ಮಾನಸಿಕ ಕಿರಿಕಿರಿ, ಹಣದ ತೊಂದರೆ, ಬೇಸರ, ಸ್ನೇಹಿತರ ಮಧ್ಯ ಮನಸ್ತಾಪ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣದ ಸೂಚನೆಗಳಿವೆ
  • ವ್ಯಾಪಾರ-ವ್ಯವಹಾರದಲ್ಲಿ ಜಾಗ್ರತೆಯಿಂದ ಹಣವನ್ನು ಹೂಡಿಕೆ ಮಾಡಿ
  • ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣದ ಸೂಚನೆಗಳಿವೆ
  • ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಬರಬಹುದು
  • ಉನ್ನತವಾದ ಅಧಿಕಾರಿಗಳ ಸಂಬಂಧ ಈ ಸಂದರ್ಭದಲ್ಲಿ ಏರ್ಪಾಟಾಗುತ್ತದೆ
  • ಮಾನಸಿಕವಾಗಿ ತುಂಬಾ ಒತ್ತಡ ಹಾಗೂ ಕಿರಿಕಿರಿ ಇರುವ ದಿನ
  • ಮನಸ್ಸು ತುಂಬಾ ಗಾಸಿಗೊಳ್ಳುವ ಸಾಧ್ಯತೆ ಇದೆ
  • ತುಂಬಾ ಆಲೋಚನೆಗಳನ್ನು ಮಾಡುವ ದಿನವಾಗಿರುತ್ತದೆ
  • ಸಾಲಿಗ್ರಾಮ ಮಹಾವಿಷ್ಣುವನ್ನು ಧ್ಯಾನಿಸಿ

ವೃಷಭ

publive-image

  • ಮನೆಯಲ್ಲಿ ಉತ್ತಮವಾದ ವಾತಾವರಣ
  • ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ
  • ಇದರಿಂದ ಮನಸ್ಸಿಗೆ ಬೇಸರ ಹಾಗೂ ನೋವಾಗುವ ಸಾಧ್ಯತೆ ಹೆಚ್ಚು
  • ಮನೆಯ ಹೊರಗೆ ಹಾಗೂ ನೌಕರಿಯ ಸ್ಥಳದಲ್ಲಿ ಉಹಾಪೋಹಗಳಿರಬಹುದು
  • ಮನೆಯಲ್ಲಿ ಎಲ್ಲರ ವಿಶ್ವಾಸ,ಪ್ರೀತಿ,ನಂಬಿಕೆಗಳಿಗೆ ಬದ್ಧರಾಗಿರುತ್ತೀರಿ
  • ಕೆಲವೇ ಕೆಲವರು ಮಾತ್ರ ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
  • ವಿದ್ಯಾರ್ಥಿಗಳು ದುಂದುವೆಚ್ಚ,ಕಾಲಾಹರಣವನ್ನು ಮಾಡಬಹುದು
  • ಕುಲದೇವರನ್ನು ಪ್ರಾರ್ಥಿಸಿ

ಮಿಥುನ

publive-image

  • ಹೊಸದಾಗಿ ಯಾವುದೇ ರೀತಿಯ ವ್ಯವಹಾರ ಮಾಡಲು ಇಂದು ಶುಭದಿನವಲ್ಲ
  • ವ್ಯಾಪಾರ-ವ್ಯವಹಾರದಲ್ಲಿ ಜಾಗ್ರತೆಯಿಂದ ಹಣವನ್ನು ಹೂಡಿಕೆ ಮಾಡಿ
  • ನಿಮ್ಮ ವ್ಯವಹಾರ,ವ್ಯಾಪಾರ,ವೃತ್ತಿಯಲ್ಲಿ ಸಭ್ಯರಾಗಿರಬೇಕು
  • ಅಸಭ್ಯವಾಗಿ ವರ್ತನೆ ಮಾಡಿದರೆ ಅವಮಾನ ಅಥವಾ ಶಿಕ್ಷೆಗೆ ಒಳಗಾಗುತ್ತೀರಿ
  • ಹಣದ ಚಿಂತೆ ಕಾಡಬಹುದು ಆದರೆ ತೊಂದರೆಯಾಗದೆ ಹಣ ಸಿಗಲಿದೆ
  • ಹಳೆಯ ಕಹಿ ನೆನಪುಗಳು ನಿಮ್ಮನ್ನು ಕಾಡಬಹುದು
  • ತಾವು ಜೀವನದಲ್ಲಿ ನಡೆದು ಬಂದ ಹಾದಿ ನೆನಪಿಗೆ ಬರುತ್ತದೆ
  • ಇಷ್ಟ ದೇವತಾ ಧ್ಯಾನ ಮಾಡಿ

ಕಟಕ

publive-image

  • ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
  • ಕಾನೂನು ವಿದ್ಯಾರ್ಥಿಗಳು ತಮ್ಮ ಹಿರಿಯ ವಿದ್ಯಾರ್ಥಿಗಳಿಂದ ಅನುಕೂಲವಾಗುವಂತಹ ವಿಚಾರಗಳನ್ನು ಚರ್ಚಿಸಿ ವಿಷಯ ಸಂಪಾದಿಸಲು ಅವಕಾಶವಿದೆ
  • ಹಿರಿಯರು ಕೂಡ ಮಾರ್ಗದರ್ಶನ ಮಾಡುವ ಸಾಧ್ಯತೆ
  • ವಕೀಲರಿಗೆ ಶುಭದಿನ, ಲಾಭವೂ ದೊರೆಯುವ ದಿನ
  • ಕಬ್ಬಿಣ ವ್ಯಾಪಾರ ಮಾಡುವವರಿಗೆ ಲಾಭವಿದ್ರೂ ಕೂಡ ದಂಡ ಕಟ್ಟಬೇಕಾಗಬಹುದು
  • ಹಣ ಹೂಡಿಕೆ ಮತ್ತು ಹೆಚ್ಚು ಹಣ ಖರ್ಚಾಗುವ ಕೆಲಸವನ್ನು ಆರಂಭಿಸಲು ಶುಭದಿನವಲ್ಲ
  • ಶನೈಶ್ವರನನ್ನು ದರ್ಶನ ಮಾಡಿ, ಎಳ್ಳೆಣ್ಣೆ ದಾನ ಮಾಡಿ

ಸಿಂಹ

publive-image

  • ಮನೆಯಲ್ಲಿ ಏನೋ ಸಂತಸದ ವಾತಾವರಣವಿರುತ್ತದೆ
  • ಮನೆಯಲ್ಲಿ ಎಲ್ಲರೂ ಉತ್ಸಾಹ ಭರಿತರಾಗಿರುತ್ತಾರೆ
  • ಕಮಿಷನ್​ ಏಜೆಂಟ್ಸ್​ಗಳಿಗೆ ಶುಭ ಮತ್ತು ಲಾಭದಾಯಕವಾಗುವ ದಿನ
  • ಕುಟುಂಬ ಮತ್ತು ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು
  • ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರಗಳಿಗೆ ಅಥವಾ ವಿದೇಶಗಳಿಗೆ ಹೋಗುವವರಿಗೆ ಅನುಕೂಲದ ದಿನ
  • ನಿವೃತ್ತರಾದ ಸರ್ಕಾರಿ ನೌಕರರಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ
  • ಬೆನ್ನು ನೋವಿನ ಸಮಸ್ಯೆಯಿಂದ ನೀವು ಬಳಲಬಹುದು
  • ವಿಘ್ನೇಶ್ವರನನ್ನು ಪ್ರಾರ್ಥಿಸಿ

ಕನ್ಯಾ

publive-image

  • ಕಲಾಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಉತ್ತಮ ಸ್ಥಾನಮಾನಗಳು ದೊರೆಯಲಿದೆ
  • ಹಿಂದೆ ಹೂಡಿಕೆ ಮಾಡಿದ್ದ ಹಣ ಈ ದಿನ ಲಾಭವನ್ನು ನೀಡುವ ಸೂಚನೆಯಿದೆ
  • ವಾಹನ ಖರೀದಿಯ ಆಲೋಚನೆ ಬರಬಹುದು
  • ವಾಹನವನ್ನು ಖರೀದಿಸಬಹುದು
  • ಸಣ್ಣ ಪುಟ್ಟ ಆಸ್ತಿಯ ವಿಚಾರಕ್ಕೆ ಮನಸ್ತಾಪ ಉಂಟಾಗುವ ಸಾಧ್ಯತೆ
  • ಮಾನಸಿಕ ಕಿರಿಕಿರಿ, ಹಣದ ತೊಂದರೆ, ಬೇಸರ, ಸಂಬಂಧದಲ್ಲಿ ಒಡಕು ಉಂಟಾಗಬಹುದು
  • ಆದ್ದರಿಂದ ಈ ಸಮಸ್ಯೆಯನ್ನು ಮಾತಿನಲ್ಲಿ ಬಗೆಹರಿಸಿದರೆ ಒಳ್ಳೆಯದು
  • ಮನೆಯಲ್ಲಿ ಶಾಂತಿಯ ವಾತಾವರಣ ಕದಡಿ ಹೋಗಿ ಆತಂಕ ಉಂಟಾಗುತ್ತದೆ
  • ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ
  • ಅಶಕ್ತರಿಗೆ, ರೋಗಿಗಳಿಗೆ ಹಣ್ಣುಗಳನ್ನು ಕೊಡಿ

ತುಲಾ

publive-image

  • ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
  • ಪ್ರಯಾಣವು ತುಂಬಾ ಆಯಾಸವನ್ನುಂಟು ಮಾಡುತ್ತದೆ
  • ಶತ್ರುಗಳ ಆಕ್ರಮಣದ ಸೂಚನೆಯಿದೆ ತಾಳ್ಮೆಯಿರಲಿ
  • ನೀವು ಆಡುವ ಮಾತು ನಿಮಗೆ ತೊಂದರೆಯನ್ನು ಮಾಡಬಹುದು
  • ಹಿರಿಯರ ಮತ್ತು ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾಗುತ್ತದೆ
  • ಉದ್ಧಟತನದಿಂದ ಮಾತನ್ನು ತಿರಸ್ಕಾರ ಮಾಡಿದರೆ ತೊಂದರೆಯಾಗಬಹುದು
  • ಇದೇ ಮಾತು ನಿಮಗೆ ಪರಿಹಾರ ಮಾರ್ಗ ಕೂಡ ಆಗಬಹುದು
  • ಅಶುಭ ವಾರ್ತೆಯಿಂದ ಮನಸ್ಸಿಗೆ ನೋವುಂಟಾಗಬಹುದು
  • ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು

ವೃಶ್ಚಿಕ

publive-image

  • ಕುಟುಂಬದಲ್ಲಿ ಹಲವಾರು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗುತ್ತದೆ
  • ಪ್ರೇಮಿಗಳಿಗೆ ಸುದಿನ ಆದರೆ ದುರುಪಯೋಗ ಮಾಡಿಕೊಳ್ಳಬಾರದು
  • ಹಣ,ವಸ್ತ್ರ ಮನಸ್ಸಿಗೆ ಸಮಾಧಾನ ಕೊಡುವ ಸಂದರ್ಭ
  • ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಡುವುದರಿಂದ ಅವರಿಗೆ ಬೇಸರ ಉಂಟಾಗಬಹುದು
  • ನಿಮ್ಮ ಒತ್ತಡಗಳು ಇದ್ದರೂ ಕೂಡ ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಿ
  • ಅಮೂಲ್ಯವಾದ ಗ್ರಂಥ ಸಂಪಾದನೆ ಅಥವಾ ಓದಿನ ಕಡೆಗೆ ಹೆಚ್ಚು ಗಮನಕೊಡಿ
  • ಸಮುದ್ರ ತೀರದಲ್ಲಿ ಈಶ್ವರ ಆರಾಧನೆ ಮಾಡಿ
  • ಗೋಕರ್ಣ,ಮುರುಡೇಶ್ವರ,ರಾಮೇಶ್ವರನ ಆರಾಧನೆ ಮಾಡಿ

ಧನುಸ್ಸು

publive-image

  • ಫಲ ನೀಡದ ಕೆಲಸಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು
  • ವೈಯಕ್ತಿಕವಾದ ಆರೋಗ್ಯದ ಸಮಸ್ಯೆಗೆ ಪರಿಹಾರ ದೊರಕಬಹುದು
  • ಮಧುಮೇಹಿಗಳು ಸ್ವಲ್ಪ ಎಚ್ಚರಿಕೆ ವಹಿಸಿ ಕಾಯಿಲೆ ಉಲ್ಬಣವಾಗಬಹುದು
  • ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
  • ಕೃಷಿ ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
  • ಹೊಸ ಯೋಜನೆಗಳನ್ನು ಮಾಡಬೇಡಿ ಅಂತ ಹೇಳಬೇಕಾಗುತ್ತದೆ
  • ಹರೇ ಶ್ರೀನಿವಾಸ ಎಂದು ಪ್ರಾರ್ಥಿಸಿ

ಮಕರ

publive-image

  • ದಿನದ ಎಲ್ಲಾ ಕೆಲಸಗಳು ನೆರವೇರುವ ಆತ್ಮ ವಿಶ್ವಾಸ ನಿಮ್ಮದಾಗಿರುತ್ತದೆ
  • ಪ್ರೇಮಿಗಳು ಮಾತ್ರ ಸುಳ್ಳು ಹೇಳಬಾರದು
  • ತಪ್ಪುಗಳನ್ನು ಮುಚ್ಚಿಡಬೇಡಿ ಒಪ್ಪಿಕೊಳ್ಳಿ
  • ಬೇರೆಯವರಿಂದ ನಿಮ್ಮ ತಪ್ಪು ತಿಳಿದಾಗ ನಿಮ್ಮ ಮೇಲಿರುವ ನಂಬಿಕೆ ಉಳಿಯುವುದಿಲ್ಲ
  • ಆತ್ಮ ಪ್ರಶಂಸೆ ಹಲವರಿಗೆ ಆಶ್ಚರ್ಯವನ್ನುಂಟು ಮಾಡಬಹುದು
  • ವೃತ್ತಿ ಜೀವನದ ಬಗ್ಗೆ ಸಮಾಧಾನವಿರುತ್ತದೆ
  • ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ ಮನಸ್ಸಿಗೆ ಬೇಸರ ಉಂಟು ಮಾಡಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕುಂಭ

publive-image

  • ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆ ಇರಲಿ
  • ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
  • ಅಪರಾಧ ಭಾವ ನಿಮ್ಮನ್ನ ಹೆಚ್ಚಾಗಿ ಕಾಡಬಹುದು
  • ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
  • ಧನಬಲ ನಿಮಗೆ ಕೆಲಸ ಮಾಡುವುದಿಲ್ಲವೆಂದು ಗೊತ್ತಾಗುತ್ತದೆ
  • ಹಳೆಯ ವಿಚಾರಗಳು ಪ್ರಸ್ತಾಪವಾಗಿ ನಿಮಗೆ ತೊಂದರೆ ಉಂಟಾಗಬಹುದು
  • ತಾಳ್ಮೆಯಿರಲಿ, ನಾಟಕೀಯ ಜೀವನ ಬೇಡವೆಂದೇ ಹೇಳಬೇಕಾಗುತ್ತದೆ
  • ದುರ್ಗಾದೇವಿಯನ್ನು ಆರಾಧಿಸಿ ಅಥವಾ ದುರ್ಗಾಹೋಮ ಮಾಡಿಸಿ

ಮೀನ

publive-image

  • ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ, ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
  • ನಿಮ್ಮ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
  • ಸ್ನೇಹಿತರು, ಬಂಧುಗಳು ನಿಮಗೆ ಸಹಾಯ ಮಾಡುತ್ತಾರೆ
  • ದುಡ್ಡಿನ ಬಗ್ಗೆ ಹೆಚ್ಚಿನ ಆಸಕ್ತಿಯಿರುವುದಿಲ್ಲ
  • ಇಷ್ಟವಾದ ಮಿತ್ರರ ಮಾತು ಬಹಳ ಹಿತವೆನಿಸುತ್ತದೆ
  • ವಿದ್ಯಾರ್ಥಿಗಳಿಗೆ ಹೊರಗಿನಿಂದ ಮೆಚ್ಚುಗೆಯ ಮಾತು ಬರುತ್ತದೆ
  • ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಶುಭದಿನ
  • ಲಲಿತಾ ಸಹಸ್ರನಾಮ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment