Advertisment

Devara review: ದೇವರ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಶೇಕ್‌.. JrNTR ಸಿನಿಮಾದ ರಿವ್ಯೂ ಹೇಗಿದೆ?

author-image
admin
Updated On
ಕಲ್ಕಿ ದಾಖಲೆ ಕುಟ್ಟಿ ಪುಡಿ ಮಾಡುತ್ತಾ ಜ್ಯೂ. ಎನ್​ಟಿಆರ್​ ನಟನೆಯ ದೇವರ; ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ದಾಟಿದೆ ಗೊತ್ತಾ..?
Advertisment
  • ಕಳೆದ 6 ವರ್ಷಗಳಿಂದ JrNTR ಒಬ್ಬರೇ ಹೀರೋ ಆದ ದೇವರ ಸಿನಿಮಾ
  • ದೇವರ ಸಿನಿಮಾ ಮೊದಲ ದಿನವೇ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದೆ
  • ಜವಾನ್, ಅನಿಮಲ್, ಪಠಾಣ್, RRR, ಬಾಹುಬಲಿ 2 ರೆಕಾರ್ಡ್ ಬ್ರೇಕ್‌?

JrNTR ಅಭಿನಯದ ದೇವರ ಸಿನಿಮಾ ಅಕ್ಷರಶಃ ಧೂಳೆಬ್ಬಿಸಿದೆ. ವಿಶ್ವಾದ್ಯಂತ ರಿಲೀಸ್ ಆಗಿರುವ ದೇವರಗೆ ಅಭಿಮಾನಿಗಳು ಫಿದಾ ಆಗಿದ್ರೆ, ಮೊದಲ ದಿನವೇ ಸಿನಿಮಾಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಬಹಳ ದಿನದಿಂದ ಕಾಯುತ್ತಿದ್ದ JrNTR ಫ್ಯಾನ್ಸ್‌ ಹಬ್ಬವನ್ನೇ ಸೆಲೆಬ್ರೇಟ್ ಮಾಡುತ್ತಿದ್ದಾರೆ.

Advertisment

ದೇವರ ಪಾರ್ಟ್ 1 ಸಿನಿಮಾದಲ್ಲಿ ಫಸ್ಟ್ ಆಫ್‌ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. JrNTR ಸಿಂಹದಂತೆ ಘರ್ಜಿಸಿದ್ರೆ, ನಿರ್ದೇಶಕ ಕೊರಟಾಲ ಶಿವು JrNTR ಅಭಿಮಾನಿಗಳಿಗೆ ಯಾವುದೇ ನಿರಾಸೆ ಆಗದಂತೆ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಕೊರಟಾಲ ಶಿವು ಆ್ಯಕ್ಷನ್ ಕಟ್‌ಗೆ ಫುಲ್ ಮಾರ್ಕ್ಸ್‌ ನೀಡಲಾಗುತ್ತಿದೆ. ಮತ್ತೊಂದು ಹಿಟ್ ಸಿನಿಮಾಗೆ ಈ ಜೋಡಿ ಮುನ್ನುಡಿ ಬರೆದಿದೆ.

ಇದನ್ನೂ ಓದಿ: ಅಬ್ಬಾ.. ದೇವರ ಅಬ್ಬರ ಹೀಗೂ ಉಂಟಾ; ಥಿಯೇಟರ್ ಮುಂದೆ JrNTR ಕಟೌಟ್‌ಗೆ ಬೆಂಕಿ! VIDEO 

ದೇವರ ಸಿನಿಮಾ ಮೊದಲ ದಿನವೇ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ದೇವರ ಸಿನಿಮಾದ ರಿವ್ಯೂ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ. ಒಟ್ಟಾರೆ ಸಿನಿಮಾದಲ್ಲಿ JrNTR ಜಬರ್ದಸ್ತ್‌ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

Advertisment

publive-image

ದ್ವಿಪಾತ್ರದಲ್ಲಿ ಮಿಂಚಿದ JrNTR!
ದೇವರ ಸಿನಿಮಾ ಆಂಧ್ರಪ್ರದೇಶದಲ್ಲಿ ಮಧ್ಯರಾತ್ರಿ 1 ಗಂಟೆ ಹಾಗೂ ಬೆಳಗ್ಗೆ 4 ಗಂಟೆಗೆ ಫ್ಯಾನ್ಸ್ ಶೋ ನಡೆದಿದೆ. ದೇವರ ಪಾರ್ಟ್ - 01ರಲ್ಲಿ JrNTR ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಪ್ಪ, ಮಗನ ಪಾತ್ರದಲ್ಲಿ JrNTR ಅಬ್ಬರಿಸಿದ್ದಾರೆ.

ದೇವರ ನೋಡಿದ ಅಭಿಮಾನಿಗಳು ಅದ್ಭುತವಾದ ಸಿನಿಮಾ. ಮೊದಲ ಅರ್ಧ ಸಿನಿಮಾದ ಒಂದೊಂದು ದೃಶ್ಯಗಳು ರೋಮಾಂಚನಕಾರಿಯಾಗಿದೆ. ಅಭಿಮಾನಿಗಳು ದೇವರ ಸಿನಿಮಾವನ್ನು ಮತ್ತೊಮ್ಮೆ ನೋಡಬೇಕು ಎಂದು ಹೇಳುತ್ತಿದ್ದಾರೆ. ದೇವರ ದಕ್ಷಿಣ ಭಾರತದಲ್ಲಿ ಮತ್ತೊಂದು ಸೂಪರ್ ಹಿಟ್ ಸಿನಿಮಾ ಆಗಲಿದೆ ಎಂದು ಹೇಳಿದ್ದಾರೆ.

publive-image

ಕಳೆದ 6 ವರ್ಷಗಳಿಂದ JrNTR ಒಬ್ಬರೇ ಹೀರೋ ಆಗಿ ಅಭಿನಯಿಸಿದ ಸಿನಿಮಾ ಬಿಡುಗಡೆ ಆಗಿರಲಿಲ್ಲ. 2018ರಲ್ಲಿ ಅರವಿಂದ ಸಮೇತ ವೀರ ರಾಘವ ರಿಲೀಸ್ ಆಗಿತ್ತು. 2022ರಲ್ಲಿ ರಾಮ್‌ ಚರಣ್ ತೇಜಾ ಜೊತೆ ಅಭಿನಯಿಸಿದ್ದ RRR ಬಿಡುಗಡೆಯಾಗಿತ್ತು. ಇದೀಗ 6 ವರ್ಷದ ಬಳಿಕ JrNTR ದೇವರ ಸಿನಿಮಾ ಬಿಡುಗಡೆ ಆಗಿರೋದು ವಿಶೇಷವಾಗಿದೆ.

Advertisment

ಇದನ್ನೂ ಓದಿ: ನಾಳೆಯಿಂದ Jr. NTR ದೇವರ ಸಿನಿಮಾ ಆರ್ಭಟ; ಟಿಕೆಟ್​ ರೇಟ್​ ಎಷ್ಟು ಗೊತ್ತಾ? 

ದೇವರದಲ್ಲಿ Jr. ಎನ್​ಟಿಆರ್ ಜತೆಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್, ನಟಿ ಜಾನ್ವಿ ಕಪೂರ್ ಕೂಡ ಇದ್ದಾರೆ. ಇಷ್ಟೇ ಅಲ್ಲ ಬಹುಭಾಷಾ ನಟ ಪ್ರಕಾಶ್​ ರಾಜ್​ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

ಬಾಕ್ಸ್ ಆಫೀಸ್‌ನಲ್ಲಿ ರೆಕಾರ್ಡ್‌ ಬ್ರೇಕ್‌!
JrNTR ದೇವರ ಸಿನಿಮಾ ಬಿಡುಗಡೆಗೆ ಮುಂಚೆಯೇ ವರ್ಲ್ಡ್ ವೈಡ್‌ 75 ಕೋಟಿ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿತ್ತು. ಇದೀಗ ರಿಲೀಸ್ ಆದ ಮೊದಲ ದಿನ ದೇವರ ಸುಮಾರು 140 ಕೋಟಿ ರೂಪಾಯಿ ಗಳಿಸುವ ಲೆಕ್ಕಾಚಾರ ಹಾಕಲಾಗುತ್ತಿದೆ.

Advertisment

ಮೊದಲ ದಿನದ ಕಲೆಕ್ಷನ್‌ನಲ್ಲಿ ದೇವರ ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಜವಾನ್, ಅನಿಮಲ್, ಪಠಾಣ್, RRR, ಬಾಹುಬಲಿ 2, ಕಲ್ಕಿ 2898 AD, ಸಲಾರ್, KGF Chapter 2 ಮತ್ತು ಲಿಯೋ ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment