5 ಸಾವಿರ ಕೈದಿಗಳು ಮನೆ ಊಟ ಕೇಳಿದ್ರೆ ಏನ್ ಮಾಡೋದು; ಹೈಕೋರ್ಟ್‌ನಲ್ಲಿ ದರ್ಶನ್‌ಗೆ ಬಿಗ್‌ಶಾಕ್‌!

author-image
admin
Updated On
ದರ್ಶನ್ ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ.. ಅದಕ್ಕೆ ಪೊಲೀಸರು ಏನ್ ಮಾಡಿದ್ದಾರೆ ಗೊತ್ತಾ?
Advertisment
  • ಆಹಾರ ಮೂಲಭೂತ ಹಕ್ಕು.. ಮನೆ ಊಟ ಮೂಲಭೂತ ಹಕ್ಕಾ?
  • ಮ್ಯಾಜಿಸ್ಟ್ರೇಟ್ ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡಲಿ
  • ನಾಳೆ ದರ್ಶನ್ ಪರ ವಕೀಲರಿಗೆ ಪಿಟಿಷನ್ ಸಲ್ಲಿಸಲು ಸೂಚನೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ನಟ ದರ್ಶನ್‌ಗೆ ಇಂದು ಮತ್ತೆ ನಿರಾಸೆಯಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ದರ್ಶನ್ ಅವರಿಗೆ ಮನೆ ಊಟ, ಹಾಸಿಗೆ, ಪುಸ್ತಕಕ್ಕೆ ಮನವಿ ಮಾಡಿದ್ದ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ಆಹಾರ ಮೂಲಭೂತ ಹಕ್ಕು. ಆದರೆ ಮನೆ ಊಟ ಮೂಲಭೂತ ಹಕ್ಕು ಅಂತ ಏನಿಲ್ಲ. ಜೈಲಿನ 5 ಸಾವಿರ ಕೈದಿಗಳು ನಾಳೆ ಮನೆ ಊಟ ಕೇಳಿದ್ರೆ ಏನ್ ಮಾಡೋದು ಎಂದು ಸರ್ಕಾರದ ಪರ ಎಎಜಿ ವಿ.ಜಿ ಭಾನುಪ್ರಕಾಶ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: BREAKING: ಜೈಲಲ್ಲಿರುವ ದರ್ಶನ್‌ಗೆ ಇವತ್ತು ಡಬಲ್ ಶಾಕ್; ಏನಾಯ್ತು? 

ನಿನ್ನೆಯೇ ಈ ಅರ್ಜಿ ವಿಚಾರಣೆಯಲ್ಲಿ ಹೈಕೋರ್ಟ್ ನ್ಯಾಯಪೀಠ ಎರಡು ಕಡೆಯ ಲಿಖಿತ ಪ್ರಾವಿಷನ್ ಪಡೆದಿತ್ತು. ಅರ್ಜಿಯಲ್ಲಿ ಕಾನೂನಿನ ಅವಕಾಶಗಳ ಪರಿಶೀಲನೆ ಮಾಡುವುದಾಗಿ ಹೇಳಿತ್ತು. ಇಂದು ಮಧ್ಯಾಹ್ನ ವಿಚಾರಣೆ ಮಾಡಲಾಗಿದ್ದು, ದರ್ಶನ್ ಪರ ಹಿರಿಯ ವಕೀಲರಾದ ಫಣೀಂದ್ರ ವಾದ ಮಾಡಿದ್ರೆ, ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಹಾಜರಿದ್ದರು.

ಇದನ್ನೂ ಓದಿ: ಜೈಲೂಟ ಸೇರ್ತಿಲ್ಲ, ಚಾಪೆ ಮೇಲೆ ಮಲಗಕ್ಕಾಗ್ತಿಲ್ಲ ಎಂದ ನಟ ದರ್ಶನ್​​.. ಬಿಗ್​ ಶಾಕ್​ ಕೊಟ್ಟ ಕೋರ್ಟ್​​! 

ವಾದ ಆಲಿಸಿದ ಹೈಕೋರ್ಟ್ ಜಡ್ಜ್‌, ನಾಳೆ ನೀವು ಮ್ಯಾಜಿಸ್ಟ್ರೇಟ್ ಮುಂದೆ ಮನೆ ಊಟದ ಬೇಡಿಕೆಯ ಕೇಸ್ ಫೈಲ್ ಮಾಡಿ. ಪ್ರಾವಿಷನ್ಸ್ ಬಗ್ಗೆ ನೀವು ಸಲ್ಲಿಕೆ ಮಾಡಿ. ಅದಕ್ಕೆ ಸರ್ಕಾರ ಆಕ್ಷೇಪಣೆ ಸಲ್ಲಿಕೆ ಮಾಡಲಿ. ಮ್ಯಾಜಿಸ್ಟ್ರೇಟ್ ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡಲಿ ಎಂದಿದೆ.

publive-image

ದರ್ಶನ್ ಪ್ರಕರಣ ಈಗಾಗಲೇ ಆಗಸ್ಟ್‌ 1ಕ್ಕೆ ನಿಗದಿಯಾಗಿದೆ. ನಾಳೆ ದರ್ಶನ್ ಪರ ವಕೀಲರಿಗೆ ಪಿಟಿಷನ್ ಸಲ್ಲಿಸಲು ಸೂಚನೆ ನೀಡಲಾಗಿದೆ. ಸರ್ಕಾರವೂ ಅದಕ್ಕೆ ಆಕ್ಷೇಪಣೆ ಸಲ್ಲಿಕೆ ಮಾಡಲಿ. ಇದೇ ಜುಲೈ 27ರ ಒಳಗೆ ಮ್ಯಾಜಿಸ್ಟ್ರೇಟ್ ನಿರ್ಧಾರ ಮಾಡಲಿ‌ ಎಂದು ಜಡ್ಜ್ ಎಸ್. ಆರ್ ಕೃಷ್ಣ ಕುಮಾರ್ ನಿರ್ದೇಶನ ನೀಡಿ ಅರ್ಜಿಯ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿಕೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment