/newsfirstlive-kannada/media/post_attachments/wp-content/uploads/2024/12/Actor-Dharma-Gold-Case.jpg)
ಬೆಂಗಳೂರು: ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 14 ಕೆಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಆರೋಪಿ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಹರೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
9 ಕೋಟಿ ಚಿನ್ನ ವಂಚನೆಯ ಆರೋಪಿ ಐಶ್ವರ್ಯಾ ಗೌಡ, ಪತಿ ಹರೀಶ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇಬ್ಬರನ್ನು ಬಿಡುಗಡೆ ಮಾಡಲು ಆದೇಶ ನೀಡಿದೆ. ಪೊಲೀಸರು ಬಂಧನಕ್ಕೆ ಕಾರಣ ತಿಳಿಸದೆ ಬಂಧಿಸಿರುವುದರಿಂದ ಈಗ ಬಿಡುಗಡೆ ಮಾಡಲು ಸೂಚನೆ ನೀಡಿದೆ.
ಇದನ್ನೂ ಓದಿ: 14 kg ಚಿನ್ನ ವಂಚಿಸಿದ ‘ಬಂಗಾರಿ’ ಕೇಸ್‌ಗೆ ಹೊಸ ಟ್ವಿಸ್ಟ್.. ಐಶ್ವರ್ಯಾ ಗೌಡ ಬಂಧನ; ಆಗಿದ್ದೇನು?
ಆರೋಪಿ ಪರ ವಕೀಲ ಸಂದೇಶ್ ಚೌಟ ಅವರು ಹಾಗೆ ಮಾಡಲಾಗದು. ತಕ್ಷಣವನ್ನು ಅವರನ್ನು ಬಿಡುಗಡೆ ಮಾಡಬೇಕು ಎಂದು ವಾದಿಸಿದರು. ಆದರೆ ನ್ಯಾಯಾಲಯ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಹರೀಶ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದ್ದು, ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ಅರ್ಜಿದಾರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತನಿಖಾಧಿಕಾರಿ ಶೋಧ ನಡೆಸಬಹುದಾಗಿದೆ. ತನಿಖೆ ಮುಂದುವರಿಯಲಿದೆ ಎಂದಿದೆ.
ಐಶ್ವರ್ಯಾಗೆ ಹೈಕೋರ್ಟ್ ಬಿಗ್ ಶಾಕ್!
ಬಿಡುಗಡೆಯ ಆದೇಶದ ಜೊತೆಗೆ ಹೈಕೋರ್ಟ್ ಆರೋಪಿ ಐಶ್ವರ್ಯಾ ಗೌಡ ಅವರಿಗೆ ಬಿಗ್ ಶಾಕ್ ನೀಡಿದೆ. ಹೊಸದಾಗಿ ಬಂಧನಕ್ಕೆ ಕಾರಣ ತಿಳಿಸಿ, ಹೊಸದಾಗಿ ಬಂಧನ ಪ್ರಕ್ರಿಯೆ ನಡೆಸಲು ಪೊಲೀಸರಿಗೆ ಆದೇಶಿಸಿದೆ.
ಅರ್ಜಿದಾರರ ಬಂಧನದ ಆಧಾರವನ್ನು ಲಿಖಿತವಾಗಿ ತನಿಖಾಧಿಕಾರಿ ನೀಡಲಾಗಿಲ್ಲ. ಹೀಗಾಗಿ ಹೊಸದಾಗಿ ಬಂಧನ ಪ್ರಕ್ರಿಯೆ ನಡೆಸಲು ಸೂಚಿಸುತ್ತೇನೆ. ಮತ್ತೆ ಹೊಸದಾಗಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೆ ಕಾರಣ, ಆಧಾರ ನೀಡಿ ಹೊಸದಾಗಿ ಬಂಧಿಸಬಹುದು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ