newsfirstkannada.com

ಸಿಲಿಕಾನ್​ ಸಿಟಿ ಹೋಟೆಲ್​​ಗಳಿಗೆ ​ಸಂಕಷ್ಟ; ಟ್ರೇಡ್​​ ಲೈಸೆನ್ಸ್​​ ಪಡೀಯೋಕೆ ಮಾಲೀಕ ಹಿಂದೇಟು!

Share :

Published February 25, 2024 at 6:48am

    ಬೆಂಗಳೂರಿನಲ್ಲಿ 25 ಸಾವಿರಕ್ಕೂ ಅಧಿಕ ಹೋಟೆಲ್‌ಗಳಿವೆ

    ಅನೇಕ ಹೋಟೆಲ್​​ಗಳ ಮೇಲೆ ಟ್ರೇಡ್​​ ಲೈಸೆನ್ಸ್ ಇಲ್ಲದ​​ ಆರೋಪ

    ಟ್ರೇಡ್​​ ಲೈಸೆನ್ಸ್​​ ಪಡೆಯಲು ಕೆಲ ಹೋಟೆಲ್ ಮಾಲೀಕರು ನಿರಾಸಕ್ತಿ

ಬೆಂಗಳೂರು: ಸಿಲಿಕಾನ್​ ಸಿಟಿಯ ಗಲ್ಲಿ ಗಲ್ಲಿಯಲ್ಲೂ ಹೋಟೆಲ್​ಗಳದ್ದೇ ಕಾರುಬಾರು. ಎತ್ತ ಕಣ್ಣಾಡಿಸಿದ್ರೂ ಭೋಜನ ಮನೆಗಳಿಗೇನೂ ಕಮ್ಮಿ ಇಲ್ಲ. ಆದ್ರೆ ಇಂತಹ ಅನೇಕ ಹೋಟೆಲ್​​ಗಳು ಟ್ರೇಡ್​​ ಲೈಸೆನ್ಸ್​​ ಪಡೆದಿಲ್ಲ ಅನ್ನೋ ಆರೋಪ ಕೇಳಿಬಂದಿದೆ.

ಆಹಾರ ಉತ್ಪನ್ನ ತಯಾರಿ ಮಾಡುವ ಎಲ್ಲ ಘಟಕಗಳು ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದಲೂ ಲೈಸೆನ್ಸ್​​​ ಪಡೆದಿರಬೇಕು ಅನ್ನೋ ಕಾನೂನು ಇದೆ. ಆದರೆ, ಇದಕ್ಕೆ ಬಹುತೇಕರು ಕಿಮ್ಮತ್ತು ನೀಡುತ್ತಿಲ್ಲ ಅನ್ನೋ ಆರೋಪ ಇದೆ. ಬೆಂಗಳೂರು ಗ್ರಾಮಾಂತರದಲ್ಲಿ 207 ಮತ್ತು ಬೆಂಗಳೂರು ನಗರದಲ್ಲಿ 316 ಹೋಟೆಲ್‌ಗಳು ಮಾತ್ರವೇ ಟ್ರೇಡ್‌ ಲೈಸೆನ್ಸ್‌ ಪಡೆದುಕೊಂಡಿವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂದಾಜು 7 ಸಾವಿರ ಮತ್ತು ಬೆಂಗಳೂರಿನಲ್ಲಿ 25 ಸಾವಿರಕ್ಕೂ ಅಧಿಕ ಹೋಟೆಲ್‌ಗಳಿವೆ.

ಉದ್ದಿಮೆ ಪರವಾನಗಿ ವಿತರಣೆಯಿಂದ 2023-24ರಲ್ಲಿ ಸರಕಾರಕ್ಕೆ ಬಂದಿರುವ ಆದಾಯ ಕೇವಲ 214 ಕೋಟಿ ರೂಪಾಯಿಗಳು ಮಾತ್ರ. ಇನ್ನು ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್, ಮತ್ತು ಬಿಬಿಎಂ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​​ ಅವರನ್ನ ಕೇಳಿದಾಗ ಅಸಡ್ಡೆಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ಒಟ್ಟಿನಲ್ಲಿ ಟ್ರೇಡ್ ಲೈಸೆನ್ಸ್ ಬಗ್ಗೆ ಮಾಹಿತಿ ಇದ್ರು ಕೆಲ ಹೋಟೆಲ್ ಮಾಲೀಕರು ನಿರಾಸಕ್ತಿ ವಹಿಸ್ತಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿ ಹೋಟೆಲ್​​ಗಳಿಗೆ ​ಸಂಕಷ್ಟ; ಟ್ರೇಡ್​​ ಲೈಸೆನ್ಸ್​​ ಪಡೀಯೋಕೆ ಮಾಲೀಕ ಹಿಂದೇಟು!

https://newsfirstlive.com/wp-content/uploads/2023/07/food-rate-1.jpg

Load More