/newsfirstlive-kannada/media/post_attachments/wp-content/uploads/2024/07/Bagalkote-1.jpg)
ಬಾಗಲಕೋಟೆ: ಹೆಸ್ಕಾಂ ನೌಕರನೋರ್ವ ಟ್ರಾನ್ಸ್ ಫಾರ್ಮರ್ ಹಿಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನವನಗರದ 51ನೇ ಸೆಕ್ಟರ್ ನಲ್ಲಿ ನಡೆದಿದೆ. ವಿದ್ಯುತ್ ಟ್ರಾನ್ಸ್​ಫಾರ್ಮರ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪರಶು ಮಾಸ್ತಿ (35) ಆತ್ಮಹತ್ಯೆ ಮಾಡಿಕೊಂಡ ಹೆಸ್ಕಾಂ ನೌಕರ. ವಿದ್ಯುತ್ ಪ್ರವಹಿಸಿ ಲೈನ್​ಮೆನ್ ಸುಟ್ಟು ಕರಕಲಾಗಿದ್ದಾನೆ.
/newsfirstlive-kannada/media/post_attachments/wp-content/uploads/2024/07/bagalkote-1-1.jpg)
ಪರಶು ಮಾಸ್ತಿ ನವನಗರದ ಮೂಲದ ನಿವಾಸಿ. ಆತನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಆಕಸ್ಮಿಕ ಬೆಂಕಿ ಅವಘಡ.. ಸುಟ್ಟು ಕರಕಲಾದ 3 ಅಂತಸ್ತಿನ ಬೇಕರಿ
ಹೆಸ್ಕಾಂ ನೌಕರ ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us