ಹಣಕ್ಕೆ ಅಡಚಣೆ ಆಗಬಹುದು, ಔಷಧಿಗಾಗಿ ಹೆಚ್ಚು ಖರ್ಚು; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಬೇರೆಯವರ ಸಲಹೆಗಿಂತ ನಿಮ್ಮ ಆಲೋಚನೆ ಬಹಳ ಮುಖ್ಯ
  • ವೈವಾಹಿಕ ಜೀವನದಲ್ಲಿ ಅಹಂನಿಂದ ಸಮಸ್ಯೆಯಾಗಬಹುದು
  • ವ್ಯಾವಹಾರಿಕವಾಗಿ ಅದೃಷ್ಟವಶಾತ್ ನೀವು ಅಪಾಯದಿಂದ ಪಾರಾಗುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಹಿಮವಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪುಷ್ಯಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ನಾಹ್ನ 12.00 ರಿಂದ 1.30 ರವರೆಗೆ

ಮೇಷ ರಾಶಿ

publive-image

  • ಮಾನಸಿಕ ಕಿರಿಕಿರಿ ಉಂಟಾಗಬಹುದು
  • ಇಂದು ಕೆಲಸದಲ್ಲಿ ಹಿನ್ನಡೆಯಾಗಬಹುದು
  • ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ
  • ವಾಹನದಿಂದ ತೊಂದರೆಯಾಗಬಹುದು
  • ಹಣಕ್ಕೆ ಅಡಚಣೆ ಆಗಬಹುದು
  • ಔಷಧಿಗಾಗಿ ಹೆಚ್ಚು ಖರ್ಚು ಮಾಡುವುದರಿಂದ ಬೇಸರ ಆಗಲಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಮನಸ್ಸಿಗೆ ಸಮಾಧಾನವಿದೆ ಆದರೆ ಜಾಣ್ಮೆಯಿಂದ ಎಲ್ಲಾ ಕೆಲಸಗಳನ್ನು ಮಾಡಿ
  • ಯಾವುದೇ ಕಠಿಣವಾದ ನಿರ್ಧಾರಗಳು ಬೇಡ
  • ಪ್ರಯಾಣ ಅಥವಾ ಪ್ರವಾಸಕ್ಕೆ ಆದ್ಯತೆಯನ್ನು ನೀಡಿ
  • ನಿಮ್ಮ ಮನಸ್ಸಿಗೆ ಸಮಾಧಾನ ಆಗುವ ಕೆಲಸಕ್ಕೆ ಆದ್ಯತೆ ನೀಡಿ
  • ವಾಹನ ವಿಚಾರದಲ್ಲಿ ಸ್ವಲ್ಪ ಸಂತೋಷ ಆಗಲಿದೆ
  • ಮಕ್ಕಳ ವಿಚಾರದಲ್ಲಿ ತೃಪ್ತಿ ಹೊಂದುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಈ ದಿನ ಯಾವುದೇ ರೀತಿಯ ಅಹಿತವಾದ ಮಾತು ಬೇಡ
  • ನಿಮ್ಮ ವ್ಯವಹಾರದ ಬಗ್ಗೆ ಗಮನವಿರಲಿ
  • ಸ್ನೇಹಿತರ ಸಲಹೆ ಉಪಯೋಗಕ್ಕೆ ಬರುವುದಿಲ್ಲ
  • ತಂದೆಯವರ ಜೊತೆ ಜಗಳ ಆಗುವ ಸಂಭವವಿದೆ
  • ಹಣಕಾಸಿನ ವಿಚಾರದಲ್ಲಿ ಸರಿಯಾದ ದಾಖಲಾತಿಗಳಿರಲಿ
  • ವ್ಯಾವಹಾರಿಕವಾಗಿ ಸ್ವಲ್ಪ ಗೊಂದಲಗಳು ಸವಾಲುಗಳಾಗಿರುತ್ತದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ನೀವು ಅಂದುಕೊಂಡ ಕೆಲಸ ಸಾಧಿಸುವಲ್ಲಿ ಪ್ರಯತ್ನಿಸುತ್ತೀರಿ ಆದರೆ ಅಪಯಶಸ್ಸು
  • ನಂಬಿದವರಿಂದಲೇ ಮೋಸ ಆಗುವ ಸಾಧ್ಯತೆ
  • ಮನೆಯಲ್ಲಿ ಅಶಾಂತಿಯ ವಾತಾವರಣ ಇರಲಿದೆ
  • ನಿಮ್ಮ ಚಿಂತನೆ ಬೇರೆ ಕೆಲಸ ಆಗುವುದೇ ಬೇರೆ
  • ಮಕ್ಕಳ ಬಗ್ಗೆ ಸ್ವಲ್ಪ ಚಿಂತೆ ಆರಂಭ ಆಗಲಿದೆ
  • ಕುಟುಂಬದ ಸಮಸ್ಯೆ ಉಂಟಾಗಲಿದೆ
  • ಅಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಪ್ರವಾಸದ ವಿಚಾರ ಮನಸ್ಸಿಗೆ ಖುಷಿ ಕೊಡಲಿದೆ
  • ಅದೃಷ್ಟದ ಬೆಂಬಲ ನಿಮಗೆ ಸಿಗಬಹುದಾದ ದಿನ
  • ಬೇರೆಯವರನ್ನು ಟೀಕೆ ಮಾಡಬಾರದು
  • ತಪ್ಪುಗಳನ್ನು ಗಮನಿಸಿ ಆದರೆ ಸುಮ್ಮನಿರುವುದು ಒಳಿತು
  • ವೈವಾಹಿಕ ಜೀವನದಲ್ಲಿ ಅಹಂನಿಂದ ಸಮಸ್ಯೆಯಾಗಬಹುದು
  • ಉದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ಸೂಚನೆ ಕಾಣಲಿದೆ
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಸಾಂಸಾರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಿ
  • ಸರ್ಕಾರಿ ಸೇವೆಗೆ ಸಂಬಂಧಿಸಿದಂತೆ ಅನುಕೂಲವಿದೆ
  • ಬೇರೆಯವರ ಸಲಹೆಗಿಂತ ನಿಮ್ಮ ಆಲೋಚನೆ ಬಹಳ ಮುಖ್ಯ
  • ಇಂದು ನೀವು ಪ್ರಿಯರಾದವರನ್ನು ಭೇಟಿಯಾಗಬಹುದು
  • ವ್ಯಾವಹಾರಿಕವಾದ ಅನುಕೂಲತೆಗಳು ನಿಮ್ಮ ಪರವಾಗಿದೆ
  • ಮಾನಸಿಕವಾದ ಹಿಡಿತವಿರಲಿ ಅದರಿಂದ ತೃಪ್ತಿ ಇದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಗಮನವಿರಲಿ
  • ಗುರಿ ಸಾಧಿಸಿ ನಿಟ್ಟುಸಿರು ಬಿಡುತ್ತೀರಿ
  • ತಮಾಷೆ ಅಥವಾ ನಗುವಿನಿಂದ ದಿನ ಕಳೆಯುತ್ತೀರಿ
  • ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಗಮನಕೊಡಿ
  • ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದೆ
  • ಹೊಸ ಆಸ್ತಿ ಖರೀದಿ ಮಾಡುವ ಚಿಂತನೆ ಮನಸ್ಸಿಗೆ ಬರಲಿದೆ
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ವ್ಯಾವಹಾರಿಕವಾಗಿ ಅದೃಷ್ಟವಶಾತ್ ನೀವು ಅಪಾಯದಿಂದ ಪಾರಾಗುತ್ತೀರಿ
  • ಉದ್ಯೋಗದಲ್ಲಿ ಒತ್ತಡವನ್ನು ತಪ್ಪಿಸಿಕೊಳ್ಳಬೇಕು
  • ಸಾಮಾಜಿಕ ಕಾರ್ಯಗಳಿಗೆ ನಿಮ್ಮ ಕೊಡುಗೆ ಅಗತ್ಯ
  • ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮೊದಲು ದೂರ ಮಾಡಿಕೊಳ್ಳಿ
  • ಹೊರಗಿನ ಜನ ನಿಮ್ಮ ಕಡೆ ಆಕರ್ಷಿತರಾಗಬಹುದು
  • ಮನೆಯಲ್ಲಿ ಉತ್ತಮ ವಾತಾವರಣ ಇರುವುದಿಲ್ಲ
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಪ್ರಯಾಣದಿಂದ ತೊಂದರೆಯಾಗುವ ಸೂಚನೆ ಇದೆ
  • ಮಧ್ಯಾಹ್ನದ ನಂತರ ದಿನ ಚೆನ್ನಾಗಿದೆ
  • ಮಾತನಾಡುವಾಗ ಹೆಚ್ಚು ಗಮನವಿರಲಿ
  • ಸ್ನೇಹಿತರ ಜೊತೆ ಸಂಬಂಧ ಚೆನ್ನಾಗಿರುವುದಿಲ್ಲ
  • ಅತಿಯಾದ ಆಸೆಯನ್ನು ನಿಯಂತ್ರಿಸಿ
  • ಸ್ವಾರ್ಥವನ್ನು ಬಿಟ್ಟು ಚಿಂತಿಸಿ ಶುಭವಿದೆ
  • ದೇವಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಹಿರಿಯರ ಮಾತಿಗೆ ಬೆಲೆ ಇರಲಿ
  • ಬೇರೆಯವರನ್ನು ದುರುಪಯೋಗ ಮಾಡಿಕೊಳ್ಳಬೇಡಿ
  • ಸಾಮಾಜಿಕ ಕ್ಷೇತ್ರದಲ್ಲಿ ಭಯದಿಂದಲೇ ಕಾರ್ಯ ನಿರ್ವಹಿಸಬೇಕಾಗಲಿದೆ
  • ವೃತ್ತಿ ಬಗ್ಗೆ ಗೌರವವಿರಲಿ ಯಶಸ್ಸನ್ನು ಹೊಂದುತ್ತೀರಿ
  • ಮನೆಗೆ ಹೊಸ ವಸ್ತು ಖರೀದಿಸುವುದರಿಂದ ಸಂತಸ ಆಗಲಿದೆ
  • ಮಕ್ಕಳ ಪ್ರಗತಿಯ ಬಗ್ಗೆ ಚಿಂತನೆ ಮಾಡಿ
  • ಗೋ ಸೇವೆಯನ್ನು ಮಾಡಿ

ಕುಂಭ

publive-image

  • ಉದ್ಯೋಗಿಗಳಿಗೆ ಹಣದ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ಹಣ ಹೂಡಿಕೆಗೆ ಸಮಯ ಒಳ್ಳೆಯದಾಗಿದೆ
  • ಭವಿಷ್ಯದ ಯೋಚನೆಯನ್ನಿಟ್ಟುಕೊಂಡು ಕೆಲಸ ಮಾಡಿದರೆ ಒಳ್ಳೆಯದು
  • ಶಿಸ್ತು ಪಾಲನೆ ಇರಲಿ
  • ಇಂದು ಶಾಂತಿಯಿಂದ ವರ್ತಿಸಬೇಕು ಶುಭವಿದೆ
  • ಆತುರದ ಅಥವಾ ಅತಿಯಾದ ಆಸೆಯನ್ನಿಟ್ಟುಕೊಂಡು ಯೋಚನೆ ಮಾಡೋದು ಬೇಡ
  • ಕುಲದೇವತಾ ಪ್ರಾರ್ಥನೆ ಮಾಡಿ

ಮೀನ

publive-image

  • ಕೆಲಸದ ಒತ್ತಡಗಳಿಂದ ಹೊರ ಬರುತ್ತೀರಿ
  • ನಿಮ್ಮ ಜೀವನದ ಮುಖ್ಯವಾದ ಮೌಲ್ಯಗಳನ್ನು ತಿಳಿಯಿರಿ
  • ನಿಮ್ಮ ಕೆಲಸದ ರೀತಿಯಿಂದ ನಿಮಗೆ ಅನುಮಾನ ಬರಲಿದೆ
  • ಸ್ವಾರ್ಥ ಅಥವಾ ಕೋಪ ನಿಮ್ಮಿಂದ ದೂರ ಆದರೆ ಮಾತ್ರ ಶುಭವಿದೆ
  • ವ್ಯಾವಹಾರಿಕವಾಗಿ ಸೋತು ಹೋಗಲು ನೀವೇ ಕಾರಣ
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಸಿಗಬಹುದು
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment