ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!

author-image
Ganesh
Updated On
ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!
Advertisment
  • ಕಂಗನಾ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ
  • ಕಂಗನಾ ರಣಾವತ್ ಆಯ್ಕೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ
  • ಯಾಕೆ ಕಂಗನಾಗೆ ಸಂಕಷ್ಟ ಎದುರಾಗಿದೆ? ಏನಿದು ಪ್ರಕರಣ..?

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್ ಆಯ್ಕೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಬೆನ್ನಲ್ಲೇ ಕೋರ್ಟ್​, ಸಂಸದೆ ಕಂಗನಾಗೆ ನೋಟಿಸ್ ಜಾರಿ ಮಾಡಿದೆ.

ಕಿನ್ನೌರ್ ನಿವಾಸಿ ಲಾಯಿಕ್ ರಾಮ್ ನೇಗಿ ಕಂಗನಾ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಕಂಗನಾ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ಲೋಕಸಭೆ ಕ್ಷೇತ್ರದಿಂದ ನಾನೂ ಕೂಡ ಸ್ಪರ್ಧಿಸಲು ಬಯಸಿದ್ದೆ. ಆದರೆ ನನ್ನ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಲಾಗಿದೆ. ಒಂದು ವೇಳೆ ನನ್ನ ನಾಮಪತ್ರವನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ರದ್ದು ಮಾಡದಿದ್ದರೆ, ನಾನೇ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು ಎಂದು ಅವರು ವಾದಿಸಿದ್ದಾರೆ. ಚುನಾವಣಾಧಿಕಾರಿ (ಡೆಪ್ಯುಟಿ ಕಮಿಷನರ್, ಮಂಡಿ) ತಪ್ಪಾಗಿ ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಚುನಾವಣಾ ಅಧಿಕಾರಿಯನ್ನೂ ಅವರು ಆರೋಪಿಯನ್ನಾಗಿ ಮಾಡಿದ್ದಾರೆ.

ಇದನ್ನೂ ಓದಿ:ನೆಹ್ರಾಗೆ ಗೇಟ್​ಪಾಸ್​..! ಗುಜರಾತ್ ಟೈಟನ್ಸ್​ಗೆ ಯುವರಾಜ್​​ ಸಿಂಗ್ ಎಂಟ್ರಿ..!

ಇದರ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್.. ಆಗಸ್ಟ್ 21 ರೊಳಗೆ ಉತ್ತರ ನೀಡುವಂತೆ ಕಂಗನಾ ರಣಾವತ್ ನೋಟಿಸ್ ಜಾರಿ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಂಗನಾ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್​ ವಿರುದ್ಧ 74,755 ಮತಗಳ ಅಂತರದಿಂದ ಗೆದ್ದು ಸಂಸದರಾಗಿದ್ದಾರೆ. ಇದೀಗ ಕಂಗನಾರ ಲೋಕಸಭೆ ಸದಸ್ಯತ್ವವನ್ನು ರದ್ದು ಮಾಡುವಂತೆ ಲಾಯಿಕ್ ರಾಮ್ ನೇಗಿ ಆಗ್ರಹಿಸಿದ್ದಾರೆ. ಮಾಜಿ ಅರಣ್ಯ ಇಲಾಖೆ ನೌಕರ ಆಗಿರುವ ಲಾಯಿಕ್ ರಾಮ್ ನೇಗಿ, ಸರ್ಕಾರಿ ಕೆಲಸಕ್ಕೆ ಗುಡ್​ಬೈ ಹೇಳಿ ಚುನಾವಣೆಗೆ ನಿಂತಿದ್ದರು.

ಇದನ್ನೂ ಓದಿ:ಲಂಕನ್ನರಿಗೆ ಕಾಡ್ತಿವೆ ಹಳೇ ಏಟುಗಳು..! ಈ ಆಟಗಾರನ ಹೆಸರು ಕೇಳಿದ್ರೆ ಬೆಚ್ಚಿ ಬೀಳೋದ್ಯಾಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment