Advertisment

ಹೇಮಾವತಿ ನೀರಿಗಾಗಿ ತುಮಕೂರು ರೈತರ ಹೋರಾಟ ಯಾಕೆ? ಏನಿದರ ಇತಿಹಾಸ? ಅಸಲಿಗೆ ಆಗಿದ್ದೇನು?

author-image
admin
Updated On
ಹೇಮಾವತಿ ನೀರಿಗಾಗಿ ತುಮಕೂರು ರೈತರ ಹೋರಾಟ ಯಾಕೆ? ಏನಿದರ ಇತಿಹಾಸ? ಅಸಲಿಗೆ ಆಗಿದ್ದೇನು?
Advertisment
  • ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ಬ್ರೇಕ್!
  • ಕಾಮಗಾರಿ ಸಲಕರಣೆಗಳನ್ನ ಕೆನಾಲ್ ಒಳಗೆ ಎಸೆದು ಆಕ್ರೋಶ‌
  • ಕೆನಾಲ್ ಕಾಮಗಾರಿಯ ಸುಂಕಾಪುರಕ್ಕೆ ನುಗ್ಗಿದ ಸಾವಿರಾರು ರೈತರು

ಬೆಂಗಳೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ತುಮಕೂರಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿಟ್ಟೂರಿನಿಂದ ಪಾದಯಾತ್ರೆ ಮೂಲಕ ಕಾಮಗಾರಿ ನಡೆಯುತ್ತಿರುವ ಸುಂಕಾಪುರದತ್ತ ಸಾವಿರಾರು ರೈತರು, ಹೋರಾಟಗಾರರು ಲಗ್ಗೆಯಿಟ್ಟಿದ್ದಾರೆ. ಗುಬ್ಬಿಯ ಸುಂಕಾಪುರದಲ್ಲಿ ಹೇಮಾವತಿ ನೀರಿಗಾಗಿ ಹೋರಾಟ ಕ್ಷಣ ಕ್ಷಣಕ್ಕೂ ಕಾವೇರುತ್ತಿದೆ.

Advertisment

ಉಗ್ರ ಹೋರಾಟ ನಡೆಸುತ್ತಿರುವ ರೈತ ಪರ ಸಂಘಟನೆ ಹಾಗೂ ಬಿಜೆಪಿ ನಾಯಕರು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ಮುತ್ತಿಗೆ ಹಾಕಲು ಮುಂದಾದರು. ಕಾಮಗಾರಿ ಸಲಕರಣೆಗಳನ್ನ ಕೆನಾಲ್ ಒಳಗೆ ಎಸೆದು ಆಕ್ರೋಶ‌ ವ್ಯಕ್ತಪಡಿಸಿದ್ದು, ಕೆನಾಲ್ ಕಾಮಗಾರಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ರೈತರು ನೆರೆದಿರುವುದರಿಂದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

publive-image

ತುಮಕೂರು ರೈತರ ಹೋರಾಟ ಯಾಕೆ?
ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ನದಿ, ಗೊರೂರು ಜಲಾಶಯದಿಂದ ತುಮಕೂರು ಜಿಲ್ಲೆಗೆ ವರ್ಷಕ್ಕೆ 24 ಟಿಎಂಸಿ ನೀರು ಹಂಚಿಕೆ ಆಗಬೇಕು. ಆದರೆ ಯಾವುದೇ ವರ್ಷವೂ 24 ಟಿಎಂಸಿ ನೀರು ಹಾಸನದಿಂದ ತುಮಕೂರಿಗೆ ಹರಿದಿಲ್ಲ.

ಇದನ್ನೂ ಓದಿ: ಪ್ರಾಣ ಬಿಟ್ಟೆವು ಹೇಮಾವತಿ ನೀರು ಕೊಡೆವು.. ತುಮಕೂರು, ರಾಮನಗರ ಮಧ್ಯೆ ಕಾವೇರಿದ ಕಿಚ್ಚು; ಅನ್ಯಾಯ ಯಾರಿಗೆ? 

Advertisment

ಇದೀಗ ತುಮಕೂರು ಜಿಲ್ಲೆಯಿಂದ ಪಕ್ಕದ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿಗೆ ನೀರು ಹರಿಸಲು ರಾಜ್ಯ ಸರ್ಕಾರ ಪ್ಲ್ಯಾನ್ ಹಾಕಿದೆ. ಮಾಗಡಿಯ ಶ್ರೀರಂಗ ಏತ ನೀರಾವರಿ ಯೋಜನೆಗೆ ನೀರು ಹರಿಸಲು ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಜಾರಿ ಮಾಡಲಾಗುತ್ತಿದೆ.

publive-image

ಈ ಯೋಜನೆಯಡಿ ಗುಬ್ಬಿ ತಾಲ್ಲೂಕಿನ ಸಂಕಾಪುರದಿಂದ ಪೈಪ್ ಲೇನ್‌ನಲ್ಲಿ ಕುಣಿಗಲ್ ಮಾರ್ಗವಾಗಿ ಮಾಗಡಿಗೆ ನೀರು ಹರಿಸಲಾಗುತ್ತಿದೆ. ಇದಕ್ಕೆ ತುಮಕೂರು ಜಿಲ್ಲೆಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಗುಬ್ಬಿ, ಕುಣಿಗಲ್ ತಾಲ್ಲೂಕಿನಿಂದ ನೈಸರ್ಗಿಕವಾಗಿ ನಾಲೆಗಳ ಮೂಲಕವೇ ಮಾಗಡಿಗೆ ನೀರು ಹರಿಸಿ. ಅದನ್ನ ಬಿಟ್ಟು ದೊಡ್ಡ ಸ್ಟೀಲ್ ಪೈಪ್ ಬಳಸಿ ಕುಣಿಗಲ್ ಮೂಲಕ ಮಾಗಡಿಗೆ ನೀರು ಹರಿಸುವುದು ಬೇಡ. ಇದರಿಂದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ನಿಂದ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸಿಗದಂತೆ ಆಗುತ್ತೆ ಎಂಬುದು ತುಮಕೂರು ರೈತರ ಆತಂಕ ಆಗಿದೆ.

Advertisment

publive-image

ಹೇಮಾವತಿ ನದಿ ನೀರು ಆಧಾರ!
ತುಮಕೂರು ಜಿಲ್ಲೆಯಲ್ಲಿ ಪಾವಗಡ ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲಾ 9 ತಾಲ್ಲೂಕುಗಳಿಗೆ ಹೇಮಾವತಿ ನದಿ ನೀರೇ ಆಧಾರವಾಗಿದೆ. ತುಮಕೂರು ಜಿಲ್ಲೆಯಲ್ಲಿ ಕುಡಿಯಲು, ಕೃಷಿ, ತೋಟಗಾರಿಕೆಗೆ ಹೇಮಾವತಿ ನೀರೇ ಬೇಕು. ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರೇ ಜೀವನಾಡಿ. ಹೇಮಾವತಿ ನದಿ ನೀರು ಇಲ್ಲದೇ ಇದ್ದರೆ, ಜನರ ಜೀವ ಹೋಗುತ್ತೆ, ಭೂಮಿ ಬರಡಾಗುತ್ತೆ. ಹೀಗಾಗಿ ತುಮಕೂರು ಜಿಲ್ಲೆಯಿಂದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿಗೆ ಹರಿಸುವುದು ಬೇಡ ಎಂದು ರೈತರ ಒತ್ತಾಯಿಸುತ್ತಿದ್ದಾರೆ.

ತುಮಕೂರಿನಿಂದ ಮಾಗಡಿಗೆ ಹೆಚ್ಚಿನ ನೀರು ಹರಿದ್ರೆ ತುಮಕೂರು ಜಿಲ್ಲೆಗೆ ನೀರಿನ ಅಭಾವ ಎದುರಾಗುತ್ತೆ. ಮದಲೂರು ಸೇರಿ ತುಮಕೂರಿನ ಪ್ರಮುಖ ಕೆರೆಗಳಿಗೆ ನೀರು ಹರಿಯಲ್ಲ. ಇದು ರಾಜಕೀಯ ಲಾಭದ ಕಾರಣಕ್ಕಾಗಿ ಮಾಡುತ್ತಿರುವ ಯೋಜನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment