newsfirstkannada.com

ಅಕ್ಬರ್ ಸಿಂಹದ ಜೊತೆ ಸೀತಾ ಯಾಕೆ? ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಸೂಚನೆ

Share :

Published February 22, 2024 at 8:04pm

Update February 22, 2024 at 7:58pm

    ಸಿಂಹಗಳಿಗೆ ಅಕ್ಬರ್, ಸೀತಾ ಹೆಸರಿಟ್ಟ ವಿವಾದ ಸೃಷ್ಟಿಸಿದ್ದು ಯಾಕೆ?

    ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಿಂದ ಖಡಕ್ ಪ್ರಶ್ನೆ

    ಮುಸ್ಲಿಂ ಧರ್ಮ ಗುರು, ಕ್ರಿಶ್ಚಿಯನ್ ಧರ್ಮಗುರುಗಳ ಹೆಸರು ಇಡ್ತೀರಾ?

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಿಂಹಗಳಿಗೆ ಅಕ್ಬರ್, ಸೀತಾ ಹೆಸರಿಟ್ಟ ವಿವಾದಕ್ಕೆ ಕೊಲ್ಕತ್ತಾ ಹೈಕೋರ್ಟ್‌ ಗರಂ ಆಗಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಸಿಂಹಗಳಿಗೆ ಅಕ್ಬರ್, ಸೀತಾ ಎಂದು ಹೆಸರಿಟ್ಟಿದ್ದು ಏಕೆ? ವಿವಾದ ಮಾಡಿಕೊಂಡಿದ್ದು ಏಕೆ? ಸಿಂಹಗಳ ಹೆಸರನ್ನು ಮರು ನಾಮಕರಣ ಮಾಡೋದನ್ನು ಪರಿಗಣಿಸಿ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ ಸಿಂಹಗಳಿಗೆ ಅಕ್ಬರ್, ಸೀತಾ ಹೆಸರಿಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ವಿಶ್ವ ಹಿಂದೂ ಪರಿಷತ್ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್‌, ಜನರು ಗೌರವಿಸುವ, ಪೂಜಿಸುವ ವ್ಯಕ್ತಿ, ಧರ್ಮ ಗುರುಗಳ ಹೆಸರನ್ನು ಸಿಂಹಗಳಿಗೆ ಇಡುತ್ತೀರಾ? ಹಿಂದೂ ದೇವರು, ಮುಸ್ಲಿಂ ಧರ್ಮ ಗುರು, ಕ್ರಿಶ್ಚಿಯನ್ ಧರ್ಮಗುರುಗಳ ಹೆಸರು ಇಡ್ತೀರಾ? ಇದು ಕಲ್ಯಾಣ ರಾಜ್ಯ. ಜಾತ್ಯಾತೀತ ರಾಜ್ಯ. ಈ ವಿವಾದವನ್ನು ತಪ್ಪಿಸಬಹುದಿತ್ತು. ಸೀತಾ ಮಾತ್ರವಲ್ಲ, ಸಿಂಹಕ್ಕೆ ಅಕ್ಬರ್ ಹೆಸರಿಟ್ಟಿದ್ದು ಏಕೆ? ಎಂದು ಸರ್ಕಾರವನ್ನು ಪ್ರಶ್ನಿಸಿದೆ.

ಇದನ್ನೂ ಓದಿ: VIDEO: 10 ವರ್ಷ ಸಾಕಿ ಬೆಳೆಸಿದ ಮೃಗಾಲಯ ಸಿಬ್ಬಂದಿಯನ್ನೇ ಬಲಿ ಪಡೆದ ಸಿಂಹ; ಕಾರಣವೇನು?

ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲ ಅಡಿಷನಲ್ ಅಡ್ವೋಕೇಟ್ ಜನರಲ್, ಸಿಂಹಗಳಿಗೆ ತ್ರಿಪುರ ರಾಜ್ಯದಲ್ಲಿ ಹೆಸರು ಇಡಲಾಗಿತ್ತು. ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಈಗಾಗಲೇ ಸಿಂಹಗಳ ಹೆಸರು ಬದಲಾವಣೆ ಪರಿಗಣಿಸಿದೆ ಎಂದಿದ್ದಾರೆ. ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಮಾರ್ಪಡಿಸಲು ಹೈಕೋರ್ಟ್‌ ಸೂಚನೆ ನೀಡಿದೆ. ಸಿಂಹಗಳಿಗೆ ಅಕ್ಬರ್, ಸೀತಾ ಹೆಸರಿಟ್ಟ ವಿವಾದ ಹೈಕೋರ್ಟ್ ಮಧ್ಯಪ್ರವೇಶದಿಂದ ಬಗೆಹರಿದಿದ್ದು, ಪಶ್ಚಿಮ ಬಂಗಾಳ ಸರ್ಕಾರ ಸಿಂಹ ಹಾಗೂ ಸಿಂಹಣಿಗೆ ಮರುನಾಮಕರಣ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಬರ್ ಸಿಂಹದ ಜೊತೆ ಸೀತಾ ಯಾಕೆ? ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಸೂಚನೆ

https://newsfirstlive.com/wp-content/uploads/2024/02/BENGAL_LIONS.jpg

Load More