/newsfirstlive-kannada/media/post_attachments/wp-content/uploads/2024/06/BHAVANI.jpg)
ಬೆಂಗಳೂರು: ಪ್ರಜ್ವಲ್​ ರೇವಣ್ಣ ತಾಯಿ ಭವಾನಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಮನೆ ಕೆಲಸದಾಕೆ ಕಿಡ್ನಾಪ್ ಆರೋಪ ಪ್ರಕರಣದಲ್ಲಿ ಭವಾನಿ ರೇವಣ್ಣ ಸಿಲುಕಿಕೊಂಡಿದ್ದರು. ಆದರೀಗ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಅತ್ಯಾಚಾರ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಪತಿ ರೇವಣ್ಣನ ಜೊತೆಗೆ ಭವಾನಿ ರೇವಣ್ಣ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಈ ಕುರಿತಾಗಿ ಎಸ್ಐಟಿ ತನಿಖೆಗೆ ಹಾಜರಾಗಬೇಕು ಎಂದು ಹೇಳಿತ್ತು. ಆದರೆ ಭವಾನಿ ರೇವಣ್ಣ ತನಿಖೆ ಹಾಜರಾಗದೆ ಕಣ್ತಪ್ಪಿಸಿದ್ದರು. ಕೊನೆಗೆ ಕೋರ್ಟ್​ ಮದ್ಯಂತರ ಜಾಮೀನು ನೀಡಿತ್ತು.
ಕೋರ್ಟ್​ ಮಧ್ಯಂತರ ಜಾಮೀನಿ ನೀಡಿದ್ದೇ ತಡ ಭವಾನಿ ರೇವಣ್ಣ ಪ್ರತ್ಯಕ್ಷವಾಗಿ ಎಸ್​​ಐಟಿ ತನಿಖೆಗೆ ಹಾಜರಾಗಿದ್ದರು. ಮಾತ್ರವಲ್ಲದೆ, ಎಸ್​ಐಟಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆದರೀಗ ಹೈಕೋರ್ಟ್​ ಅತ್ಯಾಚಾರ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಿಗ್ ರಿಲೀಫ್ ನೀಡಿದೆ. ಇದರಿಂದ ಭವಾನಿ ರೇವಣ್ಣ ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: 25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು
ಇನ್ನು ಸಂತ್ರಸ್ತೆಯ ಹೇಳಿಕೆಯ ಮೇಲೆ ಕೋರ್ಟ್​ ಗಮನಹರಿಸಿದೆ. ಭವಾನಿ ರೇವಣ್ಣ ಆಹಾರ ಮತ್ತು ಬಟ್ಟೆ ನೀಡಿರೋದಾಗಿ ಸಂತ್ರಸ್ತೆ ಹೇಳಿದ್ದಾರೆ. ಹೀಗಾಗಿ ಅನಗತ್ಯವಾಗಿ ಭವಾನಿಯವರನ್ನು ಬಂಧಿಸೋದು ಬೇಡವೆಂದ ಕೋರ್ಟ್ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us