/newsfirstlive-kannada/media/post_attachments/wp-content/uploads/2024/10/Smart-phones.jpg)
ಹಬ್ಬದ ಸೀಸನ್ನಲ್ಲಿ ಮೊಬೈಲ್ ಗ್ರಾಹಕರಿಗೆ ಗುಡ್ನ್ಯೂಸ್ ಒಂದಿದೆ. ಈಗಾಗಲೇ ಬಿಗ್ ಬಿಲಿಯನ್ ಡೇ ಶುರುವಾಗಿದ್ದು, ಇ-ಕಾಮರ್ಸ್ ಕಂಪನಿಗಳು ಭರ್ಜರಿ ಆಫರ್ ನೀಡಿವೆ. ಕಡಿಮೆ ಬಜೆಟ್ನಲ್ಲಿ ಮೊಬೈಲ್ ನೋಡುತ್ತಿರೋರಿಗೆ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ವಿಶೇಷ ಆಫರ್ ಕೊಟ್ಟಿದೆ. 15 ಸಾವಿರ ಒಳಗೆ ಇರೋ ಸ್ಮಾರ್ಟ್ಫೋನ್ಗಳ ಕುರಿತು ಮಾಹಿತಿ ಇಲ್ಲಿದೆ..!
15 ಸಾವಿರದೊಳಗಿನ ಸ್ಮಾರ್ಟ್‌ಫೋನ್ ಲಿಸ್ಟ್ ಹೀಗಿದೆ!
ಸ್ಯಾಮ್‌ಸಂಗ್ ಗ್ಯಾಲಕ್ಸಿ M35
ಕಡಿಮೆ ಬಜೆಟ್ನಲ್ಲಿ ಫೋನ್ ನೋಡುತ್ತಿರುವ ಗ್ರಾಹಕರಿಗೆ ಸ್ಯಾಮ್‌ಸಂಗ್ Galaxy M35 ಬೆಸ್ಟ್ ಚಾಯ್ಸ್. 6.6 ಇಂಚಿನ 120Hz ಸೂಪರ್ AMOLED ಡಿಸ್ಪ್ಲೇ ಹೊಂದಿರೋ ಈ ಮೊಬೈಲ್ಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ರಕ್ಷಣೆ ಇದೆ. Exynos 1380 ಚಿಪ್‌ಸೆಟ್, OIS ಬೆಂಬಲದೊಂದಿಗೆ 50MP ಪ್ರೈಮರಿ ಶೂಟರ್, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಶೂಟರ್ ಜತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. 6,000mAh ಬ್ಯಾಟರಿ ಮತ್ತು 256 ಜಿಬಿ ಸ್ಟೋರೇಜ್, 8GB RAM ಇದ್ದು, ಕೇವಲ 14,999 ರೂ.ಗೆ ಲಭ್ಯವಿದೆ.
ನಂಥಿಂಗ್ ಫೋನ್ CMF 1
ನಥಿಂಗ್ CMF ಫೋನ್ 6.67-ಇಂಚಿನ 120Hz AMOLED ಡಿಸ್ಪ್ಲೇ ಹೊಂದಿದೆ. CMF ಫೋನ್ನಲ್ಲಿ 50MP ಪ್ರೈಮರಿ ಕ್ಯಾಮೆರಾ ಜತೆಗೆ 6GB RAM, 128GB ಸ್ಟೋರೇಜ್ ಇದೆ. ಇದರ ಬೆಲೆ ಕೇವಲ 14,999 ರೂ. ಇದೆ.
ಪೋಕೋ M6 ಪ್ಲಸ್
Poco M6 Plus ಫೋನ್ 6.79-ಇಂಚಿನ Full HD+ IPS LCD ಸ್ಕ್ರೀನ್ ಹೊಂದಿದೆ. ಸ್ನಾಪ್‌ಡ್ರಾಗನ್ 4 ಜನ್ 2 ಎಇ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. Android 14 ಆಧಾರಿತ HyperOS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 108MP ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು, 8GB RAM ಇದೆ. ಇದರ ಬೆಲೆ ಕೇವಲ 12,999 ರೂ. ಇದೆ.
ರಿಯಲ್ ಮಿ 12x 5G
Realme 12x 5G ಸ್ಮಾರ್ಟ್ಫೋನ್ಗೆ 6.72-ಇಂಚಿನ IPS LCD ಡಿಸ್ಪ್ಲೇ ಇದೆ. ಇದು 50MP ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು, ಇತ್ತೀಚಿನ ಆಫರ್‌ಗಳಲ್ಲಿ Realme 12x 5G ಬೇಸ್ ಆವೃತ್ತಿ (4GB RAM, 128GB ಸ್ಟೋರೇಜ್) ಬೆಲೆ 12,500 ರೂ.ಗೆ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ