ಹೊಸ Splendor+XTEC ಬೈಕ್​ಗೆ ಭಾರೀ ಡಿಮ್ಯಾಂಡ್​​; ​1 ಲೀಟರ್​ಗೆ ಬರೋಬ್ಬರಿ 73 ಕಿಮೀ ಮೈಲೇಜ್

author-image
Ganesh Nachikethu
Updated On
ಹೊಸ Splendor+XTEC ಬೈಕ್​ಗೆ ಭಾರೀ ಡಿಮ್ಯಾಂಡ್​​; ​1 ಲೀಟರ್​ಗೆ ಬರೋಬ್ಬರಿ 73 ಕಿಮೀ ಮೈಲೇಜ್
Advertisment
  • ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್
  • ಗ್ರಾಹಕರಿಗಾಗಿ Splendor+XTEC ಬೈಕನ್ನು ಪರಿಚಯಿಸಿರೋ ಹೀರೋ ಕಂಪನಿ
  • ಬಜೆಟ್​ ಬೆಲೆ, ಅಧಿಕ ಮೈಲೇಜ್​, ಬೆಂಗಳೂರು ನಗರಕ್ಕೆ ಹೇಳಿ ಮಾಡಿಸಿದ ಬೈಕ್!

ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್. ಹೀರೋ ಮೋಟೋಕಾರ್ಪ್ ಕಳೆದ ವರ್ಷ Splendor+XTEC 2.0 ಬೈಕ್​ ಲಾಂಚ್​ ಮಾಡಿತ್ತು. ಈ ಬೈಕ್​ ಬಜೆಟ್​ ಬೆಲೆಯದ್ದಾಗಿದ್ದು, ಬಜಾಜ್​ ಕಂಪನಿಯ ಬೈಕ್​ಗಳಿಗೆ ಪೈಪೋಟಿ ನೀಡುತ್ತಿದೆ.

ಗ್ರಾಮೀಣ ಭಾಗದ ಜನರನ್ನು ಮುಖ್ಯವಾಗಿಸಿಕೊಂಡು Splendor+XTEC 2.0 ಬೈಕ್​​ ಮಾರ್ಕೆಟ್​​ಗೆ ತರಲಾಗಿದೆ. ಹೊಸ ಬೈಕ್​ ಒಂದು ಲೀಟರ್​ ಪೆಟ್ರೋಲ್​ಗೆ 73 ಕಿಲೋ ಮೀಟರ್​ ಮೈಲೇಜ್​ ನೀಡುತ್ತಿದೆ. ಅಂದಹಾಗೆಯೇ ಈ ಬೈಕ್​ 82,911 ರೂಪಾಯಿಗೆ ಖರೀದಿಗೆ ಸಿಗಲಿದೆ. ಇನ್ನು Splendor+XTEC 2.0 ಬೈಕ್​ ಬಜಾಜ್​ ಪ್ಲಾಟೀನಾ, ಹೊಂಡಾ ಶೈನ್​ ಬೈಕ್​ಗೆ ಪೈಪೋಟಿ ಕೊಡುತ್ತಿದೆ.

publive-image

Splendor+XTEC 2.0 ಬೈಕ್​ 97.2ಸಿಸಿ ಎಂಜಿನ್​ ಚಾಲಿತವಾಗಿದ್ದು, 8 ಸಾವಿರ ಆರ್​ಪಿಎಮ್​​ನಲ್ಲಿ 8.02 ಹೆಚ್​ಪಿ ಮತ್ತು 6 ಸಾವಿರ ಆರ್​ಪಿಎಮ್​ನಲ್ಲಿ 8.05 ಟಾರ್ಕ್​ ಅನ್ನು ಉತ್ಪಾದಿಸುತ್ತದೆ. 4 ಸ್ಪೀಡ್​ ಗೇರ್ ಗೇರ್​ಬಾಕ್ಸ್​ನಲ್ಲಿ ಚಲಿಸುತ್ತದೆ.

ಇದನ್ನೂ ಓದಿ:ಪೋಲ್ಡೇಬಲ್​ ಐಫೋನ್​ ಬಿಗ್​ ಅಪ್ಡೇಟ್​; ಹೇಗಿದೆ? ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment