ಕೇವಲ 10 ಟೀ ಸ್ಟಾಲ್​ನಲ್ಲಿ ಒಂದು ಕೋಟಿ ಕಪ್ ಚಹಾ.. ಕರ್ನಾಟಕದ ‘ನಂದಿನಿ’ ಕೂಡ ಈ ಸಾಧನೆಯ ಭಾಗ!

author-image
Ganesh
Updated On
ಕೇವಲ 10 ಟೀ ಸ್ಟಾಲ್​ನಲ್ಲಿ ಒಂದು ಕೋಟಿ ಕಪ್ ಚಹಾ.. ಕರ್ನಾಟಕದ ‘ನಂದಿನಿ’ ಕೂಡ ಈ ಸಾಧನೆಯ ಭಾಗ!
Advertisment
  • ಮಹಾ ಕುಂಭ ಮೇಳದಲ್ಲಿ hi-tech chai ಸಂಚಲನ
  • Chai Point ಪಾಯಿಂಟ್ ಟೆಕ್ನಿಕ್​​​ಗೆ ಖ್ಯಾತ ಪ್ರಾಧ್ಯಾಪಕ ಫಿದಾ
  • ಆಸಕ್ತಿದಾಯಕ ಸ್ಟೋರಿ ಓದಿ ಆನಂದ ಮಹೀಂದ್ರಾ ಏನಂದ್ರು?

ಐತಿಹಾಸಿಕ ಪ್ರಸಿದ್ಧ, ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭದಲ್ಲಿ hi-tech chai ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ. ಕನ್ನಡದ ಅಸ್ಮಿತೆ ಕೆಎಂಎಫ್ ಕೂಡ ಈ ಸಾಧನೆಯ ಭಾಗವಾಗಿದೆ ಅನ್ನೋದು ಇನ್ನೊಂದು ವಿಶೇಷ.. ಕುಂಭದಲ್ಲಿ ಭದ್ರತಾ ವ್ಯವಸ್ಥೆಗಳು ಮಾತ್ರ ಹೈಟೆಕ್ ಆಗಿಲ್ಲ, ಅಲ್ಲಿರುವ ಪ್ರತಿಯೊಂದು ಸೇವೆಗಳೂ ಕೂಡ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಕೆಲಸ ಮಾಡುತ್ತಿವೆ.

ಸ್ಟೋರಿಯ ವಿವರ..

ಆನಂದ್ ಮಹೀಂದ್ರ, ದೇಶದ ಖ್ಯಾತ ಉದ್ಯಮಿ. ಉತ್ತರ ಪ್ರದೇಶದ ಪ್ರಯಾಗರಾಜನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಸಂಚಲನ ಸೃಷ್ಟಿಸಿರುವ ಕುತೂಹಲಕಾರಿ ವಿಚಾರವೊಂದನ್ನು ಮುಂದಿಟ್ಟಿದ್ದಾರೆ. ಅಂದ್ಹಾಗೆ ಈ ವಿಚಾರವನ್ನು ಅಧ್ಯಯನ ನಡೆಸಿ ಪ್ರಸ್ತುತ ಪಡಿಸಿರೋದು ಹಾರ್ವರ್ಡ್​ ಬ್ಯುಸಿನೆಸ್​ ಸ್ಕೂಲ್​ ಪೊಫೆಸರ್ ತರುಣ್ ಖನ್ನಾ. ಪ್ರಸಿದ್ಧ ಬ್ಲಾಗ್ ಲೇಖಕರಾಗಿರುವ ತರುಣ್ ಖನ್ನಾ, ಕುಂಭ ಮೇಳದಲ್ಲಿನ ‘hi-tech chai’ ಕುರಿತು ಅಧ್ಯಯನ ನಡೆಸಿ ಬ್ಲಾಗ್​​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿದ ಆನಂದ್ ಮಹೀಂದ್ರಾ ದಿಗ್ಬ್ರಮೆಗೆ ಒಳಗಾಗಿದ್ದು, ಟ್ವಿಟರ್​​ನಲ್ಲಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಾಧ್ಯಾಪಕ ತರುಣ್ ಖನ್ನಾ ಬ್ಲಾಗ್​ನಲ್ಲಿ ಶೇರ್ ಮಾಡಿರುವ ಎರಡು ಫೋಟೋಗಳನ್ನು ಉದ್ಯಮಿ ಹಂಚಿಕೊಂಡಿದ್ದಾರೆ. ಮಹಾಕುಂಭದಲ್ಲಿ ಸೈನಿಕರು ಚಾಯ್ ಆನಂದಿಸುವುದನ್ನು ಕಾಣಬಹುದು. ಇನ್ನೊಂದು ಚಾಯ್ ಪಾಯಿಂಟ್.

ಇದನ್ನೂ ಓದಿ: ಬಾಹ್ಯಾಕಾಶದಲ್ಲೂ ಮಹಾಕುಂಭ ಹೀಗೆಯೇ ಕಾಣುತ್ತದೆ.. ಅದ್ಭುತ ಫೋಟೋ ಹಂಚಿಕೊಂಡ ISRO

publive-image

ಆನಂದ್ ಮಹೀಂದ್ರಾ ತಮ್ಮ ಪೋಸ್ಟ್‌ನಲ್ಲಿ ತರುಣ್ ಖನ್ನಾ ಅವರ ಮಾತುಗಳನ್ನ ಉಲ್ಲೇಖಿಸಿದ್ದಾರೆ.. ವಿಶ್ವದ ಅತಿ ದೊಡ್ಡ ಮಾನವ ಕೂಟ ಮಹಾ ಕುಂಭವು ಕೆಲವೇ ಕೆಲವು ವಾರಗಳಲ್ಲಿ ಬರೋಬ್ಬರಿ 25 ಕೋಟಿ ಯಾತ್ರಿಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ವಿಶೇಷ ದಿನಗಳಲ್ಲಿ ಇದರ ಸಂಖ್ಯೆ 5 ಕೋಟಿ ತಲುಪಬಹುದು. ನದಿಯ ದಡದಲ್ಲಿರುವ ಈ ತಾತ್ಕಾಲಿಕ ‘ಮೆಗಾಸಿಟಿ’ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಭದ್ರತೆಗಾಗಿ ಪ್ಯಾರಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ. NASA ದಂತಹ ಹೈಟೆಕ್ ಮಾನಿಟರಿಂಗ್ ವ್ಯವಸ್ಥೆ ಮಾಡಲಾಗಿದೆ. ಸಮಸ್ಯೆ ಪರಿಹಾರ ಮತ್ತು ಭದ್ರತೆ ಎರಡಕ್ಕೂ ಡ್ರೋನ್‌ಗಳು ಮತ್ತು ಸೆನ್ಸಾರ್​​ಗಳನ್ನು ಬಳಸಲಾಗುತ್ತಿದೆ. ಮಹಾಕುಂಭದಲ್ಲಿ ಎಲ್ಲವೂ ಹೈಟೆಕ್ ಆಗಿವೆ. ಕುಡಿಯುವ ಚಹಾ ಕೂಡ ಹೈಟೆಕ್​ ರೂಪದಲ್ಲಿ ಸಿಗುತ್ತಿದೆ ಎಂದು ಉಲ್ಲೇಖಿಸಿ. ಬೆಂಗಳೂರಿನ Chai Point ಕುರಿತು ಬರೆದುಕೊಂಡಿದ್ದಾರೆ.
ದಿ ಹಿಂದೂ ಪ್ರಕಾರ.. ಚಾಯ್ ಪಾಯಿಂಟ್ (Chai Point) ಮತ್ತು ಅದರ ಪಾಲುದಾರ ಕರ್ನಾಟಕ ಮಿಲ್ಕ್ ಫೆಡರೇಶನ್ (KMF), ಮಹಾ ಕುಂಭ ಮೇಳದಲ್ಲಿ 1 ಕೋಟಿ ಕಪ್‌ಗಳಿಗಿಂತ ಹೆಚ್ಚು ಚಹಾ ಪೂರೈಸುವ ಗುರಿ ಹೊಂದಿದೆ. ಈ ಸಾಧನೆಯೊಂದಿಗೆ ಗಿನ್ನಿಸ್ ದಾಖಲೆ ನಿರ್ಮಿಸುವ ನಿರೀಕ್ಷೆಯಲ್ಲಿ ಕಂಪನಿ ಇದೆ. ಪ್ರತಿ ಸ್ಟಾಲ್‌ನಲ್ಲಿ ನಂದಿನಿ ಬ್ರಾಂಡ್ ಹಾಲು, ಸಿಹಿತಿಂಡಿಗಳು ಮತ್ತು ಮಿಲ್ಕ್‌ಶೇಕ್‌ಗಳು ಕೂಡ ದೊರೆಯುತ್ತಿದೆ. ಕೇವಲ 10 ಚಾಯ್ ಪಾಯಿಂಟ್​​​ಗಳಲ್ಲಿ ಬರೋಬ್ಬರಿ ಒಂದು ಕೋಟಿ ಕಪ್ ಟೀ ತಯಾರಿಸಲಾಗುತ್ತಿದೆ.

ಇದನ್ನೂ ಓದಿ: ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳಕ್ಕೆ ಭಕ್ತಕೋಟಿ; ಹೇಗಿದೆ ವಿಶೇಷ ರೈಲುಗಳ ವ್ಯವಸ್ಥೆ?

ಸರ್ಕಾರದಿಂದ ಅಧಿಕೃತಗೊಂಡಿರುವ Chai Point ಕಂಪನಿಯು, ಅತ್ಯಾಧುನಿಕ ರೋಬೋಟ್‌ಗಳ ಸಹಾಯದಿಂದ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಹಾ ಉತ್ಪಾದಿಸುತ್ತದೆ. 2010ರಲ್ಲಿ ಸ್ಥಾಪಿತವಾದ ಈ ಕಂಪನಿಯು ಪ್ರಪಂಚದ ಅತಿದೊಡ್ಡ ಚಹಾ ಆಧಾರಿತ ಪಾನೀಯ ವೇದಿಕೆ. ಪ್ರತಿದಿನ 7 ಲಕ್ಷ ಕಪ್ ಚಹಾವನ್ನು ನೀಡುತ್ತಿದೆ. ನಾವು ನಮ್ಮನ್ನು ಪಾನೀಯ ವೇದಿಕೆಯಾಗಿ ನೋಡುತ್ತೇವೆ. ಕಳೆದ ಕೆಲವು ವರ್ಷಗಳಿಂದ ಚಹಾ ಮತ್ತು ಕಾಫಿಯನ್ನು ಯಂತ್ರಗಳ ಮೂಲಕ ಮಾಡುತ್ತಿದ್ದೇವೆ. ಗುಣಮಟ್ಟ ಮತ್ತು ಸ್ಥಿರತೆಯನ್ನು ಕಾಣಬಹುದಾಗಿದೆ ಎಂದು ಕಂಪನಿ ಡಿಡಿ ಇಂಡಿಯಾಗೆ ಹೇಳಿದೆ. ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಒಂದು ಯಂತ್ರವು, ಕೇವಲ 12 ನಿಮಿಷಗಳಲ್ಲಿ 15 ಲೀಟರ್ ಚಾಯ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಮಾಹಿತಿ ಇದೆ.


">January 21, 2025

ತರುಣ್ ಖನ್ನಾ ಯಾರು?

ಬ್ಲಾಗ್‌ನ ಲೇಖಕರಾಗಿರುವ ತರುಣ್ ಖನ್ನಾ, ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನ ಪ್ರಾಧ್ಯಾಪಕರಾಗಿದ್ದಾರೆ. 1988 ರಲ್ಲಿ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದುಕೊಂಡು, ಪಿಎಚ್‌ಡಿ ಕೂಡ ಮಾಡಿದ್ದಾರೆ. 1993ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ವ್ಯಾಪಾರ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಜನವರಿ 13ರಿಂದ ಆರಂಭವಾದ ಮಹಾಕುಂಭ ಫೆಬ್ರವರಿ 26ರವರೆಗೆ ನಡೆಯಲಿದೆ. ಪವಿತ್ರ ಸ್ನಾನದ ವಿಶೇಷ ದಿನಗಳು 29 ಜನವರಿ, 3 ಫೆಬ್ರವರಿ, 12 ಫೆಬ್ರವರಿ ಮತ್ತು 26 ಫೆಬ್ರವರಿ.

ಇದನ್ನೂ ಓದಿ: ವೈರಲ್ ಹುಡುಗಿಯ ಬಡತನದ ಬದುಕು.. ಒಂದೇ ಕೋಣೆಯ ಮನೆ.. ಹೇಗಿದೆ ಜೀವನ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment