/newsfirstlive-kannada/media/post_attachments/wp-content/uploads/2024/06/Modi-Cabinet.jpg)
ನವದೆಹಲಿ: ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಸತತ ಮೂರನೇ ಬಾರಿ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಮೋದಿ ಅವರ ಪದಗ್ರಹಣದ ಜೊತೆಗೆ ನೂತನ ಕೇಂದ್ರ ಸಚಿವರ ಪಟ್ಟಿಯೂ ಸಿದ್ಧವಾಗಿದೆ.
ಕೇಂದ್ರ ಸಚಿವ ಸ್ಥಾನ ಸ್ವೀಕರಿಸುವವರಿಗೆ ಪ್ರಧಾನಿ ನಿವಾಸದಲ್ಲಿ ಇಂದು ಟೀ ಪಾರ್ಟಿ ಆಯೋಜಿಸಲಾಗಿತ್ತು. ಪ್ರಧಾನಿ ನಿವಾಸದಿಂದ ಇದುವರೆಗೂ 50ಕ್ಕೂ ಎನ್‌ಡಿಎ ನಾಯಕರಿಗೆ ಫೋನ್ ಕಾಲ್ ಮಾಡಲಾಗಿದೆ. ಪ್ರಧಾನಿ ನಿವಾಸಕ್ಕೆ ಆಗಮಿಸಿರುವ ನಾಯಕರು ಇಂದು ಸಂಜೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ModiCabinet: ಮೋದಿ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಸ್ಥಾನ? ನೂತನ ಕೇಂದ್ರ ಸಚಿವರ ಪಟ್ಟಿ ಇಲ್ಲಿದೆ
ಇಂದು ಸಂಜೆ ಮೋದಿ ಅವರ ಪದಗ್ರಹಣದ ಜೊತೆಗೆ ಬಿಜೆಪಿಯ 35 ಮಂದಿ ಹಾಗೂ ಎನ್‌ಡಿಎ ಯಿಂದ 11 ಮಂದಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಕೇರಳದ ಏಕೈಕ ಬಿಜೆಿಪಿ ಸಂಸದ ಸುರೇಶ್ ಗೋಪಿಗೂ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ನೀಡಲಾಗುತ್ತಿದೆ.
ಸಂಭಾವ್ಯ ಕೇಂದ್ರ ಸಚಿವರ ಪಟ್ಟಿ
ಬಿಜೆಪಿ ಅಗ್ರ ನಾಯಕರು
- ರಾಜನಾಥ್ ಸಿಂಗ್
- ಅಮಿತ್ ಶಾ
- ನಿತಿನ್ ಗಡ್ಕರಿ
- ಅರ್ಜುನ್ ಮೇಘವಾಲ್
- ಶಿವರಾಜ್ ಸಿಂಗ್ ಚೌಹಾಣ್
- ಜ್ಯೋತಿರಾದಿತ್ಯ ಸಿಂಧಿಯಾ
- ಮನೋಹರ್ ಖಟ್ಟರ್
- ಸರ್ಬಂದ ಸೋನೋವಾಲ್
- ಕಿರಣ್ ರಿಜಿಜು
- ರಾವ್ ಇಂದರ್ಜೀತ್
- ಕಮಲಜೀತ್ ಸೆಹ್ರಾವತ್
- ರಕ್ಷಾ ಖಡ್ಸೆ
ಎನ್‌ಡಿಎ ಮಿತ್ರಪಕ್ಷದ ನಾಯಕರು
- ಕೆ ರಾಮಮೋಹನ್ ನಾಯ್ಡು
- ಚಂದ್ರಶೇಖರ್ ಪೆಮ್ಮಸಾನಿ
- ಲಲ್ಲನ್ ಸಿಂಗ್
- ರಾಮ್ ನಾಥ್ ಠಾಕೂರ್
- ಜಯಂತ್ ಚೌಧರಿ
- ಚಿರಾಗ್ ಪಾಸ್ವಾನ್
- ಹೆಚ್. ಡಿ ಕುಮಾರಸ್ವಾಮಿ
- ಪ್ರತಾಪ್ ರಾವ್ ಜಾಧವ್
- ಚಂದ್ರಪ್ರಕಾಶ್ ಚೌಧರಿ
- ರಾಮದಾಸ್ ಅಠವಳೆ
- ಅನುಪ್ರಿಯಾ ಪಟೇಲ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ