Advertisment

NTI ಸೊಸೈಟಿ ವಂಚನೆ ಕೇಸ್‌.. ಬಿಡಿಎ ಮೇಲೆ ಹೈಕೋರ್ಟ್‌ ಫುಲ್‌ ಗರಂ; ನ್ಯೂಸ್ ಫಸ್ಟ್ ಬಿಗ್ ಇಂಪ್ಯಾಕ್ಟ್!

author-image
admin
Updated On
ವಿವಾಹೇತರ ಸಂಬಂಧ ಹೊಂದಿರೋ ಹೆಂಡತಿಗೆ ಗಂಡ ಜೀವನಾಂಶ ನೀಡಬೇಕಿಲ್ಲ- ಹೈಕೋರ್ಟ್​​
Advertisment
  • NTI ಸೊಸೈಟಿಯಿಂದ ಹಿರಿಯ ಸದಸ್ಯರಿಗೆ ಸೈಟ್ ಕೊಡದೇ ವಂಚನೆ
  • ಬಿಡಿಎ ಅಧಿಕಾರಿಗಳನ್ನು ಒಮ್ಮೆ ಜೈಲಿಗೆ ಕಳುಹಿಸಿದ್ರೆ ಗೊತ್ತಾಗುತ್ತೆ ಎಚ್ಚರ
  • ಹೈಕೋರ್ಟ್ ಮುಖ್ಯ ಪೀಠದ ಆದೇಶ ಪಾಲನೆ ಮಾಡದ ಬಿಡಿಎಗೆ ತರಾಟೆ

ಬೆಂಗಳೂರು: NTI ಸೊಸೈಟಿಯಿಂದ ಸದಸ್ಯರಿಗೆ ವಂಚನೆ ಆರೋಪ ಪ್ರಕರಣದಲ್ಲಿ ಬಿಡಿಎ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಫುಲ್‌ ಗರಂ ಆಗಿದೆ. ಹೈಕೋರ್ಟ್ ಮುಖ್ಯ ಪೀಠದ ಆದೇಶ ಪಾಲನೆ ಮಾಡದ ಬಿಡಿಎ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳಲಾಗಿದ್ದು, ಎರಡು ದಿನಗಳಲ್ಲಿ ಹೈಕೋರ್ಟ್ ಆದೇಶ ಪಾಲನೆಗೆ ಖಡಕ್ ಸೂಚನೆ ನೀಡಿದೆ.

Advertisment

NTI ಸೊಸೈಟಿಯಿಂದ ಹಿರಿಯ ಸದಸ್ಯರಿಗೆ ಸೈಟ್ ಕೊಡದೇ ವಂಚಿಸಿದ ಆರೋಪ ಕೇಳಿ ಬಂದಿತ್ತು. ನ್ಯೂಸ್ ಫಸ್ಟ್ ಚಾನೆಲ್ ಈ ಪ್ರಕರಣದ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಆಡಳಿತ ಮಂಡಳಿ ತನ್ನ ಕುಟುಂಬದವರ ಹೆಸರಲ್ಲಿ ಸೈಟ್ ಮಾಡಿಕೊಂಡಿದೆ ಎನ್ನಲಾಗಿದೆ. ಹೈಕೋರ್ಟ್‌ ಸಿಜೆ ಎನ್‌.ವಿ ಅಂಜಾರಿಯಾ & ನ್ಯಾ. ಕೃಷ್ಣ ಎಸ್‌.ದೀಕ್ಷಿತ್‌ ಪೀಠ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲ ಬಿ.ಎನ್ ಸುರೇಶ್ ಬಾಬು ಹಾಜರಾಗಿದ್ದರು. NTI ಸೊಸೈಟಿ ವಂಚನೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಅಧಿಕಾರಿಗಳನ್ನು ಒಮ್ಮೆ ಜೈಲಿಗೆ ಕಳುಹಿಸಿದ್ರೆ ಗೊತ್ತಾಗುತ್ತೆ ಎಚ್ಚರ. ಸೂಕ್ತ ಕ್ರಮದ ವರದಿ ಜೊತೆ ಹಾಜರಾಗಲು ಬಿಡಿಎಗೆ ಸೂಚನೆ ನೀಡಿದ್ದು, ಅರ್ಜಿ ವಿಚಾರಣೆಯನ್ನು ಇದೇ ಮಾರ್ಚ್‌ 28ಕ್ಕೆ ಮುಂದೂಡಲಾಗಿದೆ.

publive-image

ಹೈಕೋರ್ಟ್ ಹಿಂದಿನ ಆದೇಶ:
2023ರ ಜುಲೈ 28ರಂದು ಹೈಕೋರ್ಟ್ ಮುಖ್ಯ ಪೀಠ NTI ಸೊಸೈಟಿ ವಂಚನೆ ಪ್ರಕರಣದಲ್ಲಿ ಸೂಕ್ತ ಕ್ರಮ ತೆಗೆದುಕೊಂಡು ವರದಿ ನೀಡಲು ಹೇಳಿತ್ತು. ಅರ್ಜಿದಾರರು ಕೊಟ್ಟ ಮನವಿಯನ್ನು ಪರಿಶೀಲನೆ ನಡೆಸಬೇಕು. ಜೊತೆಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡಲು ಸೂಚಿಸಿತ್ತು. ಆದರೆ ಬಿಡಿಎ ಅಧಿಕಾರಿಗಳು ಕಳೆದ ವರ್ಷದ ಜುಲೈನಿಂದ ಯಾವುದೇ ಕ್ರಮ ಕೈಗೊಂಡಿಲ್ಲ.

Advertisment

ಇಂದು ಹೈಕೋರ್ಟ್ ಪ್ರಶ್ನೆ
ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ, ಕೋರ್ಟ್ ಆದೇಶದಂತೆ ಯಾವ ಕ್ರಮ ತೆಗೆದುಕೊಂಡಿದ್ದೀರಾ? ಅದರ ಪ್ರಕ್ರಿಯೆಯ ಸಂಪೂರ್ಣ ವರದಿ ನೀಡಲು ಕೇಳಿದೆ. ನಾವು ಹೋಗಿ ಜನರಿಗೆ ಎಲ್ಲಾ ಸ್ಟೋರಿ ಹೇಳಲು ಆಗಲ್ಲ. ಅವರು ಎಷ್ಟು ಬಾರಿ ಕೋರ್ಟ್‌ಗೆ ಪದೇ ಪದೇ ಬರಬೇಕು ಹೇಳಿ. ಅವರು ನಿತ್ಯ ಅವರ ತುಂಬಾ ಕೆಲಸವನ್ನು ಮಾಡಿಕೊಳ್ಳಬೇಕಿದೆ ಎಂದು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರು ಬಿಡಿಎ ವಕೀಲ ಬಿ. ವಚನ್‌ ಅವರನ್ನ ಪ್ರಶ್ನಿಸಿದ್ದಾರೆ.

ಬಿಡಿಎ ವಕೀಲರ ಉತ್ತರ:
ಹೈಕೋರ್ಟ್ ವಿಚಾರಣೆ ವೇಳೆ ಬಿಡಿಎ ಪರ ವಕೀಲರು ತೆಗೆದುಕೊಂಡ ಕ್ರಮದ ವರದಿ ನೀಡಲು ಟೈಂ ಕೇಳಿದರು. ಇದಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಮತ್ತಷ್ಟು ತರಾಟೆ ತೆಗೆದುಕೊಂಡಿದೆ. ಏನ್ರಿ ನಿಮ್ಮ ಅಧಿಕಾರಿಗಳ ಈ ದೀವ್ಯವಾದ ನಿರ್ಲಕ್ಷ್ಯತನ. ಒಬ್ಬರನ್ನು ನಾವು ಒಮ್ಮೆ ಜೈಲಿಗೆ ಕಳುಹಿಸಿದ್ರೆ ನಿಮಗೆ ಗೊತ್ತಾಗುತ್ತೆ. ನ್ಯಾಯಾಂಗ ನಿಂದನೆ ಆಗಿದ್ರೂ ಅದನ್ನು ಮುಂದುವರಿಕೆ ಮಾಡ್ತಿರಾ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಸೋನು ಗೌಡ ಜೈಲು ಪಾಲು.. ಅಕ್ರಮವಾಗಿ ಮಗು ದತ್ತು ಪಡೆದ ಕೇಸ್‌ನಲ್ಲಿ ಕೋರ್ಟ್‌ ಮಹತ್ವದ ಆದೇಶ

Advertisment

ಅರ್ಜಿದಾರರ ಪರ ವಕೀಲರ ಮಾಹಿತಿ:
ಅರ್ಜಿದಾರರ ಪರ ವಕೀಲರು ಸ್ವಾಮಿ ನಾವು ಈಗಾಗಲೇ ಬಿಡಿಎಗೆ ರೆಪ್ರಸೆಂಟೇಷನ್ ಕೊಟ್ಟಿದ್ದೇವೆ. ಒತ್ತುವರಿದಾರರು ಆ ಜಾಗದ ಲಾಭವನ್ನು ಪಡೆದುಕೊಳ್ತಿದ್ದಾರೆ. 400 ಕೋಟಿ ಬೆಲೆ ಬಾಳುವ ಜಾಗದಲ್ಲಿ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಸುರೇಶ್ ಬಾಬು ಹೇಳಿದರು.

ಬಿಡಿಎ ವಕೀಲರ ಮನವಿ:
ಕೊನೆಗೆ ಬಿಡಿಎ ಪರ ವಕೀಲರು ವಚನ್ ಬಿ ಅವರು ಸ್ವಾಮಿ ಇದೊಂದು ಬಾರಿ ಟೈಂ ನೀಡಿ ಮತ್ತೆ ನಿಮ್ಮ ಬಳಿ ಕೇಳಲ್ಲ. ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಸಲ್ಲಿಕೆ ಮಾಡುತ್ತೇನೆ ಎಂದು ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ಹೈಕೋರ್ಟ್ ಮುಖ್ಯ ಪೀಠ, ವಾರದ ಬದಲಿಗೆ 2 ದಿನಗಳ ಕಾಲ ಟೈಂ ನೀಡದೆ. ಈ ಅರ್ಜಿ ವಿಚಾರಣೆಯನ್ನು ಮಾರ್ಚ್‌ 28ಕ್ಕೆ ಮುಂದೂಡಿಕೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment