ಗೆಣಸಿನಂತೆ ಇರೋ ಕೆಸುವಿನ ಗಡ್ಡೆ ಬಗ್ಗೆ ನಿಮಗೆಷ್ಟು ಗೊತ್ತು? ಮೈ ಕೈ ನೋವು ಇರೋರಿಗೆ ಇದು ರಾಮಬಾಣ!

author-image
Veena Gangani
Updated On
ಗೆಣಸಿನಂತೆ ಇರೋ ಕೆಸುವಿನ ಗಡ್ಡೆ ಬಗ್ಗೆ ನಿಮಗೆಷ್ಟು ಗೊತ್ತು? ಮೈ ಕೈ ನೋವು ಇರೋರಿಗೆ ಇದು ರಾಮಬಾಣ!
Advertisment
  • ಕಾಡು ಮರಗಳಲ್ಲಿ ಬೆಳೆಯುವಂತ ಈ ಕೆಸುವಿನ ಗಡ್ಡೆ ಬಗ್ಗೆ ನಿಮಗೆಷ್ಟು ಗೊತ್ತು?
  • ಗೆಣಸನ್ನೇ ಹೋಲುವ ಈ ಕೆಸುವಿನ ಗಡ್ಡೆಯಿಂದ ಆಗೋ ಪ್ರಯೋಜನ ಏನು?
  • ಕೆಸುವಿನ ಗಡ್ಡೆಯನ್ನು ಜನರೂ ಸೂಪ್​ ಮಾಡಿ ಕುಡಿಯುತ್ತಾರೆ ಅಂದ್ರೆ ನಂಬ್ತೀರಾ!

ಗೆಣಸು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆದ್ರೆ ಇದು ಗೆಣಸಿನ ರೀತಿಯಲ್ಲೇ ಇರುವ ಕೆಸುವಿನ ಗಡ್ಡೆ.. ಇದು ನೋಡಲು ಕೊಂಚ ಗೆಣಸಿನ ಹಾಗೇ ಇದ್ದು, ಈ ಕೆಸುವಿನ ಗಡ್ಡೆ ದೇಹಕ್ಕೆ ತುಂಬಾ ಪ್ರಯೋಜನ ನೀಡುತ್ತೆ ಅಂದ್ರೆ ನಂಬುತ್ತೀರಾ? ನಂಬಲೇ ಬೇಕು.

ಇದನ್ನೂ ಓದಿ:ಫೋನ್ ನೀರಿಗೆ ಬಿದ್ದಾಗ ಈ ತಪ್ಪು ಮಾಡಿದ್ರೆ ಗೋವಿಂದ.. ಫಸ್ಟ್ ಏನು ಮಾಡಬೇಕು ಗೊತ್ತಾ?

publive-image

ಹೌದು, ಇದು ಸಾಮಾನ್ಯವಾಗಿ ಕಾಡು ಮರಗಳಲ್ಲಿ ಬೆಳೆಯುವಂತ ಒಂದು ಗಡ್ಡೆಯಾಗಿದೆ. ಕೆಸುವಿನ ಗಡ್ಡೆಯೂ ಪೋಷಕಾಂಶಗಳಿಂದ ತುಂಬಿದೆ. ಇದು ವಿಟಮಿನ್ ಸಿ, ಪೊಟ್ಯಾಷಿಯಂ, ಮೆಗ್ನೀಶಿಯಂ ಮತ್ತು ನಾರಿನ ಸಮೃದ್ಧ ಮೂಲವಾಗಿದೆ. ಕೆಸುವಿನ ಗಡ್ಡೆಯನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಲಾಭಗಳಿವೆ.

publive-image

ಈ ಕೆಸುವಿನ ಗಡ್ಡೆಯನ್ನು ಗೋಟಿ ಗಡ್ಡೆ ಎಂದು ಕರೆಯುತ್ತಾರೆ. ಇದನ್ನೂ ತಮಿಳಿನಲ್ಲಿ Mudavattukal kilangu ಎಂದು ಕರೆಯುತ್ತಾರೆ. ಇದು ಬಹು ಮುಖ್ಯವಾಗಿ ಕಾಲು ನೋವು, ಮೂಳೆಗಳ ಸಮಸ್ಯೆಗೆ ರಾಮಬಾಣ ಅಂತಲೇ ಹೇಳಬಹುದು. ಹೌದು, ಮೂಳೆಯಲ್ಲಿರುವ ಅಂಶ ಕಮ್ಮಿಯಾದಾಗ ಅಥವಾ ಮಂಡಿ ಸವಿದಿದ್ದರೆ ಈ ಕೆಸುವಿನ ಗಡ್ಡೆಯನ್ನು ಬೇಯಿಸಿ ಪಲ್ಯ ಮಾಡಿ ತಿಂದರೆ, ಮೂಳೆಯಲ್ಲಿ ಶಕ್ತಿ ಬರುತ್ತದೆ. ಜೊತೆಗೆ ನೋವು ಕೂಡ ಕಡಿಮೆಯಾಗುತ್ತದೆ. ಆದ್ರೆ ಇದನ್ನೂ ಗೆಣಸಿನ ಹಾಗೇ ತಿನ್ನಬಾರದು. ತಿಂದಿದ್ದೆ ಆದರೆ ಗಂಟಲಲ್ಲಿ ಕಿರಿ ಕಿರಿ ಉಂಟಾಗಬಹುದು. ಹೀಗಾಗಿ ಇದನ್ನು ಬಹಳಷ್ಟು ಮಂದಿ ಸೂಪ್​ ಮಾಡಿಕೊಂಡು ಕುಡಿಯುತ್ತಾರೆ.


ಈ ಕೆಸುವಿನ ಗಡ್ಡೆಯೂ ನೋಡಲು ಮೇಕೆ ಕಾಲಿನ ಹಾಗೇ ಇರುತ್ತದೆ. ಮೇಕೆ ಕಾಲನ್ನು ಸೂಪ್​ ಮಾಡಿಕೊಂಡು ಕುಡಿದ ಹಾಗೇ ಇದನ್ನು ಸ್ವಚ್ಛವಾಗಿ ತೊಳೆದು ಸೂಪ್​ ಮಾಡಿಕೊಂಡು ಕೂಡಿಯಬಹುದು. ಇದನ್ನೂ ಸರಿಯಾಗಿ ಒಂದು ವಾರಗಳ ಕಾಲ ಸೇವಿಸಿದ್ದೇ ಆದರೆ ಮೈ, ಕೈ ನೋವು, ಮಂಡಿ ನೋವು ಸೇರಿದಂತೆ ಹಲವಾರು ರೀತಿಯಲ್ಲಿ ನಮ್ಮ ದೇಹಕ್ಕೆ ಪ್ರಯೋಜನೆ ಆಗುತ್ತದೆ. ಈ ಒಂದು ಕೆಸುವಿನ ಗಡ್ಡೆಯೂ ಆನ್​ಲೈನ್​ನಲ್ಲೂ ಸುಲಭವಾಗಿ ದೊರೆಯುತ್ತದೆ. ಈಗಾಗಲೇ ತುಂಬಾ ಜನರು ಈ ಕೆಸುವಿನ ಗಡ್ಡೆಯನ್ನು ಟ್ರೈ ಮಾಡಿ ಸಕ್ಸಸ್ ಕಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment