Advertisment

‘ನಾನು ತಲೆ ಎತ್ಕೊಂಡು ಓಡಾಡ್ತೀನಿ’- ಮಾತು ಮಾತಿಗೂ ದರ್ಶನ್​ & ಫ್ಯಾನ್ಸ್​ಗೆ ಟಾಂಗ್ ಕೊಟ್ರಾ ಕಿಚ್ಚ ಸುದೀಪ್‌?

author-image
admin
Updated On
ಎಲ್ರೂ ನೋವಲ್ಲಿ ಇರ್ತಾರೆ.. ಉರಿಯೋ ಬೆಂಕಿಗೆ ತುಪ್ಪ, ಗಾಯಕ್ಕೆ ಉಪ್ಪು ಹಾಕಬಾರ್ದು- ಕಿಚ್ಚನ ಖಡಕ್ ಮಾತು
Advertisment
  • ಕಿಚ್ಚನ ಅಭಿಮಾನಿಗಳಿಗೆ ಎಂದಿಗೂ ಕಳಂಕ ತರೋ ಕೆಲಸ ನಾನು ಮಾಡಲ್ಲ
  • ವ್ಯಕ್ತಿತ್ವದಿಂದ ನಾವು ದೊಡ್ಡೋರು ಆಗೋಕೆ ಸಾಧ್ಯ ಸಿನಿಮಾದಿಂದ ಅಲ್ಲ!
  • ನನ್ನ ಫ್ಯಾನ್ಸ್ ಒಳ್ಳೆಯವರು, ಅದಕ್ಕೆ ನಾನು ಒಳ್ಳೆಯವನಾಗಿರೋದು: ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಅವರು ಇಂದು ತಮ್ಮ 51ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಜಯನಗರದ ಎಂಇಎಸ್​ ಗ್ರೌಂಡ್​ನಲ್ಲಿ ಕೇಕ್ ಕಟ್ ಮಾಡಿದ ಕಿಚ್ಚ ಅಭಿಮಾನಿಗಳ ಈ ಪ್ರೀತಿ, ಆಚರಣೆಯೇ ಅತಿದೊಡ್ಡ ಉಡುಗೊರೆ ಎಂದರು.

Advertisment

ಇದನ್ನೂ ಓದಿ: ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ನಾನು ಯಾವತ್ತೂ ಮಾಡಲ್ಲ-ಕಿಚ್ಚ ಸುದೀಪ್​ 

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಕಿಚ್ಚ ಸುದೀಪ್ ಅವರು ಒಳ್ಳೆ, ಒಳ್ಳೆಯ ಮಾತುಗಳನ್ನಾಡಿದರು. ಬಹಳ ನೇರವಾದ ಮಾತುಗಳನ್ನಾಡಿದ ಸುದೀಪ್ ಅವರು ನನ್ನ ಫ್ಯಾನ್ಸ್ ಒಳ್ಳೆಯವರು. ಅದಕ್ಕೆ ನಾನು ಒಳ್ಳೆಯವನಾಗಿರೋದು. ನನ್ನ ಅಭಿಮಾನಿಗಳಿಂದ ನಾನು ಎಂದು ಹೇಳಿದರು.

publive-image

ಇನ್ನು, ತಾಳಿದವನು ಬಾಳಿಯಾನು. ಲೈಫ್‌ ಅಲ್ಲಿ ಯಾರೂ ಒಳ್ಳೆತನಕ್ಕೆ, ಒಳ್ಳೆತನ ತೋರಿಸೋಕೆ ಕಾಂಪ್ರಮೈಸ್ ಆಗಬೇಡಿ. ನೀವು ತೋರಿಸೋ ಪ್ರೀತಿಯಿಂದಲೇ ನಾನು ಇವತ್ತು ಇಲ್ಲಿ ಇದ್ದೀನಿ. ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾನು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡ್ತೀನಿ ಅಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ನಾನು ಮಾಡಲ್ಲ ಎಂದು ಸುದೀಪ್ ಭರವಸೆ ಕೊಟ್ಟಿದ್ದಾರೆ.

Advertisment

ಇದನ್ನೂ ಓದಿ: ಸೂರ್ಯ, ಚಂದ್ರ ಹಗಲು ರಾತ್ರಿ ಇದ್ರೆನೇ ಚಂದ; ದರ್ಶನ್ ಕುರಿತ ವಿಚಾರಕ್ಕೆ ಸುದೀಪ್ ಖಡಕ್​ ಮಾತು 

ಬರ್ತ್‌ ಡೇ ದಿನ ಒಳ್ಳೆಯ ಮಾತಗಳನ್ನಾಡಿದ ಅಭಿನಯ ಚಕ್ರವರ್ತಿ, ವ್ಯಕ್ತಿತ್ವದಿಂದ ನಾವು ದೊಡ್ಡೋರು ಆಗೋಕೆ ಸಾಧ್ಯ. ಬರೀ ಸಿನಿಮಾದಿಂದ ಹೀರೋ ಆಗೋಕೆ ಆಗಲ್ಲ. ಅಭಿಮಾನಿಗಳಿಂದ ಬರೋ ಕೂಗು ನನ್ನನ್ನು ತಗ್ಗಿಸಿ, ಬಗ್ಗಿಸಿ ಇರುವಂತೆ ಮಾಡುತ್ತೆ.

ನಾವು ಬೆಳೆಯೋದು ದೊಡ್ಡದಲ್ಲ. ನಾವು ಯಾವ ವಾತಾವರಣದಲ್ಲಿ ಬೆಳಿತೀವಿ ಅನ್ನೋದು ಮುಖ್ಯ. ನನ್ನ ಅಭಿಮಾನಿಗಳಲ್ಲಿ ಒಳ್ಳೆತನ ಇದೆ. ಅದಕ್ಕೆ ನಾನು ಇಷ್ಟು ಒಳ್ಳೆಯವನು ಎಂದು ಅಭಿಮಾನಿಗಳ ಬಗ್ಗೆ ಕಿಚ್ಚ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ.

Advertisment

publive-image

ದರ್ಶನ್ ಬಗ್ಗೆ ಸುದೀಪ್ ಹೇಳಿದ್ದೇನು?
ತಮ್ಮ ಹುಟ್ಟುಹಬ್ಬಕ್ಕೂ ಮುನ್ನವೇ ಕಿಚ್ಚ ಸುದೀಪ್ ಅವರು ದಿಢೀರ್ ಸುದ್ದಿಗೋಷ್ಟಿ ನಡೆಸಿ ಅಭಿಮಾನಿಗಳಿಗೆ ಸಂದೇಶ ಕೊಟ್ಟಿದ್ದರು. ಈ ವೇಳೆ ದರ್ಶನ್ ಅವರಿಂದ ನಾನು ದೂರವಾಗಿದ್ದೇನೆ. ಸೂರ್ಯ, ಚಂದ್ರ ಒಟ್ಟಿಗೆ ಬರಲು ಸಾಧ್ಯವಿಲ್ಲ ಅನ್ನೋ ಮಾತನಾಡಿದ್ದರು. ಇದೀಗ ಬರ್ತ್ ಡೇ ದಿನ ತನ್ನ ಅಭಿಮಾನಿಗಳ ಒಳ್ಳೆತನದ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರ ಹುಟ್ಟುಹಬ್ಬದಲ್ಲಿ ಅವರ ಅಭಿಮಾನಿಗಳು ಕಿಚ್ಚ - ದಚ್ಚು ಒಟ್ಟಿಗಿರೋ ಫೋಟೋ ತಂದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment