/newsfirstlive-kannada/media/post_attachments/wp-content/uploads/2024/08/hdk1.jpg)
ನವದೆಹಲಿ: ವಾಲ್ಮೀಕಿ, ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಲು ರಾಜ್ಯ ಬಿಜೆಪಿ ಸನ್ನದ್ಧವಾಗಿತ್ತು. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೈ ಜೊಡಿಸಿದ್ದ ತೆನೆ ನಾಯಕರು ಇದರಿಂದ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದರು. ಖುದ್ದು ಕೇಂದ್ರ ಸಚಿವ ಕುಮಾರಸ್ವಾಮಿಯವರೇ ನಾವು ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅದು ಮೈತ್ರಿ ಪಾಳಯಕ್ಕೆ ಬಿಗ್ ಶಾಕ್ ಬಿದ್ದಂತಾಗಿತ್ತು.
ಜೆಡಿಎಸ್ ಬೆಂಬಲವಿಲ್ಲದೇ ಪಾದಯಾತ್ರೆ ಮಾಡುವುದು ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ಒಂದು ಅಸ್ತ್ರ ಸಿಕ್ಕಂತಾಗುತ್ತದೆ. ಒಂದು ವೇಳೆ ಪಾದಯಾತ್ರೆ ಯೋಚನೆ ಕೈಬಿಟ್ಟಲ್ಲಿ ಬಿಜೆಪಿಗೆ ಮುಖಭಂಗವಾಗುತ್ತದೆ ಅನ್ನೋ ಧರ್ಮಸಂಕಟದಲ್ಲಿ ಬಿಜೆಪಿ ಪಾಳಯವಿತ್ತು. ಈಗ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅಂದುಕೊಂಡಂತೆಯೇ ಪಾದಯಾತ್ರೆಗೆ ಕಮಲಪಾಳಯ ಸಜ್ಜಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಬಿಜೆಪಿ ಪಾದಯಾತ್ರೆಗೆ ಬಿಗ್ ಶಾಕ್; ಜೆಡಿಎಸ್ ಬೆಂಬಲ ಹಿಂಪಡೆದಿದ್ದು ಯಾಕೆ?
ನಿಮ್ಮ ಪಾಡಿಗೆ ನೀವು ಪಾದಯಾತ್ರೆ ಮಾಡಿ
ಬಿಜೆಪಿ ಪಾದಯಾತ್ರೆ ವಿರುದ್ಧ ನಿನ್ನೆಯಷ್ಟೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ರಾಜ್ಯದಲ್ಲಿ ಭೀಕರ ಮಳೆಯಾಗುತ್ತಿದೆ. ಭೀಕರ ಪ್ರವಾಹಗಳು ಕಣ್ಮುಂದೆ ಆಗಿವೆ, ಈ ಸಂದರ್ಭದಲ್ಲಿ ನಡೆಯುತ್ತಿರುವ ಪಾದಯಾತ್ರೆಯನ್ನು ಜೆಡಿಎಸ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ರು. ಈ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, ಈ ರೀತಿ ನಾವು ಸುಮ್ಮನಿದ್ರೆ ಎಲ್ಲಾ ವಿಚಾರಕ್ಕೂ ಹೆದರಿಸುತ್ತಲೇ ಇರುತ್ತಾರೆ. ನಿಮ್ಮ ಪಾಡಿಗೆ ನೀವು ಪಾದಯಾತ್ರೆ ಮಾಡಿ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೇ ಸಮಾರೋಪ ಸಮಾರಂಭಕ್ಕೆ ತಾವೂ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ರಾಜ್ಯ ಬಿಜೆಪಿಗೆ ಮತ್ತಷ್ಟು ಬಲ, ಉತ್ಸಾಹ ಸಿಕ್ಕಂತಾಗಿದ್ದು, ನಿಗದಿಯಂತೆ ಪಾದಯಾತ್ರೆ ಮಾಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ