newsfirstkannada.com

VIDEO: ‘ಓಪನ್​ ಮಾಡಲ್ಲ ಮರ್ಯಾದೆ ಹೋಗುತ್ತೆ’- ಪೊಲೀಸ್ರಿಗೆ ಪರಿಪರಿಯಾಗಿ ಬೇಡಿಕೊಂಡ ಸ್ಟಾರ್​ ನಟಿ

Share :

Published May 30, 2024 at 5:50pm

Update May 30, 2024 at 5:51pm

    ಬಹುಭಾಷಾ ನಟಿ ನಿವೇತಾ ಪೇತುರಾಜ್ ಪೊಲೀಸರ ಜತೆ ಜಗಳ

    ನಾನು ಓಪನ್​ ಮಾಡಲ್ಲ, ಮರ್ಯಾದೆ ಹೋಗುತ್ತೆ ಎಂದು ಪಟ್ಟು..!

    ಕಾರ್​ ಡಿಕ್ಕಿ ಓಪನ್​ ಮಾಡಲು ನಟಿ ನಿವೇತಾ ಪೇತುರಾಜ್​​​​ ನಕಾರ

ಬಹುಭಾಷಾ ನಟಿ ನಿವೇತಾ ಪೇತುರಾಜ್ ಅವರು ಪೊಲೀಸರ ಜತೆ ಜಗಳ ಮಾಡಿಕೊಂಡ ವಿಡಿಯೋ ಒಂದು ವೈರಲ್​ ಆಗಿದೆ. ತನ್ನ ಕಾರ್​ ಡಿಕ್ಕಿ ಓಪನ್​ ಮಾಡಿ ಎಂದ ಪೊಲೀಸ್ರ ಮೇಲೆ ನಿವೇತಾ ಸಿಟ್ಟಿಗೆದ್ದಿದ್ದಾರೆ.

ನಿವೇತಾ ಕಾರ್​​ನಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರನ್ನು ಅಡ್ಡಗಟ್ಟಿದ ಪೊಲೀಸ್ರು ಎಲ್ಲಾ ದಾಖಲೆಗಳ ಪರಿಶೀಲನೆ ಮಾಡಿದ್ರು. ನಂತರ ಕಾರ್​ ಡಿಕ್ಕಿ ಓಪನ್​ ಮಾಡಿ ಮೇಡಮ್​ ಎಂದಿದ್ದಕ್ಕೆ ಕೋಪಗೊಂಡ ನಿವೇತಾ ಪೊಲೀಸ್ರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಕಾರಣಕ್ಕೂ ಕಾರ್​​ ಡಿಕ್ಕಿ ಓಪನ್​ ಮಾಡಲು ಆಗುವುದಿಲ್ಲ ಎಂದಿದ್ದಾರೆ.

ವಿಡಿಯೋದಲ್ಲೇನಿದೆ..?

ನಾನು ಕಾರ್​ ಡಿಕ್ಕಿ ಓಪನ್​ ಮಾಡಲು ಆಗಲ್ಲ, ನನ್ನ ಮರ್ಯಾದೆ ಹೋಗುತ್ತೆ. ನಿಮಗೆ ಎಷ್ಟು ಹೇಳಿದ್ರೂ ಅರ್ಥ ಆಗಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದಿದ್ದಾರೆ. ಜತೆಗೆ ವಿಡಿಯೋ ರೆಕಾರ್ಡ್​​ ಪೊಲೀಸ್ರ ಕೈಯಲ್ಲಿದ್ದ ಮೊಬೈಲ್​​ ತೆಗೆದು ಎಸೆದಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕಳೆದ 9 ವರ್ಷಗಳಲ್ಲಿ ತಮಿಳು ಮತ್ತು ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿ ನಿವೇತಾ ಪೇತುರಾಜ್ ಬಣ್ಣ ಹಚ್ಚಿದ್ದಾರೆ. ಇವರು ‘ಒರು ನಾಳ್ ಕೂತು’, ‘ಅಲಾ ವೈಕುಂಠಪುರಮುಲೋ’, ‘ರೆಡ್’, ‘ಪಾಗಲ್’, ‘ಚಿತ್ರಲಹರಿ’ ಸೇರಿದಂತೆ ಹಲವು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ನೀನು ಇನ್ನೂ ಬಚ್ಚಾ.. ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಗಂಭೀರ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ‘ಓಪನ್​ ಮಾಡಲ್ಲ ಮರ್ಯಾದೆ ಹೋಗುತ್ತೆ’- ಪೊಲೀಸ್ರಿಗೆ ಪರಿಪರಿಯಾಗಿ ಬೇಡಿಕೊಂಡ ಸ್ಟಾರ್​ ನಟಿ

https://newsfirstlive.com/wp-content/uploads/2024/05/Pethuraj.jpg

Load More