newsfirstkannada.com

ಆ 1 ಗಂಟೆಯಲ್ಲಿ ಆಗಿದ್ದೇನು..? ಫೋನ್‌ನಲ್ಲಿ​​ ಅಡಗಿದ್ಯಾ ಅಡ್ವೋಕೇಟ್ ಚೈತ್ರಾ ಸಾವಿನ ರಹಸ್ಯ?

Share :

Published May 13, 2024 at 9:42am

Update May 13, 2024 at 11:32am

    ಮೊಬೈಲ್ ನಲ್ಲಿ ಚೈತ್ರಾ ಸಾವಿನ ಸತ್ಯ ಅಡಗಿದ್ಯಾ ಅನ್ನೋ ಅನುಮಾನ

    ಡೆತ್ ನೋಟ್ ಹಾಗೂ ಮೊಬೈಲ್ ಅನ್ನ ಸೀಜ್ ಮಾಡಿದ ಪೊಲೀಸರು

    ಚೈತ್ರಾರ ಸಾವಿನ ಸುತ್ತ ಹುಟ್ಟಿಕೊಂಡಿರುವಂತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ

ಸುಂದರ ಸಂಸಾರ, ಚೆಂದದ ಬದುಕು. ಆಸ್ತಿ- ಅಂತಸ್ತು ಏನು ಕಡಿಮೆ ಇಲ್ಲ. ವೃತ್ತಿಯಲ್ಲಿ ಲಾಯರ್.. ಪ್ರವೃತ್ತಿಯಲ್ಲಿ ಮಾಡೆಲ್​. ಎಲ್ಲವೂ ಚೆನ್ನಾಗಿತ್ತು. ಆದ್ರೂ, ವಕೀಲೆ ಚೈತ್ರಾಗೌಡ ತಮ್ಮ ಬದುಕಿನ ಪುಟಕ್ಕೆ ಅಂತ್ಯ ಹಾಡಿದರು. ಆದ್ರೆ, ಚೈತ್ರಾಗೌಡ ಮನೆಯಲ್ಲಿ ಸಿಕ್ಕ ಮೂರು ತಿಂಗಳ ಹಿಂದಿನ ಡೆತ್​ ನೋಟ್,​ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದು ಸಾವಿನ ಸುತ್ತ ಅನುಮಾನಗಳು.

ಚೈತ್ರಾ ಗೌಡ.. ಕೋರ್ಟ್​ ಕಟೆಕಟೆಯಲ್ಲಿ ನಿಂತು ಸರಿತಪ್ಪುಗಳ ವಾದ ಮಾಡೋ ವಕೀಲೆ. ಆದ್ರೆ, ಜೀವನ ಜಂಜಾಟಕ್ಕೆ ಸೋತು ಹೋಗಿದ್ದ ಚೈತ್ರಾ ಸುಂದರ ಬದುಕಿಗೆ ಗುಡ್​ ಬೈ ಹೇಳಿದ್ಲು. ನಗುನಗುತ್ತಾ ಮಾತಾನಾಡಿದ್ದ ಚೈತ್ರಾ ನೇಣಿನ ಕುಣಿಕೆಗೆ ಕೊರಳೊಡ್ಡಿ ಉಸಿರು ಚೆಲ್ಲಿದ್ಲು. ಇದೀಗ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರೋದು ಹಲವು ಅನುಮಾನಗಳನ್ನ ಮೂಡಿಸಿದೆ.

ಚೈತ್ರಾಗೌಡ ಹೈಕೋರ್ಟ್ ಅಡ್ವೋಕೇಟ್‌. ಇನ್ನೂ ಚೈತ್ರಾ ಪತಿ ಶಿವಕುಮಾರ್‌, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ ಅಸ್ಟಿಸೆಂಟ್ ಕಮೀಷನರ್ ಆಗಿದ್ದು, ದಂಪತಿಗೆ ಒಂದು ಮುದ್ದಾದ ಗಂಡು ಮಗುವೂ ಇದೆ. ದಂಪತಿ ಬೆಂಗಳೂರಿನ ಅಣ್ಣಯ್ಯಪ್ಪ ಲೇಔಟ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ರು. ಆದ್ರೆ, ಚೈತ್ರಾ ಮನಸ್ಸಿಗೆ ಅದ್ಯಾವ ಭೂತ ಎರಗಿತ್ತೋ ಗೊತ್ತಿಲ್ಲ. ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ಚೈತ್ರಾಗೌಡ ನೇಣಿಗೆ ಕೊರಳೊಡ್ಡಿ ಜೀವನಯಾತ್ರೆಗೆ ಅಂತ್ಯ ಹಾಡಿದ್ದಾರೆ.

ಚೈತ್ರಾಗೌಡ ಫ್ಯಾನ್​ನಲ್ಲಿ ನೇತಾಡ್ತಿರೋದು ಕಂಡು ಶಾಕ್

ದುರಂತ ಏನಂದ್ರೆ ಮೊನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಚೈತ್ರಾ ಪತಿ ಶಿವಕುಮಾರ್ ಜೊತೆ ಫೋನ್​ನಲ್ಲಿ ಮಾತಾಡಿದ್ದಾರೆ. ಬಳಿಕ 11 ಗಂಟೆ ಸುಮಾರಿಗೆ ಚೈತ್ರಾ ಅವರ ತಮ್ಮ ಕರೆದಾಗ ಚೈತ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏನಾಯ್ತು ಅಂತ ನೋಡಿದಾಗ ಚೈತ್ರಾ ತಮ್ಮನಿಗೆ ಶಾಕ್ ಆಗಿದೆ. ಮನೆಯ ಕಿಟಕಿಯಲ್ಲಿ ಚೈತ್ರಾಗೌಡ ಫ್ಯಾನ್​ನಲ್ಲಿ ನೇತಾಡ್ತೊರುವ ದೃಶ್ಯ ಕಾಣಿಸಿದೆ. ಹೀಗಾಗಿ ಈ ಒಂದು ಗಂಟೆಯಲ್ಲಿ ಏನಾಯ್ತು ಅನ್ನೋದೆ ಈಗ ನಿಗೂಢವಾಗಿ ಉಳಿದಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಸೇರಿ ರಾಜ್ಯದಲ್ಲಿ ಭಾರೀ ಮಳೆ.. 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.. ಎಲ್ಲೆಲ್ಲಿ, ಏನೇನು ಆಗಿದೆ?

ಈ ಮಧ್ಯೆ ಚೈತ್ರಾ ಡೆತ್ ನೋಟ್ ಹಾಗೂ ಮೊಬೈಲ್ ಸೀಜ್ ಮಾಡಿರೋ ಸಂಜಯನಗರ ಪೊಲೀಸರು, ಚೈತ್ರಾ ಕಾಲ್ ಡಿಟೇಲ್ಸ್, ವಾಟ್ಸಪ್ ಚಾಟ್​ಗಳನ್ನ ಸಹ ಪರಿಶೀಲನೆ ನಡೆಸ್ತಿದ್ದಾರೆ. ಮೆಲ್ನೋಟಕ್ಕೆ ಸೂಸೈಡ್ ಅಂತ ಕಂಡು ಬಂದ್ರೂ ಸೀಜ್ ಆಗಿರೋ ಮೊಬೈಲ್ ನಲ್ಲಿ ಚೈತ್ರಾ ಸಾವಿನ ಸತ್ಯ ಅಡಗಿದ್ಯಾ ಅನ್ನೋ ಅನುಮಾನವೂ ವ್ಯಕ್ತವಾಗಿದೆ.

ಚೈತ್ರಾ ಆತ್ಮಹತ್ಯೆ ಬಗ್ಗೆ ಅನುಮಾನ.. ವಕೀಲರಿಂದ ಕಮಿಷನರ್​ಗೆ ಪತ್ರ

ಇನ್ನು, ಚೈತ್ರಾ ಸಾವು ಜೊತೆಯಲ್ಲಿ ಕೆಲಸ ಮಾಡ್ತಿದ್ದ ಸಹ ವಕೀಲರಿಗೂ ಶಾಕ್​ಗೆ ಒಳಗಾಗುವಂತೆ ಮಾಡಿದೆ. ಆಕೆಯ ಸಾವಿಗೆ ನ್ಯಾಯ ಸಿಗಬೇಕು. ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಅಂತ ಬೆಂಗಳೂರು ವಕೀಲರ ಸಂಘ ಪೊಲೀಸ್ ಕಮಿಷನರ್ ಹಾಗೂ ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ನಟ‌ ಚೇತನ್​ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.. ಸಿನಿಮಾ ಸ್ಟೈಲ್​ನಲ್ಲಿ ರಾಬರಿ.. ಅಸಲಿಗೆ ಆಗಿದ್ದೇನು..?

ಅದು ಯಾವ ರೀತಿಯಲ್ಲಿ ಸಾವಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಮೃತಪಟ್ಟ ಚೈತ್ರಾ ಅವರಿಗೆ ನ್ಯಾಯ ಒದಗಿಸಿಕೊಡಬೇಕು. ಅವರ ಆತ್ಮಕ್ಕೆ ಶಾಂತಿ ಒದಗಿಸಿಕೊಡಬೇಕು.

ನಾರಾಯಣಸ್ವಾಮಿ, ಚೈತ್ರಾ ಗೌಡ ಸಹೋದ್ಯೋಗಿ

ಅದೇನೆ ಹೇಳಿ, ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿರೋ ಪೊಲೀಸರು ಸಾವಿನ ಅಸಲಿ ಸತ್ಯ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಆದ್ರೆ ಹೈಕೋರ್ಟ್ ಅಡ್ವೋಕೇಟ್‌ ಚೈತ್ರಾರ ಸಾವಿನ ಸುತ್ತ ಹುಟ್ಟಿಕೊಂಡಿರುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಪೊಲೀಸರ ತನಿಖೆ ಬಳಿಕವಷ್ಟೆ ಚೈತ್ರಾ ಸಾವಿನ ರಹಸ್ಯ ಏನೂ ಅನ್ನೋದು ರಿವೀಲ್ ಆಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ 1 ಗಂಟೆಯಲ್ಲಿ ಆಗಿದ್ದೇನು..? ಫೋನ್‌ನಲ್ಲಿ​​ ಅಡಗಿದ್ಯಾ ಅಡ್ವೋಕೇಟ್ ಚೈತ್ರಾ ಸಾವಿನ ರಹಸ್ಯ?

https://newsfirstlive.com/wp-content/uploads/2024/05/CHAITRA_VAKILE.jpg

Load More