ಕಾಶ್ಮೀರದಲ್ಲಿ ಉಗ್ರರ ದಾಳಿ.. ರಾಜ್ಯದ ಪ್ರವಾಸಿಗರು, ಪ್ರವಾಸಿ ತಾಣಗಳಿಗೂ ಹೈ ಅಲರ್ಟ್; ಓದಲೇಬೇಕಾದ ಸ್ಟೋರಿ!

author-image
Veena Gangani
Updated On
ಲೋಕಸಭಾ ಚುನಾವಣೆಗೆ ಪೊಲೀಸ್​ ಬಂದೋಬಸ್ತ್​​; ಈ 5 ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣು!
Advertisment
  • ಶಿವಮೊಗ್ಗ, ಮಂಗಳೂರು, ಭಟ್ಕಳ, ಹುಬ್ಬಳ್ಳಿಯಲ್ಲಿ ಕಟ್ಟೆಚ್ಚರಕ್ಕೆ ಆದೇಶ
  • ಬಂದರು ಪ್ರದೇಶ, ಕೆಲವು ಜಿಲ್ಲೆಗಳಲ್ಲಿ ಕಟ್ಟೆಚರ ವಹಿಸಲು ಸೂಚನೆ
  • ಪ್ರವಾಸಿ ತಾಣಗಳ ಬಳಿ ರೌಂಡ್ಸ್ ಹೆಚ್ಚಿಸಲು ಪೊಲೀಸರಿಗೆ ಸಲಹೆ

ಜಮ್ಮು ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ವಿಡಿಯೋಗಳನ್ನು ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ನೀನು ಹಿಂದೂನಾ? ಅಲ್ಲ ಮುಸ್ಲಿಂನಾ ಅಂತ ಕೇಳಿ ತಲೆಗೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಈ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬೆನ್ನಲ್ಲೇ ರಾಜ್ಯ ಪ್ರವಾಸಿ ತಾಣಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ:ಪಾಕ್​ಗೆ ಹೋದವರು ಮೇ 1ರೊಳಗೆ ಬರ್ಬೇಕು; ಭಾರತದಲ್ಲಿರೋ ಪಾಕಿಸ್ತಾನಿಯರಿಗೆ ತೊಲಗಲು ಡೆಡ್​ಲೈನ್​..!

publive-image

ಬಂದರು ಪ್ರದೇಶ, ಮಲ್ಪೆ ಬೀಚ್​, ಕುಂದಾಪುರ, ದ.ಕನ್ನಡದ ಪ್ರವಾಸಿ ತಾಣಗಳು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದ್ರೆ ವಿಚಾರಣೆ ಮಾಡಲು ಕೂಡ ಸೂಚನೆ ನೀಡಲಾಗಿದೆ.

publive-image

ಶಿವಮೊಗ್ಗ, ಮಂಗಳೂರು, ಭಟ್ಕಳ, ಹುಬ್ಬಳ್ಳಿಯ ಪ್ರವಾಸಿ ತಾಣಗಳ ಬಳಿ ರೌಂಡ್ಸ್ ಹೆಚ್ಚಿಸಲು ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಪ್ರವಾಸಿ ತಾಣಗಳ ಬಳಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ವಿಚಾರಣೆ ಮಾಡಬೇಕು ಅಂತ ತಿಳಿಸಲಾಗಿದೆ. ಹೀಗಾಗಿ ರಾಜ್ಯದ ಭದ್ರತೆ ವಿಚಾರವಾಗಿ ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಸಭೆ ನಡೆಸಲು ಸಹ ಆಲೋಚನೆಗೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment