/newsfirstlive-kannada/media/post_attachments/wp-content/uploads/2025/06/Israil-iran-leader-Ali-Khamenei.jpg)
ಭಾರತ, ಪಾಕಿಸ್ತಾನದಂತೆ ಇಸ್ರೇಲ್, ಇರಾನ್ ಮಧ್ಯೆ ಗಡಿ ಹಂಚಿಕೆ ಅನ್ನೋದು ಇಲ್ಲ. ಆದರೂ ಎರಡು ರಾಷ್ಟ್ರಗಳು ನಾನಾ ನೀನಾ ಅನ್ನೋ ರೀತಿಯಲ್ಲಿ ಯುದ್ಧ ನಡೆಸುತ್ತಾ ಇವೆ. ಅದಕ್ಕೆ ಬಲವಾದ ಕಾರಣ ಇದ್ದೇ ಇರುತ್ತೆ. ಹಾಗಿದ್ರೆ, ನಿಜವಾದ ಯುದ್ಧ ರಹಸ್ಯ ಏನು? ಪದೇ ಪದೇ ಇರಾನ್‌ನಲ್ಲಿರೋ ಅಣ್ವಸ್ತ್ರ ಸಾಮಾಗ್ರಿಗಳ ಮೇಲೆ, ವಿಜ್ಞಾನಿಗಳ ಮೇಲೆ ದಾಳಿ ಮಾಡೋದು ಯಾಕಾಗಿ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ ಯಾವುದೇ ಗಡಿ ಇಲ್ಲ. ನದಿ ನೀರಿನ ಹಂಚಿಕೆಯೂ ಇಲ್ಲ. ಹೀಗಿದ್ರೂ ಈ ಎರಡು ರಾಷ್ಟ್ರಗಳು ಹಾವು ಮುಂಗುಸಿ ರೀತಿಯಲ್ಲಿ ಕಾದಾಟ ಮಾಡುತ್ತಾನೆ ಇರುತ್ತವೆ. ಇದಕ್ಕೆ ಕಾರಣ ಖಂಡಿತವಾಗಿಯೂ ಇದೆ. ಇಸ್ರೇಲ್‌ಗೆ ಇರೋ ಆತಂಕವೂ ಅದೇ. ಭವಿಷ್ಯದಲ್ಲಿ ತನಗೆ ಇರಾನ್ ಇಂದಲೇ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಗೊತ್ತಿದೆ.
ಇಸ್ರೇಲ್ ಮೇಲೆ ಅಣು ದಾಳಿಗೆ ಪ್ಲ್ಯಾನ್ ಮಾಡಿತ್ತಾ ಇರಾನ್?
ಆ ಸುಳಿವು ಪಡೆದು ಭೀಕರ ದಾಳಿ ನಡೆಸಿತಾ ಇಸ್ರೇಲ್?
ಇರಾನ್ ಏನ್ ಮಾಡುತ್ತೆ ಅಂದ್ರೆ, ಇಸ್ರೇಲ್ ವಿರುದ್ಧ ಇರೋ ದೇಶಗಳಿಗೆ, ಉಗ್ರರಿಗೆ ಶಸ್ತ್ರಾಸ್ತ್ರಗಳನ್ನ ಕೊಡ್ತಾನೇ ಇರುತ್ತೆ. ಇದರಿಂದ ಇಸ್ರೇಲ್ ಸುತ್ತಾಮತ್ತ ಇರೋ ವೈರಿಗಳಿಗೆ ಹೋರಾಟದ ಶಕ್ತಿ ಬಂದಿರುತ್ತೆ. ಇಸ್ರೇಲ್ ಅವ್ರನ್ನ ಅದೆಷ್ಟೇ ನಾಶ ಮಾಡಿದ್ರೂ ಅವರು ಮತ್ತೆ ಮತ್ತೆ ಪುಟಿದೇಳ್ತಾನೇ ಇರುತ್ತಾರೆ. ಇದೊಂದು ರೀತಿಯಲ್ಲಿ ಇಸ್ರೇಲ್‌ಗೆ ತಲೆನೋವು ತಂದಿತ್ತು. ಹೀಗಾಗಿಯೇ ಇಸ್ರೇಲ್ ಮತ್ತು ಇರಾನ್ ನಡುವೆ ವೈರತ್ವ ಹುಟ್ಟಿಕೊಂಡಿತ್ತು.
ಇರಾನ್‌ಗೆ ತಾನು ಕೂಡ ಅಣ್ವಸ್ತ್ರ ರಾಷ್ಟ್ರ ಆಗಬೇಕು ಅನ್ನೋ ಹಂಬಲ ಇದೆ. ತಾನು ನ್ಯೂಕ್ಲಿಯರ್ ರಾಷ್ಟ್ರ ಆದ್ರೆ ವೈರಿಗಳು ಹೆದರುತ್ತಾರೆ. ತನ್ನ ತಂಟೆಗೆ ಯಾರೂ ಬರೋದಿಲ್ಲ ಅನ್ನೋದು ಗೊತ್ತು. ಆದ್ರೆ, ಇರಾನ್ ಏನಾದ್ರೂ ಅಣ್ವಸ್ತ್ರ ಹೊಂದಿತು ಅಂತಾದ್ರೆ ಅದು ತನಗೆ ಅಪಾಯ ಅನ್ನೋದು ಇಸ್ರೇಲ್‌ಗೆ ಇರೋ ಭಯ.
ಇರಾನ್‌ಗೆ ಟಾರ್ಗೆಟ್ ಆಗಿರೋದೇ ಇಸ್ರೇಲ್. ಹೀಗಾಗಿ ಅದು ಅಣ್ವಸ್ತ್ರಳನ್ನ ಉತ್ಪಾದಿಸೋದಕ್ಕೆ ಇಂದಲ್ಲ ನಿನ್ನೆಯಲ್ಲ ದಶಕಗಳಿಂದ ಯತ್ನಿಸುತ್ತಲೇ ಇದೆ. ಆದರೆ ಅದು ಸಾಧ್ಯವಾಗಿಲ್ಲ. ಕಾರಣ ಏನು ಅಂದ್ರೆ, ಇಸ್ರೇಲ್ ಅದಕ್ಕೆ ಬ್ರೇಕ್ ಹಾಕುತಲೇ ಬಂದಿದೆ.
ಅದು ಹೇಗೆ ಅಂದ್ರೆ, ಇರಾನ್ ಅಣ್ವಸ್ತ್ರ ಸಾಮಗ್ರಿಗಳ ಸಂಗ್ರಹವನ್ನು ಎಲ್ಲಿ ಮಾಡ್ತಾ ಇದೆ? ಅದಕ್ಕೆ ನಿಯೋಜನೆ ಆಗಿರೋ ವಿಜ್ಞಾನಿಗಳು ಯಾರು? ಅವರಿಗೆ ಕಾವಲಾಗಿ ನಿಂತಿರೋ ಕಮಾಂಡರ್‌ಗಳು ಯಾರು? ಅನ್ನೋದನ್ನ ಇಸ್ರೇಲ್‌ನ ಗುಪ್ತಚರ ಮೊಸಾದ್ ಮಾಹಿತಿ ಕಲೆ ಹಾಕುತ್ತೆ. ಆಮೇಲೆ ಇಸ್ರೇಲ್ ಸೇನೆಯಿಂದ ದಾಳಿ ನಡೆಸುತ್ತೆ.
ಮೂರ್ನಾಲ್ಕು ವರ್ಷದ ಹಿಂದೆ ಇರಾನ್‌ನ ಅಣು ವಿಜ್ಞಾನಿಯನ್ನ ರೋಬೋಟ್‌ಗಳನ್ನ ಬಳಸಿಕೊಂಡು ಇಸ್ರೇಲ್ ಹೊಡೆದು ಹಾಕಿತ್ತು. ಅದು ಇಡೀ ವಿಶ್ವನನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಇಸ್ರೇಲ್ ಮತ್ತೊಮ್ಮೆ ಇರಾನ್‌ನ ಅಣ್ವಸ್ತ್ರ ಸಾಮಗ್ರಿಗಳ ಮೇಲೆ, ವಿಜ್ಞಾನಿಗಳ ಮೇಲೆ ದಾಳಿ ಮಾಡಿದೆ. ನ್ಯೂಕ್ಲಿಯರ್ ಸಾಮಾಗ್ರಿಗಳನ್ನ ನಾಶ ಮಾಡುವಲ್ಲಿ ಯಶಸ್ವಿಯೂ ಆಗಿದೆ.
ಮತ್ತೊಂದು ವಿಚಾರ ಏನಂದ್ರೆ ಅಣ್ವಸ್ತ್ರ ಸಾಮಗ್ರಿಗಳ ಮೇಲೆ ದಾಳಿ ಮಾಡೋದ್ರಿಂದ ಅದು ನಾಶವಾಗುತ್ತೆ. ಹಾಗೇ ವಿಜ್ಞಾನಿಗಳ ಮೇಲೆ ದಾಳಿ ಮಾಡೋದ್ರಿಂದ ಅಣು ಬಾಂಬ್ ತಯಾರಿಸೋದಕ್ಕೆ ಸಾಧ್ಯವೇ ಇಲ್ಲ. ಇದು ಇರಾನ್‌ಗೆ ಮಂಡೆ ಬಿಸಿ ಮಾಡಿ ಬಿಟ್ಟಿದೆ.
ಇರಾನ್‌ನಲ್ಲಿ ಇದ್ದುಕೊಂಡೇ ದಾಳಿ ಮಾಡ್ತಾ ಇಸ್ರೇಲ್?
ಮೋಸಾದ್‌ನ ರಹಸ್ಯ ಕಾರ್ಯಕ್ಕೆ ಇರಾನ್ ಮತ್ತೆ ಬೆಚ್ಚಿ ಬಿತ್ತು
ತನ್ನ ಮೇಲೆ ಆಗೋ ಸಂಭವನೀಯ ಅಣು ಬಾಂಬ್ ದಾಳಿ ತಪ್ಪಿಸಬೇಕು ಅನ್ನೋ ಹಿನ್ನೆಲೆಯಲ್ಲಿ ಇಸ್ರೇಲ್ ಯಾವುದೇ ಕಾರಣಕ್ಕೂ ಇರಾನ್‌ಗೆ ಅಣ್ವಸ್ತ್ರ ರಾಷ್ಟ್ರ ಆಗೋದಕ್ಕೆ ಕೊಡುತ್ತಾ ಇಲ್ಲ. ಇರಾನ್ ಯಾವಾಗ ಯಾವಾಗ ಅಣ್ವಸ್ತ್ರ ಸಾಮಗ್ರಿಗಳನ್ನ ತಂದು ಇಟ್ಟುಕೊಂಡು ವಿಜ್ಞಾನಿಗಳನ್ನ ನೇಮಕ ಮಾಡುತ್ತೋ? ಅಂತಾ ಎಲ್ಲಾ ಸಂದರ್ಭದಲ್ಲೂ ಇಸ್ರೇಲ್ ದಾಳಿ ನಡೆಸಿ ಸರ್ವನಾಶ ಮಾಡುತ್ತೆ. ಆದ್ರೆ, ಇಲ್ಲಿಯವರೆಗಿನ ಇಸ್ರೇಲ್ ದಾಳಿಗೂ? ಇದೀಗ ಇಸ್ರೇಲ್ ನಡೆಸಿರೋ? ದಾಳಿಗೂ ಭಿನ್ನತೆ ಇದೆ. ಯಾಕಂದ್ರೆ, ಇಲ್ಲಿಯವರೆಗೂ ಇಸ್ರೇಲ್ ಹೊರಗಿಂದ ಅಂದ್ರೆ ತನ್ನದೇ ದೇಶದಲ್ಲಿ ಇದುಕೊಂಡು ದಾಳಿ ಮಾಡ್ತಾ ಇತ್ತು. ಆದ್ರೆ, ಈ ಬಾರಿ ಇರಾನ್ ನೆಲದಲ್ಲಿಯೇ ಯುದ್ಧಾಸ್ತ್ರಗಳನ್ನ ಇಟ್ಕೊಂಡ್ ಟಾರ್ಗೆಟ್ ಸ್ಥಳಗಳನ್ನ ಉಡೀಸ್ ಮಾಡಿದೆ ಅನ್ನೋದು ಗೊತ್ತಾಗ್ತಾ ಇದೆ.
ಇದನ್ನೂ ಓದಿ: ಇನ್ಮುಂದೆ Air India ವಿಮಾನದಲ್ಲಿ ಪ್ರಯಾಣ ಮಾಡೋದೇ ಇಲ್ಲ.. ಸ್ಟಾರ್ ಕ್ರಿಕೆಟರ್ ಹೇಳಿದ್ದು ಏನು?
ಇಸ್ರೇಲ್‌ನ ಗುಪ್ತಚರ ಮೊಸಾದ್ ಜಗತ್ತಿನಲ್ಲಿಯೇ ಸ್ಟ್ರಾಂಗ್ ಆಗಿರೋ ಸ್ಪೈ. ತನ್ನ ಶತ್ರು ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ರೂ ಅವನ್ನ ಹೊಡೆದು ಹಾಕಿ ಬಿಡುತ್ತೆ. ಅಂತಹದರಲ್ಲಿ ಇರಾನ್‌ನಲ್ಲಿರೋ ಮಾಹಿತಿ ಕಲೆ ಹಾಕದೇ ಇರುತ್ತಾ? ಖಂಡಿತವಾಗಿಯೂ ಇಂಚಿಂಚೂ ಮಾಹಿತಿಯನ್ನೂ ಕಲೆ ಹಾಕ್ತಾ ಇದೆ. ವಿಶೇಷ ಅಂದ್ರೆ, ಅದೇ ಮೋಸಾದ್ ಈ ಬಾರಿ ಇರಾನ್‌ನಲ್ಲಿ ಇದ್ದುಕೊಂಡೇ ಟಾರ್ಗೆಟ್ ಸ್ಥಳಗಳ ಮೇಲೆ ದಾಳಿ ಮಾಡಿದೆ ಅಂತಾ ಹೇಳಲಾಗ್ತಿದೆ.
ಅದು ಹೇಗೆ ಅಂದ್ರೆ, ಇತ್ತೀಚಿಗೆ ರಷ್ಯಾದಲ್ಲಿ ಭೀಕರ ಡ್ರೋನ್ ದಾಳಿಯಾಗಿತ್ತು. ಅದು ಹೇಗೆ ಅಂದ್ರೆ, ರಷ್ಯಾದಲ್ಲಿಯೇ ಡ್ರೋನ್‌ಗಳನ್ನ ತಯಾರಿಸಿ ಅಲ್ಲಿಯೇ ಸ್ಫೋಟ ಮಾಡಿತ್ತು ಉಕ್ರೇನ್. ಹಾಗೇ ಇಸ್ರೇಲ್ ಏನ್ ಮಾಡಿದೆ ಅಂದ್ರೆ ಯುದ್ಧಾಸ್ತ್ರಗಳನ್ನ ರಹಸ್ಯವಾಗಿ ಇರಾನ್‌ಗೆ ಕಳುಹಿಸ್ಕೊಂಡಿತ್ತು. ರಾತ್ರೋರಾತ್ರಿ ಅಲ್ಲಿಂದಲೇ ದಾಳಿ ಮಾಡಿ ಎಲ್ಲರೂ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಮೊಸಾದ್ ಕಾರ್ಯಾಚರಣೆಗೆ ಇರಾನ್ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ.
3ನೇ ಮಹಾಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಯ್ತಾ?
ಇಸ್ರೇಲ್ V/S ಇರಾನ್... ಸೇನಾಬಲ ಹೇಗಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಭೀತಿ ಹುಟ್ಟಿಸಿತ್ತು. ಎಲ್ಲಿ ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡುತ್ತೋ? ಅಣ್ವಸ್ತ್ರಗಳ ದಾಳಿಗೆ ಕಾರಣವಾಗುತ್ತೋ? ಅನ್ನೋ ಆತಂಕ ಖಂಡಿತವಾಗಿಯೂ ಹುಟ್ಟಿಸಿತ್ತು. ಆದ್ರೆ, ತಕ್ಷಣವೇ ತಣ್ಣಗಾಯ್ತು. ಇನ್ನು ರಷ್ಯಾದ ಸೇನೆ ನೆಲೆಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡ್ಸಿದಾಗ ಪುಟಿನ್ ಅಣ್ವಸ್ತ್ರ ದಾಳಿ ನಡೆಸೋದು ಗ್ಯಾರಂಟಿ ಅನ್ನೋ ವಿಶ್ಲೇಣೆಗಳು ಕೇಳಿಬಂದವು. ಆದ್ರೆ, ಅದೂ ಅಲ್ಲಿಗೆ ತಣ್ಣಗಾಯ್ತು. ಆದ್ರೆ, ಇದೀಗ ಇಸ್ರೇಲ್ ಮತ್ತು ಇರಾನ್ ನಡುವೆ ನಡೀತಾ ಇರೋ ವಾರ್ ಖಂಡಿತವಾಗಿಯೂ ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡುತ್ತೆ ಅನ್ನೋ ವಿಶ್ಲೇಷಣೆಗಳು ಕೇಳಿ ಬರ್ತಾ ಇವೆ.
ಇದೊಂದು ಸಮರ ಜಗತ್ತನ್ನೇ ಎರಡು ವಿಭಾಗ ಮಾಡೋ ಸಾಧ್ಯತೆ ಇದೆ. ಅದು ಹೇಗೆ ಅಂದ್ರೆ, ಮುಸ್ಲಿಂ ರಾಷ್ಟ್ರಗಳೇ ಒಂದು ಗುಂಪಾದ್ರೆ, ಇನ್ನು ಕ್ರಿಶ್ಚಿಯನ್ ಮತ್ತು ಯಹೂದಿ ರಾಷ್ಟ್ರಗಳೇ ಇನ್ನೊಂದು ಗುಂಪಾಗುವ ಸಾಧ್ಯತೆ ಇದೆ.
ಇಸ್ರೇಲ್‌ಗೆ ಇರೋ ಬಹುದೊಡ್ಡ ಶಕ್ತಿ ಅಂದ್ರೆ ಅದಕ್ಕೆ ಅಮೆರಿಕಾ ಮತ್ತು ಇತರೆ ಕ್ರಿಶ್ಚಿಯನ್ ರಾಷ್ಟ್ರಗಳು. ಅವು ದೊಡ್ಡ ಮಟ್ಟದಲ್ಲಿ ಬೆಂಬಲವಾಗಿ ನಿಂತುಕೊಂಡಿವೆ. ಹಾಗೇ ಇರಾನ್‌ಗೆ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಸದ್ಯಕ್ಕೆ ಬೆಂಬಲವಾಗಿ ನಿಂತಿಲ್ಲ ಅನ್ನೋದ್ ಸತ್ಯ. ಆದ್ರೆ, ಬಹುತೇಕ ಎಲ್ಲಾ ಮುಸ್ಲಿಂ ರಾಷ್ಟ್ರಗಳಿಗೂ ಇಸ್ರೇಲ್ ಮೇಲೆ ಕೋಪವಿದೆ. ಅದಕ್ಕೆ ಕಾರಣ, ತನ್ನ ಅಕ್ಕ ಪಕ್ಕ ಇರೋ ಮುಸ್ಲಿಂ ರಾಷ್ಟ್ರಗಳ ಮೇಲೆ ಇಸ್ರೇಲ್ ದಾಳಿ ಮಾಡ್ತಾ ಇರುತ್ತೆ ಅನ್ನೋದಕ್ಕೆ. ಹೀಗಾಗಿ ಏನಾದ್ರೂ ಭೀಕರ ಯುದ್ಧ ಶುರುವಾಯ್ತು ಅಂತಾದ್ರೆ ಮುಸ್ಲಿಂ ರಾಷ್ಟ್ರಗಳು ತಾವೆಲ್ಲ ಒಂದೇ ಅಂತಾ ಸಾರಿದ್ರೂ ಅಚ್ಚರಿಯಿಲ್ಲ.
ಇರಾನ್‌ಗೆ ಯುದ್ಧ ಮಾಡೋದ್ ಖಂಡಿತವಾಗಿಯೂ ಸುಲಭವಿಲ್ಲ. ಆದ್ರೆ, ಯುದ್ಧ ಮಾಡೋದೇ ಇಲ್ಲ ಅಂತಾ ಹೇಳೋದಕ್ಕೆ ಆಗೋದಿಲ್ಲ. ಹಾಗೇನಾದ್ರೂ ಪೂರ್ಣ ಪ್ರಮಾಣದ ಯುದ್ಧ ಆಯ್ತು ಅಂತಾದ್ರೆ ಸೇನಾಬಾಲವವೂ ಲೆಕ್ಕಕ್ಕೆ ಬರುತ್ತೆ. ಸದ್ಯಕ್ಕೆ ಇರಾನ್‌ನಲ್ಲಿ 6,10,000 ಸೈನಿಕರು ಇದ್ರೆ, ಇಸ್ರೇಲ್‌ನಲ್ಲಿ 1,70,000 ಸೈನಿಕರಿದ್ದಾರೆ. ಇರಾನ್ ಬಳಿ 188 ಫೈಟರ್ ಜೆಟ್ ಇದ್ರೆ, ಇಸ್ರೇಲ್ ಬಳಿ 240 ಫೈಟರ್ ಜೆಟ್ ಇದೆ. ಆದ್ರೆ, ಇಲ್ಲಿ ಆಕಾಶ ಮಾರ್ಗವೇ ಮುಖ್ಯವಾಗಿರೋ ಹಿನ್ನೆಲೆಯಲ್ಲಿ ಇಸ್ರೇಲ್‌ನ ಬಲವೇ ಜಾಸ್ತಿ ಕಾಣಿಸುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ