/newsfirstlive-kannada/media/post_attachments/wp-content/uploads/2024/05/hardik-pandya-12.jpg)
ಮುಂಬೈ ಇಂಡಿಯನ್ಸ್​ ತಂಡದ ನಾಯಕ, ಟೀಂ ಇಂಡಿಯಾದ ಆಟಗಾರ ಹಾರ್ದಿಕ್​​ ಪಾಂಡ್ಯರವರು ನತಾಶಾಗೂ ಮುನ್ನ ಎಷ್ಟು ಜನರ ಜೊತೆ ಡೇಟ್​ ಮಾಡಿದ್ದರು ಗೊತ್ತಾ? ಯಾರ ಜೊತೆ ಓಡಾಡಿಕೊಂಡಿದ್ದರು ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಹಾರ್ದಿಕ್​ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್​ ಮೊದಲ ಭೇಟಿ 2018ರಲ್ಲಿ. ಮುಂಬೈ ನೈಟ್​ಕ್ಲಬ್​ನಲ್ಲಿ ಇಬ್ಬರು ಜೊತೆಯಾದರು. ಆ ಬಳಿಕ ಇಬ್ಬರ ನಡುವೆ ಸಂಪರ್ಕ ಹುಟ್ಟಿಕೊಂಡಿತು. ಪರಿಚಯ ಸ್ನೇಹವಾಗಿ ಒಡನಾಟ ಜಾಸ್ತಿಯಾಯಿತು. ಬಳಿಕ ಪ್ರೇಮ ನಿವೇದನೆ ಮಾಡಿಕೊಂಡು ಗಂಡು ಮಗುವಿಗೆ ಪೋಷಕರಾದರು. ನಂತರ ಸಾಂಪ್ರದಾಯಬದ್ಧವಾಗಿ ವಿವಾಹವಾದರು. ಆದರೀಗ ಇಬ್ಬರಿಬ್ಬರ ಕುರಿತು ವಿಚ್ಛೇದನ ಸುದ್ದಿ ಹರಿದಾಡುತ್ತಿದೆ.
/newsfirstlive-kannada/media/post_attachments/wp-content/uploads/2024/05/hardik-pandya-10.jpg)
ಲಿಶಾ ಶರ್ಮಾ
ಹಾರ್ದಿಕ್​ ಪಾಂಡ್ಯ ನತಾಶಾಗೂ ಮುಂಚೆ ಕೋಲ್ಕತ್ತಾ ಮೂಲದ ಮಾಡೆಲ್​ ಲಿಶಾ ಶರ್ಮಾ ಜೊತೆ ಡೇಟ್​ ಮಾಡುತ್ತಿದ್ದರು. ಆದರೆ ಇಬ್ಬರು ವೃತ್ತಿ ಜೀವನದತ್ತ ಹೆಚ್ಚು ಗಮನಹರಿಸಿದ್ದ ಕಾರಣ ಬ್ರೇಕಪ್​ ಮಾಡಿಕೊಂಡರು ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/05/hardik-pandya-9.jpg)
ಎಲ್ಲಿ ಅವ್ರಾಮ್​
ರಿಯಾಳಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಎಲ್ಲಿ ಅವ್ರಾಮ್ ಜೊತೆ ಪಾಂಡ್ಯ ಡೇಟ್​ ಮಾಡಿದ್ದರು. ಆಕೆ ಬಿಗ್​ ಬಾಸ್​ನಲ್ಲೂ ಸ್ಪರ್ಧಿಸಿದ್ದಳು. ಅಷ್ಟೇ ಏಕೆ ಕೃನಾಲ್​ ಪಾಂಡ್ಯ ಮದುವೆಯಲ್ಲೂ ಎಲ್ಲಿ ಅವ್ರಾಮ್ ಭಾಗಿಯಾಗಿದ್ದಳು. ಅದಾದ ಬಳಿಕ ಇಬ್ಬರು ಬೇರ್ಪಟ್ಟರು ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/05/hardik-pandya-8.jpg)
ಊರ್ವಶಿ ರೌಟೇಲಾ
ಪಾಂಡ್ಯ ಮತ್ತು ಊರ್ವಶಿ ಸ್ನೇಹಿತರಾಗಿದ್ದರು. ಆದರೆ ಇದರ ಜೊತೆಗೆ ಇಬ್ಬರು ಜೋಡಿ ಹಕ್ಕಿಗಳು ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಪಾಂಡ್ಯ ನತಾಶಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಾಗ ಈ ವದಂತಿಗೆ ಉತ್ತರ ಸಿಕ್ಕಿತು.
ಇದನ್ನೂ ಓದಿ: ಡಿವೋರ್ಸ್​ ವದಂತಿ.. ಆಸ್ತಿಯಲ್ಲೂ ಪಾಲು ಕೊಟ್ರಂತೆ ಪಾಂಡ್ಯ.. ನತಾಶಾಗೆ ಎಷ್ಟು ಕೋಟಿ ಆಸ್ತಿ ಕೊಟ್ರಂತೆ..?
/newsfirstlive-kannada/media/post_attachments/wp-content/uploads/2024/05/hardik-pandya-7.jpg)
ಈಶಾ ಗುಪ್ತಾ
ಇಬ್ಬರು ಪಾರ್ಟಿಯಲ್ಲಿ ಭೇಟಿಯಾಗಿ ಸ್ನೇಹಿತರಾಗಿದ್ದರು. ಆದರೆ ಇಬ್ಬರ ನಡುವಿನ ಸಂಬಂಧದ ಬಗ್ಗೆಯೂ ಸುದ್ದಿಗಳು ಹರಿದಾಡಿತ್ತು. ಆದರೆ ಪಾಂಡ್ಯ ನತಾಶಾ ಹಿಂದೆ ಬಿದ್ದ ಬಳಿಕ ಈಶಾ ಗುಪ್ತಾ ಜೊತೆಗಿನ ಡೇಟಿಂಗ್​ ವದಂತಿಯು ಸ್ತಬ್ಧವಾಯಿತು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us