/newsfirstlive-kannada/media/post_attachments/wp-content/uploads/2025/05/Ravindra-Kalakshetra-nataka-1.jpg)
ಬೆಂಗಳೂರು: ಸದಾ ಧ್ವನಿ ಕಳೆದುಕೊಂಡವರ ಧ್ವನಿಯಾಗಿ ಅವರ ಬದಕನ್ನೇ ಕಥೆಯಾಗಿಸಿ ಜೀವ ತುಂಬುವ ರಂಗಪಯಣ ತಂಡವು ಇದೀಗ ಸಾಂಸ್ಕೃತಿಕವಾಗಿ ಅಲೆಮಾರಿಗಳಾಗಿ ತಮ್ಮದೇ ಬದುಕು ಕಟ್ಟಿಕೊಂಡವರ ಕಥೆಯನ್ನು ಹೇಳಲು ವೇದಿಕೆ ಹತ್ತುತ್ತಿದ್ದೆ.
ಹೆಸರಿಲ್ಲದೇ ಆಧುನಿಕ ಜಂಜಡಗಳ ನಡುವೆ ಕಳೆದು ಹೋಗುತ್ತಿರುವ ಅಲೆಮಾರಿ ಸಮುದಾಯದ ನೋವನ್ನು, ಸಂಕಟವನ್ನು ಕಣ್ಣುಮುಂದೆ ತರುತ್ತಲೇ, ಭಾರತದ ಬಹುತ್ವವನ್ನು, ಜ್ಞಾನದ ಮೌಲ್ಯತೆಯನ್ನು ಮತ್ತೆ ನೆನಪಿಸುವ ಹೊಸ ನಾಟಕ ಪ್ರಯೋಗ 'ಹೆಸರೇ ಇಲ್ಲದವರು'.
ಸಮಾಜದ ಕಟ್ಟಲೆಗಳು ಒಂದು ಕಡೆ ನೋವಿನ ಕೂಪಕ್ಕೆ ತಳ್ಳಿದರೆ ಕುಲಕಸುಬುಗಳನ್ನೆ ನಂಬಿದ ಸಮುದಾಯಗಳು ಆಧುನಿಕತೆಯ ಬಾರುಕೋಲಿಗೆ ಸಿಲುಕಿ ನಲುಗಿದ ಕಥನವೇ ಹೆಸರೇ ಇಲ್ಲದವರು.
ಕೊಳಕು ರಾಜಕೀಯದಲ್ಲಿ ಸಿಲುಕಿ ನಲುಗುವ, ನೆಲವಿಲ್ಲದ ಅಲೆಮಾರಿಗಳು ಸಾಂಸ್ಕೃತಿಕ ಐಡೆಂಟಿಟಿ ಗೆ ಪರಿತಪಿಸುತ್ತಿರುವಾಗ ವ್ಯವಸ್ಥೆಯ ವ್ಯೂಹ ಅವರನ್ನು ಬಲಿ ತೆಗೆದುಕೊಳ್ಳವ ಹುನ್ನರಕ್ಕೆ ಸತ್ಯದ ರುಚಿ ತೋರಿಸಿದವರ ಕಥನವಾಗಿದೆ.
/newsfirstlive-kannada/media/post_attachments/wp-content/uploads/2025/05/Ravindra-Kalakshetra-nataka.jpg)
ರಂಗಪಯಣ (ರಿ)
ನಾಟಕ
ರಚನೆ - ವಿನ್ಯಾಸ - ಸಂಗೀತ - ನಿರ್ದೇಶನ -- ರಾಜಗುರು ಹೊಸಕೋಟೆ
ಪ್ರಸಾದನ - ಜಯರಾಜ್ ಹುಸ್ಕೂರು
ಬೆಳಕು - ಎಂ ಜಿ ನವೀನ್
ನಿರ್ವಹಣೆ - ನಯನ ಸೂಡ
ದಿನಾಂಕ: ಮೇ 27
ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ
ಬೆಂಗಳೂರು
ಸಮಯ : 7:30 ಕ್ಕೆ
ಹೆಚ್ಚಿನ ಮಾಹಿತಿಗಾಗಿ
8884764509 | 9964140723
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us