/newsfirstlive-kannada/media/post_attachments/wp-content/uploads/2025/04/mouna.jpg)
ಗ್ಲಾಮರ್ ಗೊಂಬೆ ಆದ್ರೂ ಚಾರುಗೆ ಸೀರೆ ಮೇಲೆ ಒಲವು ಜಾಸ್ತಿ. ಸೀರಿಯಲ್ನಲ್ಲಿ ಚಾರು ಉಡೋ ಸೀರೆ ಒಂದಕ್ಕಿಂತ ಒಂದು ಚಂದ. ನಿಜ ಹೇಳ್ಬೇಕು ಅಂದ್ರೇ, ಇವತ್ತು ಯಾವ ಸೀರೆ ಉಟ್ಟಿದ್ದಾಳೆ ಚಾರು.. ಯಾವ್ ಸ್ಟೈಲ್ ಬ್ಲೌಸ್ ಡಿಸೈನ್ ಇದೆ ಅನ್ನೋದರ ಮೇಲೆ ಬಹುಪಾಲು ಹೆಣ್ಮಕ್ಕಳ ಕಣ್ ಇರುತ್ತೆ. ಸೀರೆಯಲ್ಲಿ ಬ್ಯೂಟಿಫುಲ್ ಫೋಟೋಶೂಟ್ ಮಾಡಿಸಿದ್ದಾರೆ ನಟಿ. ಕಿರುತೆರೆಯ ಬ್ಯೂಟಿಗಳಲ್ಲಿ ಚಾರುಗೆ ಸ್ಪೆಷಲ್ ಸ್ಥಾನ ಇದೆ.
ಇದನ್ನೂ ಓದಿ:ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್ಬಾಸ್ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?
ಸೀರಿಯಲ್ಗಳು ಬಹುಪಾಲು ನಟಿಯರಿಗೆ ಸಿಗದೇ ಇರುವಂತಹ ಅವಕಾಶ ಚಾರು ಪಾತ್ರಕ್ಕೆ ಸಿಕ್ಕಿದೆ ಅಂದ್ರೇ ಅತಿಶಯೋಕ್ತಿ ಅಲ್ವೇ ಅಲ್ಲ. ನಾಯಕಿ ಪಾತ್ರ ಅಂದ್ರೇ ಶುರುವಿನಿಂದ ಮುಕ್ತಾಯದವರೆಗೂ ಬಾಹುಪಾಲು ಗೋಳಿರುತ್ತೆ. ನಾಯಕಿ ಮುಗ್ಧೆ ಎಂಬ ರೀತಿಯಲ್ಲಿಯೇ ಬಿಂಬಿಸಲಾಗಿದೆ. ಆದ್ರೆ ಚಾರು ಪಾತ್ರ ಹಾಗಲ್ಲ. ವಿಭಿನ್ನ ಶೇಡ್ಗಳಲ್ಲಿ ಪಾತ್ರ ಮೂಡಿ ಬಂದಿದೆ.
ಶುರುವಿನಲ್ಲಿ ಶ್ರೀಮಂತ ಜಂಬದ ಹುಡುಗಿ.. ನಂತರ ದಿನಗಳಲ್ಲಿ ಪ್ರೀತಿ ತುಂಬಿದ ಮಗ್ಧ ಚಲುವೆ ಆಗಿ, ಬೇಕು ಅಂದಿದ್ದನ್ನ ಪಡೆದುಕೊಳ್ಳುವ ಹಠಮಾರಿ ಹೆಣ್ಣಾಗಿ, ರಾಮಾಚಾರಿ ಮನೆಗೆ ಸೊಸೆ ಆಗಿ, ವಿಲನ್ಗಳಿಗೆ ಕನಸಲ್ಲೂ ಕಾಡೋ ಪವರ್ಫುಲ್ ಲೇಡಿಯಾಗಿ ಹೀಗೆ ಸಾಕಷ್ಟು ರೀತಿಯಲ್ಲಿ ಪಾತ್ರ ಬದಲಾಗ್ತಾ ಬಂದಿದೆ. ಪ್ರತಿಯೊಂದು ಶೇಡ್ನಲ್ಲೂ ಚಾರು ಗೆದ್ದಿದ್ದಾಳೆ. ಮೌನಾ ಗುಡ್ಡೆಮನೆ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಪಾತ್ರದ ಶೇಡ್ಗಳು ಬದಲಾಗ್ತಾ ಬಂದಂಗೆ ಉಡುಗೆ ತೊಡುಗೆ ಕೂಡ ಚೆಂಜ್ ಆಗ್ತಾ ಬಂದಿದೆ. ಧಾರಾವಾಹಿ ಶುರುವಿನ ಸಂಚಿಕೆಗಳಲ್ಲಿ ಪಕ್ಕಾ ಮಾಡ್ರನ್ ಹುಡುಗಿ. ಬಟ್ಟೆಗಳೂ ಅಷ್ಟೇ ಶಾರ್ಟ್ ಸ್ಕರ್ಟ್ಸ್. ಡೆನಿಮ್ಸ್ ಸೇರಿದಂತೆ ವೆಸ್ಟರ್ನ್ ಲುಕ್ ಇತ್ತು. ಅಲ್ಲಿಂದ ಚೂಡಿದಾರ್ಗೆ ಶಿಫ್ಟ್ ಆಯ್ತು. ಈಗಂತೂ ಸೀರೆಯದ್ದೇ ದರ್ಬಾರ್.
ಚಾರುಗೆ ಜೀವ ತುಂಬಿರೋ ಮೌನಾ ಎಲ್ಲಾ ಔಟ್ಫಿಟ್ನಲ್ಲೂ ನೂರಕ್ಕೆ ನೂರು ಪ್ರತಿಶತ ಸೂಪರ್ ಆಗಿ ಕಾಣ್ತಾರೆ. ಆಗ್ಲೇ ಹೇಳಿದ್ವಲ್ಲ, ಚಾರು ಪಾತ್ರ ಸಿಕ್ಕಾಪಟ್ಟೆ ಲಕ್ಕಿ ಅಂತ. ಎಲ್ಲರಿಗೂ ಈ ತರಹದ ಅವಕಾಶ ಸಿಗಲ್ಲ ಆ್ಯಂಡ್ ಎಲ್ಲದಕ್ಕೂ ಸೂಟ್ ಕೂಡ ಆಗಲ್ಲ. ಮೌನಾಗೆ ಸೀರೆ ಅಂದ್ರೇ ಬಲು ಪ್ರೀತಿ.
ಇತ್ತೀಚೆಗೆ ಹೊಸ ಫೋಟೋ ಶೂಟ್ ಮಾಡಿಸಿರೋ ನಟಿ ಸಖತ್ ಸ್ಟೈಲಿಶ್ ಆಗಿ ಕಾಣ್ತಿದ್ದಾರೆ. ಕಂದು ಬಣ್ಣದ ಸೀರೆ ಉಟ್ಟಿರೋ ನಟಿ, ಉದ್ದ ತೋಳಿನ ಬ್ಲೌಸ್ ತೊಟ್ಟಿದ್ದಾರೆ. ಫ್ರೀ ಹೇರ್ ಸ್ಟೈಲ್.. ಸಿಂಪಲ್ ಮೇಕಪ್.. ಬೇಸಿಗೆ ಬಿಸಿಗೂ ಆಯ್ತು.. ಗ್ಲಾಮರ್ ಟಚ್ ಎಂಬಂತೆ ಗೋಲ್ಡನ್ ಫ್ರೇಮ್ ಸನ್ ಗ್ಲಾಸ್ ಧರಿಸಿದ್ದು, ಬಿಸಿ ಬಿಸಿ ಅವಾತಾರದಲ್ಲಿ ತಮ್ಮ ಅಂದದ ಮೂಲಕ ಫಯರ್ ಕ್ರಿಯೇಟ್ ಮಾಡಿದ್ದಾರೆ ನಟಿ. ಮೌನಾ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದು, ವಾರೇ ಮೇರಿ ಚೆಲುವೆ ಎಂದು ಕಾಮೆಂಟ್ಸ್ ಹಾಕಿ ಹಾಡಿ ಹೊಗಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ