ಲಕ್ಷ್ಮೀ ನಿವಾಸ ವೀಕ್ಷಕರಿಗೆ ಗುಡ್​ನ್ಯೂಸ್​.. ನಿಮ್ಮ ನೆಚ್ಚಿನ ಸೀರಿಯಲ್​ಗಳ ವಾರದ TRP ಲಿಸ್ಟ್​ ಇಲ್ಲಿದೆ! ​

author-image
Veena Gangani
Updated On
ಲಕ್ಷ್ಮೀ ನಿವಾಸ ವೀಕ್ಷಕರಿಗೆ ಗುಡ್​ನ್ಯೂಸ್​.. ನಿಮ್ಮ ನೆಚ್ಚಿನ ಸೀರಿಯಲ್​ಗಳ ವಾರದ TRP ಲಿಸ್ಟ್​ ಇಲ್ಲಿದೆ! ​
Advertisment
  • ಎಲ್ಲರ ಕುತೂಹಲಕ್ಕೆ ಕಾರಣವಾದ ಈ ವಾರದ ಟಿಆರ್​ಪಿ ಲಿಸ್ಟ್​!
  • ಈ ವಾರ ಯಾವ ಸೀರಿಯಲ್​ಗೆ TRPಯಲ್ಲಿ ಮೊದಲ ಸ್ಥಾನ?
  • ಕನ್ನಡ ಕಿರುತೆರೆಯಲ್ಲಿ ಶುರುವಾಯ್ತು ಸೀರಿಯಲ್​ಗಳ ಲೆಕ್ಕಾಚಾರ

ಕನ್ನಡ ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್​​ಪಿ ಮೂಲಕ ತಿಳಿಯಲಿದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್​ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ ಅನ್ನೋದಕ್ಕೆ ಈ ಸೀರಿಯಲ್​ ಸಾಕ್ಷಿಯಾಗಿದೆ.

publive-image

ಟಿಆರ್​ಪಿ ಲಿಸ್ಟ್​ ಬಿಡುಗಡೆ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದ ಲಕ್ಷ್ಮೀ ಬಾರಮ್ಮ ಟಾಪ್​ ರೇಟಿಂಗ್​ನಲ್ಲೇ ಮುಕ್ತಾಯ ಆಗಿದೆ. ಕಲರ್ಸ್​ ಕನ್ನಡದ ನಂಬರ್​ ಒನ್​ ಧಾರಾವಾಹಿ ಎಂಬ ಪಟ್ಟದೊಂದಿಗೆ ಗುಡ್​ ಬೈ ಹೇಳಿದ್ದು ವಿಶೇಷ.
ಇನ್ನೂ, ಓವರ್ ಆಲ್​ ರೇಟೀಂಗ್ ನೋಡೋದಾದ್ರೇ, ಮೊದಲ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.1, ಎರಡನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ 7, ಮೂರನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 6.7, ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ 6.7, ಐದನೇ ಸ್ಥಾನದಲ್ಲಿ ಅಮೃತಧಾರೆ 6.1, ಆರನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 5.3, ಏಳನೇ ಸ್ಥಾನದಲ್ಲಿ ಬ್ರಹ್ಮಗಂಟು 5 , ಎಂಟನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮೀ 4.5, ಒಂಬತ್ತನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 4.4 ಹಾಗೂ ಹತ್ತನೇ ಸ್ಥಾನದಲ್ಲಿ ನಿನಗಾಗಿ 4.1 ರೇಟಿಂಗ್​ ಪಡೆದುಕೊಂಡಿವೆ.

publive-image

ಇನ್ನೂ, ರಿಯಾಲಿಟಿ ಶೋಗಳಿಗೆ ಬರೋದಾದ್ರೇ, ಸರಿಗಮಪ ಹಾಗೂ ಭರ್ಜರಿ ಬ್ಯಾಚುಲರ್ಸ್​ ಮಹಾಸಂಗಮ 9.6, ಬಾಯ್ಸ್​ ವರ್ಸಸ್​ ಗರ್ಲ್ಸ್​ 2.1, ಮಜಾ ಟಾಕೀಸ್​ 1.7 ರೇಟಿಂಗ್​ ಪಡೆದುಕೊಂಡಿವೆ. ಒಟ್ಟಾರೆ ರೇಟಿಂಗ್​ನಲ್ಲಿ ಈ ವಾರ ಇಳಿತ ಕಂಡಿದೆ. ಎಲ್ಲಾ ಧಾರಾವಾಹಿಗಳು ಒಂದ ಅಂಕಿ ಲಾಸ್​ ಮಾಡ್ಕೊಂಡಿವೆ. ಇದಕ್ಕೆ ನಾನಾ ಕಾರಣಗಳಿರುತ್ತೆ. ಐಪಿಎಲ್​ ಮ್ಯಾಚ್​ ಕೂಡ ಕಾರಣ ಆಗಿರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment