ಮಕ್ಕಳ ಮಾತಿನಿಂದ ಶುಭಸುದ್ದಿ; ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ; ಇಲ್ಲಿದೆ ನಿಮ್ಮ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಬಹಳ ಸಂತೋಷವಾಗಿ ಈ ದಿನ ಕಳೆಯಲು ಪ್ಲಾನ್ ಮಾಡಿರುತ್ತೀರಿ
  • ಮನಸ್ಸಿಗೆ ಬಂದಂತೆ ವರ್ತಿಸಿದ್ರೆ ಅನಾಹುತವಾಗಬಹುದು ಎಚ್ಚರ
  • ಅತಿಯಾದ ಉತ್ಸಾಹ, ಆತುರದಿಂದ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ ತಿಥಿ, ಜ್ಯೇಷ್ಠಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ

ಮೇಷ ರಾಶಿ

publive-image

  • ಇಂದು ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭ ಏರ್ಪಡಬಹುದು
  • ದೀರ್ಘಕಾಲದ ರೋಗಗಳು ಉಲ್ಬಣವಾಗುವ ಸೂಚನೆಯಿದೆ
  • ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಇರುವವರಿಗೆ ಪುರಸ್ಕಾರ, ಗೌರವ ಸಿಗಬಹುದು
  • ಈ ದಿನ ಮನೆಯಲ್ಲಿರುವುದು ಕಷ್ಟಕರ ಕೆಲಸವಾಗಬಹುದು
  • ಕೆಲಸದ ಒತ್ತಡದಿಂದಾಗಿ ಕಚೇರಿಯಲ್ಲಿ ಅನಿವಾರ್ಯವಾಗಿ ಇರಬೇಕಾಗಬಹುದು
  • ನಿಮ್ಮ ಸಂಶೋಧನೆ ಮತ್ತು ಸಾಧನೆ ಸಮಾಜದಲ್ಲಿ ಆಕರ್ಷಣೀಯವಾಗಿರುತ್ತದೆ
  • ಪರಮೇಶ್ವರಿಯನ್ನು ಆರಾಧಿಸಿ

ವೃಷಭ

publive-image

  • ಅನಗತ್ಯ ವಿಚಾರಗಳಿಗಾಗಿ ಚಿಂತಿಸಿ ಬೇಸರಗೊಳ್ಳುತ್ತೀರಿ
  • ನಿಮಗೆ ಸಂಬಂಧ ಪಡದೆಯಿರುವ ವಿಚಾರಗಳಿಂದ ದೂರವಿದ್ದರೆ ಒಳ್ಳೆಯದು
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ, ಮಾನಸಿಕವಾಗಿ ಬೇಸರ ಬೇಡ
  • ವೈದ್ಯರಿಗೆ ಬಿಡುವಿಲ್ಲದ ಕೆಲಸ ತುಂಬಾ ಆಯಾಸ ಹೊಂದಬಹುದು
  • ಷೇರು ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ಸಾಧ್ಯತೆ, ಹೂಡಿಕೆ ಮುಂದೂಡಿದರೆ ಒಳ್ಳೆಯದು
  • ಈ ಹಿಂದೆ ಆಪರೇಶನ್​ ಆಗಿರುವವರಿಗೆ ಸ್ವಲ್ಪ ಸಮಸ್ಯೆ ಕಾಡಬಹುದು, ಜಾಗ್ರತೆಯಿರಲಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ

ಮಿಥುನ

publive-image

  • ನಿಮ್ಮ ಅಭಿವೃದ್ಧಿಯನ್ನು, ಬೆಳವಣಿಗೆಯನ್ನ ಸಹಿಸದವರು ನಿಮ್ಮ ವಿರುದ್ಧ ನಿಲ್ಲುತ್ತಾರೆ ಎಚ್ಚರ
  • ಪರೀಕ್ಷಾ ಫಲಿತಾಂಶಗಳು ಬರುವುದಿದ್ದರೆ ನಿಮ್ಮ ಪರವಾಗಬಹುದು
  • ಕೋರ್ಟ್,​ ಕಚೇರಿಯ ಹಳೆಯ ಕೇಸ್​ಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ
  • ಅತಿಯಾದ ನಂಬಿಕೆ ವಿಶ್ವಾಸ ನಿಮಗೆ ತೊಂದರೆಯಾಗಬಹುದು
  • ಸಮಾಜದಲ್ಲಿ ಹೆಸರು ಕೆಡುವಂತಹ ಸಂದರ್ಭಗಳೇ ಹೆಚ್ಚಾಗಿವೆ ಜಾಗ್ರತೆಯಿರಲಿ
  • ಇಂದು ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಪತಿ-ಪತ್ನಿಯರ ಮಧ್ಯೆ ವಿರಸ ದೂರವಾಗಿ ಅನ್ಯೋನ್ಯವಾಗಿರುವ ಸಮಯ
  • ಹಣ ಹೂಡಿಕೆಗೆ ಮಾತುಕತೆ ನಡೆಯಬಹುದು
  • ಹೊಸ ವಾಹನ ಖರೀದಿ ಮಾಡುವ ಸಾಧ್ಯತೆಯಿದೆ
  • ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಗಮನವಿರಲಿ
  • ಕೆಲಸಗಾರರಿಂದ ತೊಂದರೆಯಾಗಬಹುದು ಆದರೆ ಗಾಬರಿ ಬೇಡ
  • ಮನೆಯಲ್ಲಿ ಕಳ್ಳತನದ ಹೆದರಿಕೆ ಕಾಡಬಹುದು ಎಚ್ಚರಿಕೆವಹಿಸಿ
  • ಸುಖವಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
  • ಮಾನಸಿಕ ಕಿರಿಕಿರಿಯೊಂದಿಗೆ ದಿನ ಮುಕ್ತಾಯವಾಗುತ್ತದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ಸಿಂಹ

publive-image

  • ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪುವ ವಿಚಾರದಲ್ಲಿ ಹೆಚ್ಚು ಗಮನಹರಿಸಿ
  • ಪ್ರಯಾಣ-ಪ್ರವಾಸದ ಬಗ್ಗೆ ಚರ್ಚೆ ನಡೆದು ಕೊನೆಗೆ ಬೇಡವೆಂದು ಬೇಸರವಾಗಬಹುದು
  • ರಾಜಕಾರಣಿಗಳು ತಮ್ಮ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಬಹುದು ಎಚ್ಚರಿಕೆಯಿರಲಿ
  • ಹೆಚ್ಚು ಹೆಚ್ಚು ಖರ್ಚಿನ ಪಟ್ಟಿ ನೋಡಿ ನಿರಾಶೆಯಾಗಬಹುದು
  • ಮಕ್ಕಳಿಗೆ ಉಸಿರಾಟದ ಅಥವಾ ಶ್ವಾಸಕೋಶದ ಸಮಸ್ಯೆ ಕಾಣಬಹುದು
  • ಅಶ್ವಿನಿ ದೇವತೆಗಳನ್ನು ಆರಾಧಿಸಿ

ಕನ್ಯಾ

publive-image

  • ಅತಿಯಾದ ಉತ್ಸಾಹ, ಆತುರದಿಂದ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ
  • ಶಾರೀರಿಕವಾಗಿ ಸುಖವಿರುವುದಿಲ್ಲ, ನರದೌರ್ಬಲ್ಯ ಕಾಡಬಹುದು
  • ಪೋಷಕರಿಗೆ ದುಃಖದಾಯಕವಾದ ದಿನ, ದೊಡ್ಡವರ ವಿಚಾರದಲ್ಲಿ ಕಾಳಜಿವಹಿಸಿ
  • ಸಂಬಂಧಿಕರಿಂದ ಧನಲಾಭ, ದ್ರವ್ಯಲಾಭ ಯೋಗವಿದೆ
  • ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆ ಇರಲಿ
  • ನಿಮ್ಮದಲ್ಲದ ತಪ್ಪಿಗೆ ನೀವು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ
  • ಈಶ್ವರನ ಆರಾಧನೆ ಮಾಡಿ, ಗೋವಿಗೆ ಅಕ್ಕಿಬೆಲ್ಲ ಕೊಡಿ

ತುಲಾ

publive-image

  • ಕೆಲಸದ ಜಾಗದಲ್ಲಿ, ವೃತ್ತಿಯಲ್ಲಿ ಋಣಾತ್ಮಕ ವಾತಾವರಣ ಮಾನಸಿಕ ಬೇಸರ ಸಾಧ್ಯತೆ
  • ಕಹಿ ಮಾತುಗಳಿಂದ ಮನಸ್ಸಿನ ಮೇಲೆ ಪರಿಣಾಮ ಸಾಧ್ಯತೆ ಹಗುರವಾಗಿ ತೆಗೆದುಕೊಳ್ಳಿ
  • ಹೊಸ ಸಂಬಂಧಗಳಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳಬೇಕು
  • ಬಂಧುತ್ವದಲ್ಲಿ ಬಿರುಕು, ವಿನಾಕಾರಣ ಮಾತಿನ ಸುರಿಮಳೆ ಮನಸ್ಸಿಗೆ ಅಸಹ್ಯ ಸಾಧ್ಯತೆ
  • ಪ್ರೇಮ ಸಂಬಂಧ ವಿಚಾರದಲ್ಲಿ ಜಗಳ, ವಿರಸ ಸಾಧ್ಯತೆ
  • ಮಾತೆ ಸೀತೆಯನ್ನು ಆರಾಧನೆ ಮಾಡಿ
  • ''ಶ್ರೀ ಭೂಮಿ ನೀಲಾತ್ಮಿಕಾ ಭದ್ರರೂಪಿಣೀ ಸೋಮ ಸೂರ್ಯಾಗ್ನಿ ರೂಪ ಭವತಿ'' ಎಂದು 8 ಸಲ ಜಪಿಸಿ

ವೃಶ್ಚಿಕ

publive-image

  • ರಾಜಕಾರಣಿಗಳಿಂದ ಭಯ ಏರ್ಪಡಬಹುದು, ಅಗತ್ಯವಾಗಿ ರಾಜಿಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು
  • ನಿಮಗಿಂತ ಬಲಶಾಲಿಗಳೊಂದಿಗೆ ಸ್ಪರ್ಧೆ, ವಾಗ್ವಾದಗಳು ಬೇಡ
  • ಆಯಸ್ಸು ಮತ್ತು ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಬಾರದು
  • ಪ್ರಕೃತ ನಿಮ್ಮ ಆರೋಗ್ಯ ಚೆನ್ನಾಗಿದೆ ಹಾಗೆ ಮುಂದುವರಿಸಿಕೊಂಡು ಹೋಗಿ
  • ಇಂದು ಮನಸ್ಸು, ಕೋಪ ನಿಮ್ಮ ಹಿಡಿತದಲ್ಲಿರಲಿ
  • ಸಿಟ್ಟಿಗೆ ಯಾವುದೇ ಕಾರಣಕ್ಕೂ ಬುದ್ಧಿ ಕೊಡಬಾರದು
  • ಅನುಚಿತ ಕರ್ಮಾರಂಭೋ ಸ್ವಜನವಿರೋಧೋ ಬಲೀಯಸೀ ಸ್ಪರ್ಧಾ l
  • ಪ್ರಮದಾ ಜನ ವಿಶ್ವಾಸ ಮೃತ್ಯೋರ್ದ್ವಾರಾಣಿ //ಚತ್ವಾರಿ// ll ಎಂಬ ಮಾತಿದೆ

ಧನುಸ್ಸು

publive-image

  • ಪ್ರಯಾಣ ಅಥವಾ ಪ್ರವಾಸದಿಂದ ಪ್ರಯಾಸವಾಗುವ ಸಾಧ್ಯತೆ ಇದೆ
  • ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳಿಂದ ದೂರವಿರಿ
  • ಮನಸ್ಸಿಗೆ ಬಂದಂತೆ ವರ್ತಿಸಿದ್ರೆ ಅನಾಹುತವಾಗಬಹುದು ಎಚ್ಚರ
  • ಮಕ್ಕಳ ಮಾತು ಈ ದಿನ ನಿಮ್ಮ ಶುಭಫಲ ನೀಡಬಹುದು ತಾತ್ಸಾರ ಮಾಡಬೇಡಿ
  • ಕುಟುಂಬದವರ ಸಹಮತದಿಂದ ನೀವು ಪಾರಾಗಬಹುದು
  • ಚಾಮುಂಡೇಶ್ವರಿಯನ್ನು ಕೆಂಪು ಹೂವಿನಿಂದ ಆರ್ಚಿಸಿ

ಮಕರ

publive-image

  • ಕಟ್ಟಡ ಸಾಮಾಗ್ರಿಗಳನ್ನು ಮಾರುವವರಿಗೆ ಹಾಗೇ ಕಟ್ಟಡ ಕಾರ್ಯನಿರ್ವಹಣೆ ಮಾಡುವವರಿಗೆ ಶುಭ-ಲಾಭವಿದೆ
  • ನೀವು ಕೂಡ ಹೊಸ ಆಸ್ತಿ ಖರೀದಿಯ ಚಿಂತನೆ ಮಾಡಬಹುದು
  • ವ್ಯಾಪಾರದಲ್ಲಿ ಅತಿ ಬೇಡಿಕೆ, ಅವಕಾಶಗಳು ನಿಮ್ಮದಾಗುವ ಸಾಧ್ಯತೆಯಿದೆ
  • ಜಾಹೀರಾತುದಾರರಿಗೆ ಹಿನ್ನಡೆ, ನಷ್ಟ ಆಗುವ ಸಾಧ್ಯತೆಯಿದೆ
  • ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮನ್ನು ಗುರುತಿಸಿಕೊಂಡಿರುವುದು ತೊಂದರೆಯಾಗಬಹುದು
  • ಮಹಾದೇವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ

ಕುಂಭ

publive-image

  • ಬಹಳ ಸಂತೋಷವಾಗಿ ಈ ದಿನ ಕಳೆಯಲು ಪ್ಲಾನ್ ಮಾಡಿರುತ್ತೀರಿ
  • ಆದರೆ ನಿಮ್ಮ ಮರೆವಿನಿಂದ ನಿಮ್ಮೆಲ್ಲಾ ಕಾರ್ಯಗಳು ಅಸ್ತವ್ಯಸ್ತವಾಗಬಹುದು
  • ಪ್ರೀತಿ ಪಾತ್ರರ ಜೊತೆಯಲ್ಲಿ ಕಾಲ ಕಳೆಯಲು ಹೋಗಿ ಅವಮಾನವಾಗಬಹುದು ಜಾಗ್ರತೆ
  • ತಾಯಿಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು, ತಾತ್ಸಾರ ಮಾಡಬೇಡಿ
  • ಆದಾಯದ ಮೂಲಗಳು ನಿಮ್ಮಲಿಗೆ ಹುಡುಕಿಕೊಂಡು ಬರಬಹುದು
  • ತ್ರ್ಯಂಬಕರುದ್ರ ಮಂತ್ರ ಜಪ ಮಾಡಿ

ಮೀನ

publive-image

  • ನಿದ್ದೆ ಮತ್ತು ಆಹಾರದಿಂದ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು
  • ಮಾನಸಿಕವಾಗಿ ಮತ್ತು ಕೆಲಸದ ಒತ್ತಡಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
  • ವಿದ್ಯಾರ್ಥಿಗಳಿಗೆ ವಿರಾಮವಿದ್ದರೂ ಮುಂದಿನ ವಿದ್ಯಾಭ್ಯಾಸ ಬಗ್ಗೆ ಹೆಚ್ಚು ಚಿಂತಿಸಿ ಆಯಾಸವಾಗುವ ಸಾಧ್ಯತೆಯಿದೆ
  • ಕಣ್ಣು ಮತ್ತು ಕಿವಿಗೆ ಹಾನಿಯಾಗುವ ಸೂಚನೆಗಳಿವೆ ಎಚ್ಚರಿಕೆ
  • ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಾಯಂಕಾಲ ಸಂಬಂಧಿಕರ ಮನೆಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ
  • ಇಷ್ಟ ದೇವತೆಯನ್ನು ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment