IPL ​2025: ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್​ ಪಂದ್ಯಗಳು ಯಾವಾಗ? ಎಲ್ಲಿ? ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

author-image
Gopal Kulkarni
Updated On
IPL ​2025: ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್​ ಪಂದ್ಯಗಳು ಯಾವಾಗ? ಎಲ್ಲಿ? ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
Advertisment
  • ಮೊದಲ ಪಂದ್ಯದಲ್ಲಿಯೇ ಕೊಲ್ಕೊತ್ತಾದೊಂದಿಗೆ ಬೆಂಗಳೂರಿನ ಕಾಳಗ
  • ಒಟ್ಟು 14 ಪಂದ್ಯಗಳಲ್ಲಿ ಒಂದು ತಂಡದ ಜೊತೆ ಎರಡು ಪಂದ್ಯಗಳ ಆಟ
  • ಯಾರ ಜೊತೆ, ಎಲ್ಲಿ, ಎಷ್ಟು ಗಂಟೆಗೆ ಪಂದ್ಯಗಳು ಶುರುವಾಗಲಿವೆ ಗೊತ್ತಾ?

ಐಪಿಎಲ್​ 2025ರ ವೇಳಾಪಟ್ಟಿಯನ್ನು ಈಗಾಗಲೇ ಬಿಸಿಸಿಐ ಬಿಡುಗಡೆ ಮಾಡಿದೆ ಮೊದಲ ಪಂದ್ಯವೇ ಆರ್​ಸಿಪಿ ಕೆಕೆಆರ್​ನೊಂದಿಗೆ ಸೆಣೆಸಲಿದೆ ಒಟ್ಟು ಪ್ರತಿಯೊಂದು ತಂಡದೊಂದಿಗೂ ಎರಡೆರಡು ಮ್ಯಾಚ್ ಆಡಲಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್​ ಯಾವಾಗ ಯಾರೊಂದಿಗೆ ಮತ್ತು ಎಲ್ಲಿ ಕಾದಾಟಕ್ಕೆ ಇಳಿಯಲಿದೆ ಎನ್ನುವುದನ್ನು ಡಿಟೇಲ್​ ಆಗಿ ನೋಡುವುದಾದ್ರೆ

ಈಗಾಗಲೇ ಹೇಳಿದಂತೆ ಮೊದಲ ಪಂದ್ಯವನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್​ ಕೊಲ್ಕತ್ತಾ ನೈಟ್​ ರೈಡರ್ಸ್​ ಜೊತೆ ಮಾರ್ಚ್​ 22 ರಂದು ಕೊಲ್ಕತ್ತಾದ ಈಡನ್ ಗಾರ್ಡನ್​ ಮೈದಾನದಲ್ಲಿ ಆಡಲಿದೆ. 2ನೇ ಪಂದ್ಯವನ್ನು ಮಾರ್ಚ್​ 28 ರಂದು ಬದ್ಧ ಎದುರಾಳಿ ಚೆನ್ನೈ ಸೂಪರ್​ಕಿಂಗ್ಸ್​​ ಜೊತೆ ಚೆನ್ನೈನಲ್ಲಿ ಆಡಲಿದೆ. ಇನ್ನು ಮೂರನೇ ಪಂದ್ಯವನ್ನು ಗುಜರಾತ್​ ಟೈಟಾನ್ಸ್​ ಜೊತೆಗೆ ಬೆಂಗಳೂರು ರಾಯಲ್ ಚಾಲೆಂರ್ಸ್​ ಏಪ್ರಿಲ್ 2 ರಂದು ಬೆಂಗಳೂರಿನಲ್ಲಿಯೇ ಆಡಲಿದೆ.

ಇದನ್ನೂ ಓದಿ:IPL 2025 ವೇಳಾಪಟ್ಟಿ ಬಿಡುಗಡೆ.. RCB ವಿರುದ್ಧವೇ ಮೊದಲ ಪಂದ್ಯ; ಯಾರ ಮೇಲೆ? ಎಲ್ಲಿ? ಯಾವಾಗ?

ಏಪ್ರಿಲ್​ 7 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಾಳಗಕ್ಕೆ ಇಳಿಯಲಿರುವ ಬೆಂಗಳೂರು ಬಾಯ್ಸ್​, ಮುಂಬೈನ ವಾಂಖಡೇ ಕ್ರೀಡಾಂಗಣದಲ್ಲಿಯೇ ಈ ಹೊಡಿಬಡಿ ಆಟ ನಡೆಯಲಿದೆ. ಬಳಿಕ ಏಪ್ರಿಲ್ 10 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್​ ಜೊತೆ ಕಾದಾಡಲಿ.

publive-image

ಏಪ್ರಿಲ್​ 13 ರಂದು ರಾಜಸ್ಥಾನ್ ರಾಯಲ್ಸ್ ಜೊತೆಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್​ ಜೈಪುರದಲ್ಲಿ ಸೆಣೆಸಾಟ ನಡೆಸಲಿದೆ. ಇನ್ನು ಏಪ್ರಿಲ್ 18 ರಂದು ಬೆಂಗಳೂರಿನಲ್ಲಿ ಪಂಜಾಬ್​ ಜೊತೆಗೆ ಪಂದ್ಯವಿದ್ದು. ಏಪ್ರಿಲ್​ 20ಕ್ಕೆ ಅದೇ ಪಂಜಾಬ್​ ಕಿಂಗ್ಸ್​ನೊಂದಿಗೆ ಚಂಡಿಗಢನಲ್ಲಿ ಪಂದ್ಯ ನಡೆಯಲಿದೆ. ಏಪ್ರಿಲ್ 24 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಬೆಂಗಳೂರಿನ ನಡುವೆ ರಣಭೀಕರ ಕಾಳಗ ನಡೆಯಲಿದೆ. ಏಪ್ರಿಲ್ 27 ರಂದು ದೆಹಲಿ ಕ್ಯಾಪಿಟಲ್ಸ್ ಜೊತೆ ಅವರದೇ ಅಂಗಳದಲ್ಲಿ ಬೆಂಗಳೂರು ಬಾಯ್ಸ್ ರಣರಂಗಕ್ಕೆ ಇಳಿಯಲಿದ್ದಾರೆ.

ಇದನ್ನೂ ಓದಿ:ಎಬಿಡಿ ತಂಡಕ್ಕೆ ಕರೆತರಲು RCB ಸರ್ವ ಪ್ರಯತ್ನ.. ಈ ಜೂನಿಯರ್​ಗೆ ಇದೆ ಆ ಸ್ಕಿಲ್​ಗಳು!

ಇನ್ನು ಮೇ 3 ರಂದು ಬೆಂಗಳೂರಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಜೊತೆ ಎರಡನೇ ಕಾಳಗ ನಡೆಯಲಿದೆ. ಮೇ 9 ರಂದು ಲಖನೌ ಜೊತೆ ಅವರದೇ ಅಂಗಳದಲ್ಲಿ ಬೆಂಗಳೂರು ಬಾಯ್ಸ್ ರಣಕಹಳೆ ಊದಲಿದ್ದಾರೆ. ಮೇ13 ರಂದು ಬೆಂಗಳೂರಿನಲ್ಲಿಯೇ ಸನ್​ರೈಸರ್ಸ್ ಹೈದ್ರಾಬಾದ್​​ ಜೊತೆ ಬೆಂಗಳೂರಿನಲ್ಲಿ ಸೆಣೆಸಾಟ ನಡೆಯಲಿದೆ. ಇನ್ನು ಮೇ 17 ರಂದು ಮತ್ತೆ ಕೊಲ್ಕತ್ತಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಖಾಡಕ್ಕೆ ಇಳಿಯಲಿದ್ದಾರೆ. ಏಪ್ರಿಲ್ 13 ಮತ್ತು ಏಪ್ರಿಲ್ 20 ರಂದು ನಡೆಯಲಿರುವ ಎರಡು ಪಂದ್ಯಗಳು ಮಧ್ಯಾಹ್ನ 3.30ಕ್ಕೆ ಶುರುವಾಗಲಿದ್ದು. ಉಳಿದ ಎಲ್ಲಾ ಪಂದ್ಯಗಳು ಸಂಜೆ 7.30ಕ್ಕೆ ನಡೆಯಲಿವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment