newsfirstkannada.com

ಜೈಲಿನಲ್ಲಿ ಗರ್ಭಿಣಿಯಾಗುತ್ತಿರುವ ಮಹಿಳಾ ಕೈದಿಗಳು; ಪುರುಷರ ಪ್ರವೇಶ ನಿಷೇಧಿಸಿ ಹೈಕೋರ್ಟ್ ಆದೇಶ

Share :

Published February 8, 2024 at 1:16pm

    ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿರುವ ಆಘಾತಕಾರಿ ಸುದ್ದಿ

    ಜೈಲಿನಲ್ಲಿ ಇದುವರೆಗೆ 196 ಮಕ್ಕಳು ಹುಟ್ಟಿರೋ ಮಾಹಿತಿ ಬಹಿರಂಗ

    ಇದು ಕ್ರಿಮಿನಲ್ ಪ್ರಕರಣ ಎಂದು ವಿಚಾರಣೆ ನಡೆಸಿದ ಹೈಕೋರ್ಟ್

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿರುವ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಜೈಲಿನಲ್ಲಿದ್ದಾಗ ಕೈದಿಗಳು ಗರ್ಭಿಣಿಯರಾದ ಬಗ್ಗೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ. ಆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.

ಪಿಐಎಲ್ ಅರ್ಜಿ ವಿಚಾರಣೆಯಲ್ಲಿ ವಾದ ಮಂಡಿಸಿದ ವಕೀಲರು, ನಾನು ಇತ್ತೀಚೆಗೆ ಒಂದು ಜೈಲಿಗೆ ಭೇಟಿ ನೀಡಿದ್ದೆ. ಜೈಲಿನಲ್ಲಿ 15 ಮಂದಿ ಗರ್ಭಿಣಿಯರು ಇದ್ದರು. ಜೈಲಿನಲ್ಲಿ ಇದುವರೆಗೆ 196 ಮಕ್ಕಳು ಹುಟ್ಟಿವೆ ಅನ್ನೋ ಆಘಾತಕಾರಿ ಅಂಶ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಡೆಂಗ್ಯೂಗೆ ಮೊದಲ ಬಲಿ.. 18 ವರ್ಷದ ಕಾಲೇಜು ವಿದ್ಯಾರ್ಥಿನಿ ಸಾವು

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಮ್ಮ ಗಮನಕ್ಕೆ ತಂದಿರುವ ಈ ವಿಷಯ ಬಹಳ ಗಂಭೀರವಾದದ್ದು. ಇದೊಂದು ಕ್ರಿಮಿನಲ್ ಪ್ರಕರಣವಾಗಿದೆ. ಹೀಗಾಗಿ ಸುಧಾರಣಾ ಗೃಹಗಳಿಗೆ ಪುರುಷ ಉದ್ಯೋಗಿಗಳ ಪ್ರವೇಶ ಸಂಪೂರ್ಣ ನಿಷೇಧಿಸಿ ಆದೇಶ ನೀಡಿದೆ. ಜೈಲು ಸುಧಾರಣೆ ಕೋರಿದ್ದ PIL ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಲ್ಲಿ ಗರ್ಭಿಣಿಯಾಗುತ್ತಿರುವ ಮಹಿಳಾ ಕೈದಿಗಳು; ಪುರುಷರ ಪ್ರವೇಶ ನಿಷೇಧಿಸಿ ಹೈಕೋರ್ಟ್ ಆದೇಶ

https://newsfirstlive.com/wp-content/uploads/2024/01/Pregnant-womens.jpg

Load More