/newsfirstlive-kannada/media/post_attachments/wp-content/uploads/2024/11/Fadnavis_Modi.jpg)
ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಅಧಿಕಾರ ಬರುವುದು ಬಹುತೇಕ ಖಚಿತವಾಗಿದೆ. ಭರ್ಜರಿ ಲೀಡ್ನಲ್ಲಿರೋ ಮಹಾಯುತಿ 223ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ನಾಯಕತ್ವದ ಎಂವಿಎ ಕೇವಲ 52ರಲ್ಲಿ ಮಾತ್ರ ಮುನ್ನೆಡೆ ಕಾಯ್ದುಕೊಂಡಿದೆ.
ಬಿಜೆಪಿಗೆ 126 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಿಕ್ಕಿದೆ. ಶಿಂಧೆ ಶಿವಸೇನೆಗೆ 55 ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದ್ದು, ಅಜಿತ್ ಪವಾರ್ ಎನ್ಸಿಪಿಗೆ ಸುಮಾರು 36 ಕ್ಷೇತ್ರಗಳಲ್ಲಿ ಲೀಡ್ ಇದೆ.
ಆರಂಭದಲ್ಲಿ ಭರ್ಜರಿ ಪೈಪೋಟಿ
288 ಅಸೆಂಬ್ಲಿ ಸ್ಥಾನಗಳಿಗೆ ನಡೆದ ಚುನಾವಣೆ ಇದಾಗಿತ್ತು. ಮತ ಎಣಿಕೆ ಆರಂಭದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಮಧ್ಯೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಮಹತ್ವದ ಬೆಳವಣಿಗೆಯಲ್ಲಿ ದಿಢೀರ್ ಮಹಾಯುತಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಈಗಾಗಲೇ ಮ್ಯಾಜಿಕ್ ನಂಬರ್ ದಾಟಿದೆ. ಟ್ರೆಂಡ್ ಮಹಾಯುತಿ ಇದ್ದು, ಗೆದ್ದು ಬೀಗಿದೆ.
ಬಿಜೆಪಿ ಮೈತ್ರಿ ಗೆಲುವಿಗೆ ಕಾರಣಗಳೇನು?
OBC ಮತಗಳ ಕ್ರೋಢೀಕರಣ ಮಾಡುವಲ್ಲಿ ಬಿಜೆಪಿ ಕೂಟ ಯಶಸ್ವಿ
ಮರಾಠೇತರ ಮತಗಳ ಕ್ರೋಢೀಕರಣದಲ್ಲೂ ಯಶಸ್ವಿಯಾದ ಬಿಜೆಪಿ
ಮಾಲಿ, ಧನಗರ್, ವಂಜಾರಿ ಸಮುದಾಯದ ಮತ ಸೆಳೆದ ಕೇಸರಿ ಪಕ್ಷ
ಮರಾಠ ಮತಗಳನ್ನು ಮಹಾಯುತಿ ಕಡೆ ಸೆಳೆದ ಸಿಎಂ ಏಕನಾಥ ಶಿಂಧೆ
ಭಾರೀ ಪೈಪೋಟಿ ಇದ್ದ 76 ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚು ಸೀಟುಗಳು
ವಿಧರ್ಭ ಪ್ರಾಂತ್ಯದ 62 ಕ್ಷೇತ್ರಗಳಲ್ಲೂ ಬಿಜೆಪಿ ಮೈತ್ರಿಕೂಟಕ್ಕೆ ಮೇಲುಗೈ
ಮಹಿಳೆಯರಿಗೆ ತಿಂಗಳಿಗೆ 1,500 ರೂ. ನೀಡಿದ್ದು ಬಿಜೆಪಿ ಪಾರ್ಟಿಗೆ ಪ್ಲಸ್
ಕಾಂಗ್ರೆಸ್ ಮೈತ್ರಿಯಲ್ಲಿ ಸಿಎಂ ಸೀಟಿಗೆ ಕಿತ್ತಾಟ; ಕೇಸರಿ ಪಾರ್ಟಿಗೆ ಲಾಭ
ಒಂದು ಪಕ್ಷದ ಮತಗಳು ಇನ್ನೊಂದು ಪಕ್ಷಕ್ಕೆ ವರ್ಗಾವಣೆ ಮಾಡುವಲ್ಲೂ ಸಕ್ಸಸ್
ಇದನ್ನೂ ಓದಿ: ವಯನಾಡು ಚುನಾವಣೆ; ಪ್ರಿಯಾಂಕ ಗಾಂಧಿಗೆ 2 ಲಕ್ಷಕ್ಕೂ ಹೆಚ್ಚು ಮತಗಳ ಲೀಡ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ