ.

3ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಡ್ರಾ ಸಾಧಿಸಿದವು. ಪಂದ್ಯ ಮುಗಿದ ಬೆನ್ನಲ್ಲೇ ಅಶ್ವಿನ್‌ ನಿವೃತ್ತಿ ಘೋಷಿಸಿದರು. ಇವರು ವಿದಾಯ ಹೇಳಿದ ರೀತಿ ಈಗ ಭಾರೀ ಚರ್ಚೆಗೆ ಒಳಗಾಗಿದೆ. ತನಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದು ಬೇಸರಗೊಂಡು ಅಶ್ವಿನ್ ಹೊರ ನಡೆದರು.

ಅಶ್ವಿನ್​​ ಏನಂದ್ರು?

ನಿವೃತ್ತಿ ಘೋಷಿಸಿ ಮಾತಾಡಿದ ಆರ್​. ಅಶ್ವಿನ್​ ಅವರು, ತಮ್ಮಲ್ಲಿ ಇನ್ನೂ ಕ್ರಿಕೆಟ್​ ಇದೆ ಎಂದಿದ್ದಾರೆ. ತನ್ನಲ್ಲಿ ಇರೋ ಕ್ರಿಕೆಟ್​​ ಅನ್ನು ಕ್ಲಬ್‌ ಮಟ್ಟದ ಟೂರ್ನಮೆಂಟ್​ ಮತ್ತು ಐಪಿಎಲ್‌ನಲ್ಲಿ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಹೇಳಿಕೆಯೇ ಟೀಮ್ ಇಂಡಿಯಾದಲ್ಲಿ ಅನುಭವಿ ಆಟಗಾರರಿಗೆ ಮನ್ನಣೆ ಇಲ್ಲ ಎಂಬುದು ಹೇಳುತ್ತಿದೆ.

ಟೀಮ್​ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್​​​​​​​​​ ಆರ್. ಅಶ್ವಿನ್ ದಿಢೀರ್ ನಿವೃತ್ತಿಯ ಹಿಂದೆ, ಸಾಕಷ್ಟು ಅಂತೆ ಕಂತೆಗಳು ಕೇಳಿ ಬರ್ತಿವೆ. ಅಶ್ವಿನ್ ಅವರ ಇಷ್ಟದಂತೆ ಇಂಟರ್ ​ನ್ಯಾಷನಲ್ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ರಾ ಅಥವಾ ಬಲವಂತದಿಂದ ಕ್ರಿಕೆಟ್​​ಗೆ ವಿದಾಯ ಘೋಷಿಸಿದ್ರಾ? ಈ ಮಾತುಗಳು ಈಗ ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ.

ಬ್ರಿಸ್ಬೇನ್ ಟೆಸ್ಟ್​ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಟೀಮ್ ಇಂಡಿಯಾ ಆಟಗಾರರು, ಸದ್ಯ ಸೋಲಿನಿಂದ ಬಚಾವ್ ಆದ್ವಿ ಅಂತ ಖುಷಿಯಲ್ಲಿರ್ತಾರೆ. ಆದ್ರೆ ಇದಕ್ಕಿದಂತೆ ಅಶ್ವಿನ್, ಸಹ ಆಟಗಾರರಿಗೆ ಸ್ಪೋಟಕ ಸುದ್ದಿಯೊಂದನ್ನ ಹೇಳ್ತಾರೆ. ಅದು ತಮ್ಮ ರಿಟೈರ್​ಮೆಂಟ್ ಪ್ಲಾನ್! ಡ್ರೆಸಿಂಗ್ ರೂಮ್​ನಲ್ಲಿದ್ದ ಆಟಗಾರರು, ಈ ಸುದ್ದಿಯನ್ನ ಕೇಳಿ ಶಾಕ್ ​ಆಗ್ತಾರೆ. ಏನ್ ಮಾಡಬೇಕು ಅಂತ ತೋಚದ ಆಟಗಾರರು, ಅಶ್ವಿನ್ ಅವರನ್ನ ತಬ್ಬಿಕೊಂಡು ಭಾವುಕರಾಗ್ತಾರೆ.

ಇದನ್ನೂ ಓದಿ:ಟೀಮ್​ ಇಂಡಿಯಾಗೆ ದೊಡ್ಡ ಆಘಾತ; ಆರ್​​. ಅಶ್ವಿನ್​​ ಉತ್ತರಾಧಿಕಾರಿ ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment