ಕಿರುತೆರೆಯಲ್ಲಿ ಈ ಸೀರಿಯಲ್​​ದ್ದೇ ಕಾರುಬಾರು.. ಇಲ್ಲಿದೆ ವಾರದ TRP ಲಿಸ್ಟ್​!

author-image
Veena Gangani
Updated On
ಕಿರುತೆರೆಯಲ್ಲಿ ಈ ಸೀರಿಯಲ್​​ದ್ದೇ ಕಾರುಬಾರು.. ಇಲ್ಲಿದೆ ವಾರದ TRP ಲಿಸ್ಟ್​!
Advertisment
  • ಎಲ್ಲರ ಕುತೂಹಲಕ್ಕೆ ಕಾರಣವಾದ ಈ ವಾರದ ಟಿಆರ್​ಪಿ ಲಿಸ್ಟ್​!
  • ಈ ವಾರ ಯಾವ ಸೀರಿಯಲ್​ಗೆ TRPಯಲ್ಲಿ ಮೊದಲ ಸ್ಥಾನ?
  • ಕನ್ನಡ ಕಿರುತೆರೆಯಲ್ಲಿ ಶುರುವಾಯ್ತು ಸೀರಿಯಲ್​ಗಳ ಲೆಕ್ಕಾಚಾರ

ಕನ್ನಡ ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್​​ಪಿ ಮೂಲಕ ತಿಳಿಯಲಿದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್​ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ ಅನ್ನೋದಕ್ಕೆ ಈ ಸೀರಿಯಲ್​ ಸಾಕ್ಷಿಯಾಗಿದೆ.

ಇದನ್ನೂ ಓದಿ: ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್​ ಎಸ್ಕೇಪ್​..! Video

publive-image

ಈಗ ಕಿರುತೆರೆ ಲೋಕದಲ್ಲಿ ಒಂದಿಷ್ಟು ಹೊಸ ಧಾರಾವಾಹಿವಾಗಳು ಈಗಾಗಲೇ ಜನಪ್ರಿಯತೆ ಪಡೆದಿರೋ ಧಾರಾವಾಹಿಗಳಿಗೆ ಉತ್ತಮ ಫೈಟ್​ ಕೊಡ್ತಿವೆ. ಇನ್ನು, ಕೆಲ ಹೊಸ ಸ್ಟೋರಿಗಳು ಮುಂದಿನ ವಾರ ಲಾಂಚ್​ ಆಗೋದಕ್ಕೆ ಕಾಯ್ತಾಯಿವೆ. ಕೆಲ ಧಾರಾವಾಹಿಗಳು ಅಂತ್ಯ ಕಂಡಿವೆ. ಈ ನಡುವೆ ನಾವು ಹಳೇ ಪಂಟ್ರು.. ಯಾರಿಗೂ ಜಗ್ಗಲ್ಲ.. ಬಗ್ಗಲ್ಲ ಅಂತ ಸವಾಲ್​ ಹಾಕ್ತಿವೆ ವರ್ಷ ತುಂಬಿರೋ ಧಾರಾವಾಹಿಗಳು.

publive-image

ಬ್ಯಾಕ್​ ಟು ಬ್ಯಾಕ್​ ಶ್ರಾವಣಿ ಸುಬ್ರಮಣ್ಯ ನಂಬರ್​ ಒನ್​ ಸ್ಥಾನ ಅಲಂಕರಿಸಿದೆ. 8.2 ರೇಟಿಂಗ್​ ಪಡೆಯೋದರ ಮೂಲಕ ಘಟಾನುಘಟಿ ಧಾರಾವಾಹಿಗಳಿಗೆ ಟಕ್ಕರ್​ ಕೊಡ್ತಿದೆ. ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 8, ಮೂರನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 7.8, ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ 7.2 ಐದನೇ ಸ್ಥಾನದಲ್ಲಿ ಅಮೃತಧಾರೆ 6.6, ಆರನೇ ಸ್ಥಾನದಲ್ಲಿ ಬ್ರಹ್ಮಗಂಟು 5.9, ಏಳನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 5.3, ಎಂಟನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮೀ 5, ಒಂಭತ್ತನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 4.7, ಹತ್ತನೇ ಸ್ಥಾನದಲ್ಲಿ ಆಸೆ 4.6 ಟಿಆರ್​ಪಿ ಪಡೆದುಕೊಂಡಿವೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment